ಚೆನ್ನೈನಲ್ಲಿ ನಡೆದ ಥಗ್‌ಲೈಫ್- ಸಿನಿಮಾ ಈವೆಂಟ್‌ನಲ್ಲಿ ತಮಿಳು ನಟ ಕಮಲ್ ಹಾಸನ್ ಅವರು ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡಿರುವುದು ಖಂಡನೀಯ. ಇದೇ ಸಮಾರಂಭದಲ್ಲಿ ಕನ್ನಡ ನಟ ಶಿವರಾಜ್ ಕುಮಾರ್ ಉಪಸ್ಥಿತರಿದ್ದರೂ ಅವರು ಆ ಸಂದರ್ಭದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದದ್ದು ಬೇಸರ ತಂದಿದೆ. ಕನ್ನಡಪರ ಸಂಘಟನೆಗಳು ಕಮಲ್ ಹಾಸನ್ ಅವರು ತಮ್ಮ ಹೇಳಿಕೆ ಕುರಿತು ಕ್ಷಮೆ ಯಾಚಿಸಬೇಕೆಂದು ಪ್ರತಿಭಟಿಸಿ ಒತ್ತಾಯಿಸಿವೆ. ಇದಕ್ಕೆ ಸ್ಪಷ್ಟೀಕರಣ ನೀಡಿರುವ ಕಮಲ್ ಹಾಸನ್, ನಾನು ಪ್ರೀತಿಯಿಂದ ಹೇಳಿದ್ದೇನೆ. ಪ್ರೀತಿಯಿಂದ ಆಡಿದ ಮಾತಿಗೆ ಕ್ಷಮೆ ಕೇಳುವುದಿಲ್ಲ ಎಂದು ಉದ್ಧಟತನ ತೋರಿದ್ದಾರೆ. ಇಂತಹ ಹೇಳಿಕೆಗಳಿಂದ ರಾಜ್ಯ-ರಾಜ್ಯಗಳ ನಡುವೆ ಇರುವ ಸಾಮರಸ್ಯ ಹಾಳಾಗುತ್ತದೆ.
ನಟ ಕಮಲ್ ಹಾಸನ್ ಅವರು ಕೂಡಲೇ ತಮ್ಮ ಹೇಳಿಕೆ ಕುರಿತು ಕ್ಷಮೆ ಯಾಚಿಸುವ ಮೂಲಕ ವಿವಾದವನ್ನು ಅಂತ್ಯಗೊಳಿಸುವುದು ಅಗತ್ಯ.
-ಎ. ಎಸ್. ಗೋಪಾಲ ಕೃಷ್ಣ, ರಾಮಕೃಷ್ಣನಗರ, ಮೈಸೂರು.





