ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯಾಗಿದ್ದ ಸುಬ್ಬರಾಯನಕೆರೆಯ ಜಾಗದಲ್ಲಿ ನಿರ್ಮಾಣವಾಗಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನ ದುಸ್ಥಿತಿಯತ್ತ ಸಾಗಿದೆ.
ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಉದ್ಯಾನವನದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುತ್ತಿದ್ದು, ರಸ್ತೆ ಕಾಮಗಾರಿ ಸಂದರ್ಭದಲ್ಲಿ ತೆರವಾಗುವ ಕಲ್ಲು,ಮಣ್ಣನ್ನು ಸುರಿಯುವ ತಾಣವಾಗಿ ಮಾರ್ಪಟ್ಟಿದೆ.
ಉದ್ಯಾನದ ಅಕ್ಕಪಕ್ಕದ ನಿವಾಸಿಗಳು ಪ್ರತಿನಿತ್ಯ ಕಸವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಕಟ್ಟಿ ಉದ್ಯಾನದೊಳಗೆ ಎಸೆಯುತ್ತಿರುವುದರಿಂದ ಉದ್ಯಾನವನವೋ ಅಥವಾ ಕಸ ಸುರಿಯುವ ತಾಣವೋ ಎಂಬ ಅನುಮಾನ ಮೂಡುತ್ತಿದೆ.
ಪಾರ್ಕ್‌ನಲ್ಲಿರುವ ಕಾರಂಜಿಗಳು ಹಾಳಾಗಿವೆ. ನೀರು ನಿಂತು ಸೊಳ್ಳೆಗಳು ಹಾಗೂ ನೊಣಗಳ ಹಾವಳಿ ಮಿತಿ ಮೀರಿದೆ. ಪಾರ್ಕ್‌ನಲ್ಲಿ ನಿರ್ಮಿಸಲಾಗಿರುವ ಕುಟೀರಗಳಲ್ಲಿ ನಾಯಿಗಳು ಮಲಗುತ್ತಿದ್ದು, ವಾಯುವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಕಚ್ಚುವ ಭೀತಿಯುಂಟಾಗಿದೆ. ಬ್ಯಾಸ್ಕೆಟ್ ಬಾಲ್ ಕೋರ್ಟ್ ಪಕ್ಕ ಇರುವ ಪ್ರೇಕ್ಷಕರ ಗ್ಯಾಲರಿ ಯಲ್ಲಿ ಮರಗಳ ಬೊಡ್ಡೆಗಳನ್ನು ಎಸೆಯಲಾಗಿದೆ. ಪಾರ್ಕ್‌ನಲ್ಲಿ ಯಥೇಚ್ಛವಾಗಿ ಹುಲ್ಲು ಬೆಳೆದಿರುವುದರಿಂದ ಸ್ಥಳೀಯರು ತಮ್ಮ ದನಕರುಗಳನ್ನು ಇಲ್ಲಿಗೆ ಪ್ರತಿನಿತ್ಯ ಮೇಯಲು ಬಿಡುತ್ತಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಅಽಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಕ್ರಮ ಕೈಗೊಳ್ಳಬೇಕಾಗಿದೆ.
– ಶರತ್, ಮೈಸೂರು





