Mysore
24
clear sky

Social Media

ಗುರುವಾರ, 22 ಜನವರಿ 2026
Light
Dark

ಓದುಗರ ಪತ್ರ | ‘ಆಪರೇಷನ್ ಸಿಂಧೂರ’ ಮಾಹಿತಿಯನ್ನು ಸರ್ಕಾರವೇ ಜನರಿಗೆ ನೀಡಲಿ

ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನ ನೆಲೆಯಲ್ಲಿ ಅಡಗಿರುವ ಉಗ್ರರನ್ನು ಭಾರತದ ಯೋಧರು ಸದೆಬಡಿಯುತ್ತಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನ ಕೂಡ ಭಾರತದ ಗಡಿಪ್ರದೇಶಗಳ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಎರಡೂ ದೇಶಗಳ ನಡುವಿನ ಯುದ್ಧದ ಬಗ್ಗೆ ಜನಸಾಮಾನ್ಯರಿಗೆ ವಾಸ್ತವ ವಿಷಯಗಳು ತಿಳಿಯುವಂತಾಗ ಬೇಕು, ಆದರೆ ಉಭಯ ದೇಶಗಳಲ್ಲಿ ನಡೆಯು ತ್ತಿರುವ ಬೆಳವಣಿಗೆಗಳ ಬಗ್ಗೆ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರ ವಾಗುತ್ತಿರುವ ಸುದ್ದಿಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದೆ.

ಇದನ್ನೂ ಓದಿ:- ಇಂದು ಅರಮನೆ ಅಂಗಳದಲ್ಲಿ ಮಾಕ್‌ಡ್ರಿಲ್‌

ಯುದ್ಧಭೀತಿ ಹಳ್ಳಿಗಳ ಜನರಲ್ಲಿ ಸಹಜವಾಗಿ ಆತಂಕವನ್ನು ಉಂಟು ಮಾಡುತ್ತದೆ. ಪಾಕಿಸ್ತಾನದಲ್ಲಿನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರುವುದಿಲ್ಲ. ಯುದ್ಧ ನಡೆದರೆ ಉಭಯ ದೇಶಗಳಲ್ಲೂ ಸಾವು- ನೋವು ಹೆಚ್ಚಾಗಲಿದೆ. ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ೨೬ ಮಂದಿ ಭಾರತೀಯರನ್ನು ಹತ್ಯೆ ಮಾಡಿರುವ ಬಗ್ಗೆ ಜನರಲ್ಲಿ ಆಕ್ರೋಶ ಇದೆ. ಆ ಭಯೋತ್ಪಾದಕರನ್ನು ಮಟ್ಟಹಾಕಬೇಕೆಂಬ ಕಡುಕೋಪ ಇದೆ. ಅದಕ್ಕಿಂತ ಹೆಚ್ಚಾಗಿ ಅಮಾಯಕ ಜನರ ಪ್ರಾಣಕ್ಕೆ ಸಂಚಕಾರ ಉಂಟಾಗಬಾರದು ಎಂಬ ಆಶಯ ಬಹುತೇಕ ಜನರಲ್ಲಿ ಇದೆ. ಹಾಗಾಗಿ ಭಾರತೀಯ ಸೇನಾಪಡೆಗಳು ನಡೆಸುವ ಕಾರ್ಯಾಚರಣೆಗಳ ಬಗ್ಗೆ ಸರ್ಕಾರವೇ ಜನರಿಗೆ ನೇರವಾಗಿ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸುವುದು ಸೂಕ್ತ.

-ಪ್ರಣವಮೂರ್ತಿ, ಸರಸ್ವತಿಪುರಂ, ಮೈಸೂರು.

Tags:
error: Content is protected !!