ಇತ್ತೀಚಿನ ದಿನಗಳಲ್ಲಿ, ಟೂತ್ ಪೇಸ್ಟ್‌ಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಅಂಶ ಪತ್ತೆಯಾಗಿದ್ದು, ಇದರ ಸೇವನೆಯಿಂದ ಹಲವು ಮಕ್ಕಳು ತೊಂದರೆಗೊಳಗಾಗಿರುವ ಘಟನೆಗಳು ವರದಿಯಾಗಿವೆ. ತಂಬಾಕು ಮತ್ತು ನಿಕೋಟಿನ್ ಅಂಶವನ್ನು ಟೂತ್ ಪೇಸ್ಟ್‌ಗಳಲ್ಲಿ ಸೇರಿಸುವುದರಿಂದ ಮಕ್ಕಳಿಗೆ ದೀರ್ಘಕಾಲಿಕ ದೈಹಿಕ ಸಮಸ್ಯೆಗಳು, ಶಾರೀರಿಕ ಮತ್ತು ಮಾನಸಿಕ ಪರಿಣಾಮಗಳು, ಹೃದಯ ಸಂಬಂಧಿತ ಕಾಯಿಲೆಗಳು, ರಕ್ತದೊತ್ತಡ ಹೆಚ್ಚುವಿಕೆ ಮತ್ತು ಪ್ರಾಣಹಾನಿ ಉಂಟಾಗಬಹುದು ಎಂಬುದು ವರದಿಯಾಗಿದೆ.
ಇದನ್ನೂ ಓದಿ:-ಓದುಗರ ಪತ್ರ | ರಸ್ತೆಯಲ್ಲಿ ವಾಯುವಿಹಾರ ಅಪಾಯಕಾರಿ
ತಂಬಾಕು ಟೂತ್ ಪೇಸ್ಟ್‌ಗಳನ್ನು ನಿಯಂತ್ರಿಸಲು ಸರ್ಕಾರವು ತಕ್ಷಣ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಸಾಧ್ಯವಾದರೆ ತಂಬಾಕು ಮತ್ತು ನಿಕೋಟಿನ್ ಟೂತ್ ಪೇಸ್ಟ್‌ಗಳನ್ನು ನಿಷೇದಿಸಬೇಕು ಇಲ್ಲವಾದಲ್ಲಿ ಕನಿಷ್ಠ ಪಕ್ಷ ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು. ಇಂತಹ ಉತ್ಪನ್ನಗಳನ್ನು ತಯಾರಿಸುವ ಕಂಪೆನಿಗಳಿಗೆ ದಂಡವನ್ನು ವಿಽಸುವ ಮೂಲಕ, ಮಕ್ಕಳ ಆರೋಗ್ಯವನ್ನು ರಕ್ಷಿಸಲು ಮತ್ತು ಸಾರ್ವಜನಿಕ ಜಾಗೃತಿ ಮೂಡಿಸಲು ಪ್ರಯತ್ನಿಸಬೇಕು. -ಡಾ. ಎಚ್. ಕೆ. ವಿಜಯಕುಮಾರ, ಬೆಂಗಳೂರು





