Mysore
14
broken clouds

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಓದುಗರ ಪತ್ರ | ದ್ವೇಷ ಭಾಷಣ ಮಸೂದೆ: ಸ್ವಾಗತಾರ್ಹ

ಓದುಗರ ಪತ್ರ

ರಾಜ್ಯಸರ್ಕಾರವು ವಿಧಾನಸಭೆಯಲ್ಲಿ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆಗಟ್ಟುವಿಕೆ) ಮಸೂದೆ ೨೦೨೫’ ಅನ್ನು ಮಂಡಿಸಿದೆ. ಈ ಮಸೂದೆ ದ್ವೇಷ ಭಾಷಣ ಅಪರಾಽಗಳಿಗೆ ೧೦ ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ೧ ಲಕ್ಷ ರೂ. ವರೆಗೆ ದಂಡ ವಿಧಿಸಲು ಪ್ರಸ್ತಾಪಿಸಿದೆ. ಅಪರಾಧದ ಗಂಭೀರತೆಗೆ ಅನುಗುಣವಾಗಿ ಸಂತ್ರಸ್ತರಿಗೆ ಪರಿಹಾರ ನೀಡುವ ಅವಕಾಶವೂ ಇದರಲ್ಲಿರುವುದು ಸ್ವಾಗತಾರ್ಹ.

ದ್ವೇಷ ಭಾಷಣವು ವ್ಯಕ್ತಿ, ವ್ಯಕ್ತಿಗಳ ನಡುವೆ, ಜನಾಂಗ ಹಾಗೂ ಧರ್ಮ ಸಮೂಹಗಳ ಮಧ್ಯೆ ಅಸಾಮರಸ್ಯ, ಹಗೆತನ, ದ್ವೇಷ ಅಥವಾ ಕೆಡುಕಿನ ಭಾವನೆಗಳನ್ನು ಮೂಡಿಸಬಹುದು. ದ್ವೇಷ ಭಾಷಣ ಮಾಡುವ ಅಥವಾ ಪ್ರಕಟಿಸುವ, ಅಂತಹ ದ್ವೇಷ ಭಾಷಣವನ್ನು ಪ್ರಚಾರ ಮಾಡುವ, ವ್ಯಾಪಕಗೊಳಿಸುವ, ಪ್ರಚೋದಿಸುವ ಸಂದರ್ಭಗಳು ಕೂಡ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟುಮಾಡುತ್ತಿದೆ. ಆಕ್ರಮಣಕಾರಿ ದ್ವೇಷ ಭಾಷಣವು ಕೇಳುಗರಿಗೆ ನೋವುಂಟು ಮಾಡುತ್ತದೆ. ಸಮಾಜದಲ್ಲಿ ಅಶಾಂತಿ ಮತ್ತು ದ್ವೇಷಕ್ಕೆ ಕಾರಣವಾಗುವ ಭಾಷಣ ಹಾಗೂ ಸಂಬಂಽತ ಅಪರಾಧಗಳ ಪ್ರಸಾರ, ಪ್ರಕಟಣೆ ಅಥವಾ ಪ್ರಚಾರವನ್ನು ತಡೆಯುವುದು ಅವಶ್ಯವಾಗಿದೆ. ಅಲ್ಲದೇ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಪ್ರತಿಯೊಂದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಸರ್ಕಾರವು ದ್ವೇಷ ಭಾಷಣ ಮಸೂದೆಯನ್ನು ಜಾರಿಗೆ ತರಲು ಮುಂದಾಗಿರುವುದು ಪ್ರಸಂಶನೀಯ. ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗಳನ್ನು ನಡೆಸಿದ ನಂತರ ಕಟ್ಟುನಿಟ್ಟಿನ ಕಾಯಿದೆ ಜಾರಿಗೆ ತರುವುದು ಅವಶ್ಯವಾಗಿದೆ. -ಹರಳಹಳ್ಳಿಪುಟ್ಟರಾಜು, ಪಾಂಡವಪುರ

Tags:
error: Content is protected !!