ಮೈಸೂರು ನಗರದ ಪ್ರತಿಯೊಂದೂ ವಾರ್ಡ್‌ನ ಪ್ರತಿ ಮಾರ್ಗದಲ್ಲೂ ಮೈಸೂರು ಮಹಾ ನಗರ ಪಾಲಿಕೆಯಿಂದ ವಾರ್ಡ್ ಸಂಖ್ಯೆ, ವಾರ್ಡ್‌ನ್ನು ಪ್ರತಿನಿಧಿಸುವ ಪಾಲಿಕೆ ಸದಸ್ಯರ ಹೆಸರು ಹಾಗೂ ವಾರ್ಡ್ ಯಾವ ಮತ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೋ ಆ ಶಾಸಕರ ಹೆಸರು ಮೊದಲಾದ ವಿವರಗಳಿರುತ್ತವೆ.
ನಗರದ ಬಹುತೇಕ ವಾರ್ಡ್‌ಗಳಲ್ಲಿ ರಸ್ತೆ ದುರಸ್ತಿ, ಚರಂಡಿ ಕಾಮಗಾರಿ ಸಂದರ್ಭದಲ್ಲಿ ವಾರ್ಡ್‌ನ ಸೂಚನಾ -ಲಕಗಳು ಕೆಳಗೆ ಬಿದ್ದು ಹೋಗಿ ವರ್ಷಗಳೇ ಕಳೆದರೂ ಅದನ್ನು ಸರಿಪಡಿಸುವಲ್ಲಿ ಜನಪ್ರತಿನಿಽಗಳು ಹಾಗೂ ಅಽಕಾರಿಗಳು ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟವರು ಈಗಲಾದರೂ ವಾರ್ಡ್ ಸೂಚನಾ -ಲಕಗಳನ್ನು ಸರಿಪಡಿಸಬೇಕು ಹಾಗೂ ವಾರ್ಡ್ ಪ್ರತಿನಿಽಸುವ ಪಾಲಿಕೆ ಸದಸ್ಯರು ಹಾಗೂ ಆಯಾ ಮತ ಕ್ಷೇತ್ರ ವ್ಯಾಪ್ತಿಯ ಶಾಸಕರ ದೂರವಾಣಿ ಸಂಖ್ಯೆಗಳನ್ನು ಸೂಚನಾ -ಲಕದಲ್ಲ ಅಳವಡಿಸಿದರೆ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಜನ ಪ್ರತಿನಿಽಗಳನ್ನು ಸಂಪರ್ಕಿಸಲು ಅನುಕೂಲವಾಗುತ್ತದೆ. -ನಿಂಗರಾಜು , ಮೈಸೂರು





