Mysore
24
overcast clouds

Social Media

ಮಂಗಳವಾರ, 12 ಮೇ 2026
Light
Dark

ಓದುಗರ ಪತ್ರ | ಬಸ್ ತಂಗುದಾಣಗಳಿಗೆ ಬೆಳಕಿನ ವ್ಯವಸ್ಥೆ ಕಲ್ಪಿಸಿ

ಓದುಗರ ಪತ್ರ

ಮೈಸೂರು ನಗರದಲ್ಲಿರುವ ಸಾರ್ವಜನಿಕ ಬಸ್ ತಂಗುದಾಣಗಳು ಕಳೆದ ಒಂದು ವಾರದಿಂದ ಕತ್ತಲೆಯಲ್ಲಿ ಮುಳುಗಿವೆ. ಮೈಸೂರು ಮಹಾನಗರ ಪಾಲಿಕೆಯವರು ಕಳೆದ ೧೦ ತಿಂಗಳಿನಿಂದ ವಿದ್ಯುತ್ ಬಿಲ್ ಪವತಿಸದೇ ಇರುವುದರಿಂದ ಸೆಸ್ಕ್‌ನವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.

ಈ ಬಗ್ಗೆ ಕೆ. ಎಸ್. ಆರ್. ಟಿ. ಸಿ. ಅಧಿಕಾರಿಗಳಿಗೆ ದೂರು ನೀಡಿದರೆ ವಿದ್ಯುತ್ ಬಿಲ್ ಪಾವತಿಸುವುದಾಗಿ ಹೇಳುತ್ತಾರೆಯೇ ಹೊರತು ಬಿಲ್ ಪಾವತಿಸುವುದಿಲ್ಲ. ಬಸ್ ತಂಗುದಾಣದಲ್ಲಿ ರಾತ್ರಿ ಹೊತ್ತು ವಿದ್ಯುತ್ ಸಂಪರ್ಕ ಇಲ್ಲದೇ ಕುಡುಕರು ರಾತ್ರಿ ಮದ್ಯಪಾನ ಮಾಡಿ ಬಾಟಲ್‌ಗಳನ್ನು ಅಲ್ಲಿಯೇ ಬಿಸಾಡಿಹೋಗುತ್ತಿದ್ದಾರೆ, ವಿದ್ಯುತ್ ಸಂಪರ್ಕವಿಲ್ಲದೆ ಸಾರ್ವಜನಿಕರು ಓಡಾಡುವುದೇ ಕಷ್ಟಕರವಾಗಿದೆ.

ಸಂಬಂಧಪಟ್ಟವರು ಕೂಡಲೇ ಬಸ್ ತಂಗುದಾಣಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಾಗಿದೆ.

-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು

 

Tags:
error: Content is protected !!