ಗುಂಡ್ಲುಪೇಟೆ-ಮೈಸೂರು ಮಾರ್ಗವಾಗಿ ಸಂಚರಿಸುವ ಕೆಎಸ್ ಆರ್ ಟಿಸಿ ಬಸ್‌ನಲ್ಲಿ ಕಂಡಕ್ಟರ್ ಒಬ್ಬರು ಪ್ರಯಾಣಿಕರು ಚಿಲ್ಲರೆ ನೀಡಿಲ್ಲ ಎಂಬ ಕಾರಣಕ್ಕಾಗಿ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಏಕವಚನದಲ್ಲಿ ನಿಂದಿಸಿದ್ದಲ್ಲದೇ ನಿಮ್ಮಂತಹವರು ಏಕಾಗಿ ಬರುತ್ತೀರಿ, ಬಸ್ಸಿಂದ ಕೆಳ ಗಿಳಿರಿ’ ಎಂದು ಹೇಳಿರುವುದಾಗಿ ವರದಿ ಯಾಗಿದೆ.
ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆ ಕಾಡದಿರಲಿ ಹಾಗೂ ಸುಲಭವಾಗಿ ಹಣ ಪಾವತಿಸಿ ಟಿಕೆಟ್ ಪಡೆದುಕೊಳ್ಳಲಿ ಎಂಬ ಉದ್ದೇಶದಿಂದ ಸರ್ಕಾರ ಎಲ್ಲ ಸರ್ಕಾರಿ ಬಸ್‌ಗಳಲ್ಲಿಯೂ ಆನ್‌ಲೈನ್ ಪೇಮೆಂಟ್‌ಗಾಗಿ ಕ್ಯೂಆರ್ ಕೋಡ್ ಬಳಸುವಂತೆ ನಿರ್ವಾಹಕರಿಗೆ ಸೂಚಿಸಿದೆ. ಆದರೆ ಇದು ನಗರ ಭಾಗಗಳಲ್ಲಿ ಸಂಚರಿಸುವ ಬಸ್‌ಗಳಿಗೆ ಮಾತ್ರ ಸೀಮಿತವಾಗಿದ್ದು, ಗ್ರಾಮೀಣ ಭಾಗದ ಬಸ್‌ಗಳಲ್ಲಿ ಕ್ಯೂಆರ್ ಕೋಡ್ ಬಳಸುತ್ತಿಲ್ಲ. ಇದ ರಿಂದಾಗಿ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆ ಕಾಡುತ್ತಿದ್ದು, ಚಿಲ್ಲರೆ ಕೊಡದ ಪ್ರಯಾಣಿಕರನ್ನು ನಿರ್ವಾಹಕರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ.
ಇತ್ತೀಚೆಗೆ ಕಂಡಕ್ಟರ್‌ಗಳ ವರ್ತನೆ ಮಿತಿ ಮೀರಿದ್ದು, ಸರ್ಕಾರ ಕೂಡಲೇ ಇವರ ವಿರುದ್ಧ ಕ್ರಮಕೈಗೊಳ್ಳಬೇಕು. –ನಾಗೇಶ್, ಮಾನಸಗಂಗೋತ್ರಿ, ಮೈಸೂರು.