Mysore
34
scattered clouds

Social Media

ಮಂಗಳವಾರ, 28 ಏಪ್ರಿಲ 2026
Light
Dark

ಓದುಗರ ಪತ್ರ | ಪರಿಸರ ಸಂರಕ್ಷಣೆ ಅತ್ಯಗತ್ಯ

dgp murder case

ದೇಶದ ಹಲವು ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗ ಹಲವೆಡೆ ಭೂ ಕುಸಿತ, ಜಲಪ್ರಳಯ ಸಂಭವಿಸುತ್ತಿದ್ದು, ಕೇರಳದ ವಯನಾಡು ಜಿಲ್ಲೆಯ ಮೇಪ್ಪಾಡಿ ಪ್ರದೇಶದಲ್ಲಿ ಸಂಭವಿಸಿದ ಜಲಪ್ರಳಯ ನೂರಾರು ಜನರನ್ನು ಬಲಿ ಪಡೆದಿದೆ.

ಈ ಭೀಕರ ಜಲಪ್ರಳಯ ಬೆಟ್ಟಗುಡ್ಡಗಳ ತಪ್ಪಲಿ ನಲ್ಲಿ ವಾಸಿಸುವ ಜನರಲ್ಲಿ ಆತಂಕ ಸೃಷ್ಟಿಸಿದೆ. ಜನರು ಅಭಿವೃದ್ಧಿಯ ಹೆಸರಿನಲ್ಲಿ ಬೆಟ್ಟ ಗುಡ್ಡಗಳನ್ನು ಕೊರೆದು, ಕಾಡುಗಳನ್ನು ನಾಶ ಮಾಡಿ ರಸ್ತೆಗಳು, ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಇದರಿಂದಾಗಿ ಆ ಬೆಟ್ಟ-ಗುಡ್ಡಗಳು ಸಡಿಲಗೊಂಡು ಮಳೆ ಹೆಚ್ಚಾದಾಗ ಭೂ ಕುಸಿತಗಳಾಗುತ್ತಿವೆ.

ನಾವು ಪ್ರಕೃತಿಯನ್ನು ನಾಶ ಮಾಡಿದಷ್ಟೂ ಆಗಾಗ್ಗೆ ಪ್ರಕೃತಿಯೂ ನಮಗೆ ಪಾಠ ಕಲಿಸುತ್ತಲೇ ಇರುತ್ತದೆ. ಇಷ್ಟಿದ್ದರೂ ಮನುಷ್ಯ ಪಾಠ ಕಲಿಯದೆ ಪ್ರಕೃತಿ ಮೇಲಿನ ದಾಳಿಯನ್ನು ಮುಂದುವರಿಸುತ್ತಿದ್ದಾನೆ. ಇನ್ನು ಮುಂದಾದರೂ ಮನುಷ್ಯ ಪರಿಸರ ಸಂರಕ್ಷಿಸುವುದನ್ನು ಕಲಿತು ಪ್ರಕೃತಿ ಸ್ನೇಹಿ ಅಭಿವೃದ್ಧಿ ಕೆಲಸಗಳತ್ತ ಮುಖ ಮಾಡಬೇಕು.

– ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು.

Tags:
error: Content is protected !!