Light
Dark

ಅರೆ ಇದೇನಿದು ಅಚ್ಚರಿ? ಗಾಳಿಯಿಂದ ಶುದ್ಧನೀರು!

 

-ಕಾರ್ತಿಕ್ ಕೃಷ್ಣ

ಶುದ್ಧ ನೀರಿನ ಪ್ರಮುಖ ಮೂಲವಾಗಿರುವ ಅಂತರ್ಜಲದ ಮಟ್ಟ ಇಂದು ತೀವ್ರಗತಿಯಲ್ಲಿ ಇಳಿಕೆಯಾಗುತ್ತಿರುವುದು ಆತಂಕಕಾರಿ ವಿಚಾರ. ನಿಮಗೆ ತಿಳಿದಿರಲಿ, ಪಾನೀಯಗಳನ್ನು ತಯಾರು ಮಾಡುವ ಕಂಪನಿಗಳು ವರುಷದಲ್ಲಿ ಸುಮಾರು ೧.೫ ಬಿಲಿಯನ್ ಲೀಟರಿನಷ್ಟು ಶುದ್ಧ ಜಲವನ್ನು ತಮ್ಮ ಕೈಗಾರಿಕೆಯಲ್ಲಿ ಬಳಸಿಕೊಳ್ಳುತ್ತವೆ! ಅದರಲ್ಲಿ ೪೫% ಕ್ಕೂ ಅಧಿಕ ನೀರಿನ ಮೂಲ ಅಂತರ್ಜಲ. ಕೋಕಾ ಕೋಲಾ ಕಂಪನಿಯೊಂದೇ ದಿನಕ್ಕೆ ೧೦ ಲಕ್ಷಕ್ಕೂ ಅಧಿಕ ನೀರನ್ನು ಪಾನೀಯ ಉತ್ಪಾದಿಸಲು ಬಳಸುತ್ತದೆ. ದಿನೇ ದಿನೇ ನೀರಿನ ಬೇಡಿಕೆ ಹೆಚ್ಚಿದರೂ ಪೂರೈಕೆ ಮಾಡಲು ಶುದ್ಧ ಜಲದ ಕೊರತೆಯಿದೆ. ಇದನ್ನು ಪೂರೈಕೆ ಮತ್ತು ಬೇಡಿಕೆಯ ಬಿಕ್ಕಟ್ಟು ಎಂದೇ ಅರ್ಥೈಸಿಕೊಳ್ಳಬಹುದು. ಅದೆಷ್ಟು ದಿನವೆಂದು ಅಂತರ್ಜಲವನ್ನು ಹೀರಲು ಸಾಧ್ಯ? ಕುಂಠಿತವಾಗುತ್ತಿರುವ ಅಂತರ್ಜಲಕ್ಕೆ ಪರ್ಯಾಯವಾಗಿ ನಮ್ಮನ್ನು ಸುತ್ತುವರೆದಿರುವ ಗಾಳಿಯಿಂದ ನೀರನ್ನು ಉತ್ಪಾದಿಸುವ ತಂತ್ರಜ್ಞಾನಗಳು ಈಗ ಮುನ್ನೆಲೆಗೆ ಬರುತ್ತಿವೆ! ಅರೆ, ಗಾಳಿಯಲ್ಲಿ ಎಲ್ಲಿಂದ ನೀರು? ಎಂದು ಅಚ್ಚರಿಪಡಬೇಡಿ. ನೀವು ಅದನ್ನು ನೋಡಿದ್ದೀರಿ! ತಂಪು ಪಾನೀಯವನ್ನು ಲೋಟದ ಒಳಗೆ ತುಂಬಿದರೆ ಅಥವಾ ಐಸ್ ಕ್ಯೂಬ್ ಗಳನ್ನು ಲೋಟದೊಳಗೆ ಇಟ್ಟರೆ, ಲೋಟದ ಹೊರಗೆ ನೀರಿನ ಸಣ್ಣ ಸಣ್ಣ ಕಣಗಳು ಪ್ರತ್ಯಕ್ಷಗೊಳ್ಳುವುದನ್ನು ನೀವು ಗಮನಿಸಿರಬಹುದು. ಲೋಟದ ಮೇಲೆ ನೀರು ಕಾಣಿಸಿಕೊಳ್ಳುವುದು ಒಳಗಿನ ತಂಪು ಪಾನೀಯದ ಕಾರಣದಿಂದಲ್ಲ, ಬದಲಾಗಿ ಗಾಳಿಯಲ್ಲಿರುವ ನೀರಿನಿಂದ. ಯಾವಾಗ ಗಾಳಿಯು ತಂಪಾದ ಲೋಟದ ಹೊರಮೈಯ ಸಂಪರ್ಕಕ್ಕೆ ಬರುತ್ತದೆಯೋ, ಆಗ ಅದು ಸಾಂದ್ರೀಕರಣಗೊಂಡು ನೀರಾಗಿ ಪರಿವರ್ತನೆಗೊಳ್ಳುತ್ತದೆ.

ಜಗತ್ತಿನ ಎಲ್ಲಾ ನದಿಗಳಲ್ಲಿ ಹರಿಯುವ ನೀರಿನ ಆರು ಪಟ್ಟು ನೀರು ಗಾಳಿಯಲ್ಲಿದೆಯಂತೆ. ಅದು ಪ್ರತಿ ೮-೧೦ ದಿನಕ್ಕೊಮ್ಮೆ ಮರುಪೂರಣಗೊಳ್ಳುತ್ತದೆ. ಗಾಳಿಯಿಂದ ನೀರು ತೆಗೆಯುವ ತಂತ್ರಜ್ಞಾನ ಅಥವಾ ವಿಧಾನ ಹೊಸದೇನಲ್ಲ. ಭಾರತಕ್ಕೆ ಇದು ಠಿಛ್ಟಿಞಚ್ಟಛ್ಟಿ ಎಂಬ ಸಂಸ್ಥೆಯ ಮುಖಾಂತರ ೨೦೦೫ ರಲ್ಲೇ ಪ್ರವೇಶ ಪಡೆದಿತ್ತು. ಈ ಸಂಸ್ಥೆಯ ಸಂಸ್ಥಾಪಕರಾದ ಮೆರ್ಹೆ ಭಂಡಾರ್ ಪ್ರಕಾರ, ೨೦೦೫ ರಲ್ಲೇ ಗಾಳಿಯಿಂದ ನೀರನ್ನು ಉತ್ಪಾದಿಸುವ ಯಂತ್ರಗಳು ಭಾರತದಲ್ಲಿ ಬಿಡುಗಡೆ ಗೊಂಡರೂ, ಅದು ಜನರ ಗಮನ ಸೆಳೆಯುತ್ತಿರುವುದು ಕಳೆದ ಮೂರು ವರ್ಷಗಳಿಂದ. ಆರಂಭದ ದಿನಗಳಲ್ಲಿ ಈ ಯಂತ್ರಗಳನ್ನು ದೆಹಲಿಯಲ್ಲಿ ನಡೆದ ಠಿಛ್ಟಿ ಅಜಿ ಉ್ಡಜಿಚಿಜಿಠಿಜಿಟ್ಞ ನಲ್ಲಿ ಪ್ರದರ್ಶನಕ್ಕಿಟ್ಟಿದ್ದರಂತೆ. ಜನರು ಅನುಮಾನದಿಂದ ಅದನ್ನು ನೋಡುತ್ತಾ ಕಾಣದಂತೆ ಪೈಪುಗಳನ್ನು ಜೋಡಿಸಿ ನೀರು ಹರಿಸುತ್ತಿದ್ದಾರಾ ಎಂದು ಪರೀಕ್ಷಿಸುತ್ತಿದ್ದರಂತೆ! ಈಗ ಸುಮಾರು ೧೨೦ ರಿಂದ ೨೫೦೦ ಲೀರ್ಟ ವರೆಗೆ ನೀರು ಉತ್ಪಾದಿಸುವ ಯಂತ್ರಗಳನ್ನು ಶಾಲೆ, ಕ್ಲಿನಿಕ್ಕುಗಳಲ್ಲಿ ಇವರು ಅಳವಡಿಸಿದ್ದಾರಂತೆ.

ಮುಂದಿನ ದಿನಗಳಲ್ಲಿ ಕೋಲ್ಕತ್ತಾದಲ್ಲಿ ಅಟ, ಹೈದರಾಬಾದಿನಲ್ಲಿ ಮೈತ್ರಿ ಅಕ್ವಾಟೆಕ್ ಸಂಸ್ಥೆಯು ಗಾಳಿಯಿಂದ ನೀರು ಉತ್ಪಾದಿಸುವ ಧ್ಯೇಯದಿಂದ ಶುರುವಾಯಿತು. ಬಹಳ ಹಿಂದೆಯೇ ಭಾರತದಲ್ಲಿ ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆಗಳು ಹುಟ್ಟಿಕೊಂಡರೂ ಅವರು ಬಳಸುತ್ತಿರುವ ಸಾಂಪ್ರದಾಯಿಕ ವಿಧಾನಗಳಿಂದ ಅವು ಅಷ್ಟೊಂದು ಮುನ್ನೆಲೆಗೆ ಬರಲಿಲ್ಲ.

ಗಾಳಿಯಿಂದ ನೀರು ತೆಗೆಯುವ ವಿಧಾನದಲ್ಲಿ ಅಧಿಕ ಪ್ರಮಾಣದಲ್ಲಿ ವಿದ್ಯುತ್ತಿನ ಬಳಕೆಯಾಗುತ್ತದೆ. ಸಧ್ಯಕ್ಕೆ ಭಾರತದಲ್ಲಿ ವಿದ್ಯುತ್ತು ಹುಟ್ಟುವುದು ನಶಿಸಬಹುದಾದ ಸಂಪನ್ಮೂಲದಿಂದ. ವಿದ್ಯುತ್ತನ್ನು ಬಳಸಿ ನೀರು ಉತ್ಪಾದಿಸವುದು ಎಂದರೆ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬಂತಾಗುತ್ತದೆ. ಈ ಯಂತ್ರಗಳ ಇನ್ನೊಂದು ನೂನ್ಯತೆಯೇನೆಂದರೆ, ಇವುಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲು ೨೦% ಕ್ಕಿಂತ ಹೆಚ್ಚು ತೇವಾಂಶ, ೩೦ಡಿಗ್ರಿ ಸೆಲ್ಷಿಯಸ್ ಕ್ಕಿಂತ ಹೆಚ್ಚು ತಾಪಮಾನ, ೮೫-೯೦% ಆದ್ರತೆಯ ಅವಶ್ಯಕತೆಯಿದೆ. ವಿದ್ಯುತ್ತನ್ನು ಬಳಸದೇ ಗಾಳಿಯಿಂದ ನೀರನ್ನು ಬೇರ್ಪಡಿಸಬಹುದಾ? ಎಂದು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿ ೨೦೧೮ರಲ್ಲಿ ಗಾಳಿಯಲ್ಲಿರುವ ನೀರನ್ನು ಸೆಳೆಯುವ ಶಕ್ತಿಯುಳ್ಳ ಒಂದು ವಿಶಿಷ್ಟವಾದ ಪುಡಿಯನ್ನು ತಯಾರಿಸಿದರು. ನಂತರ ಅದನ್ನು ರಂಧ್ರಗಳಿರುವ ಆಯತಾಕಾರದ ಮ್ಯಾಟ್ರಿಕ್ಸ್ ಒಂದಕ್ಕೆ ಸೇರಿಸಿ ಸ್ಪಾಂಜಿನಂತೆ ನೀರನ್ನು ಹಿಡಿಟ್ಟುಕೊಳ್ಳುವ ವಸ್ತುವನ್ನು ಸೃಷ್ಟಿಸಿದರು. ನೀರನ್ನು ಸೆಳೆಯಲು ಇದನ್ನು ವಾತಾವರಣದಲ್ಲಿ ಕೆಲ ಕಾಲ ಬಿಟ್ಟು, ಶಾಖ ಕೊಟ್ಟಾಗ ಅದು ಸೆಳೆದಿರುವ ನೀರು ಆವಿಯ ರೂಪದಲ್ಲಿ ಹೊರ ಬಂದು, ಸಾಂದ್ರೀಕರಣಗೊಂಡಾಗ ನೀರಾಗಿ ಪರಿವರ್ತನೆಗೊಂಡಿತು.

ಈಗ ಭಾರತದಲ್ಲಿ ಮತ್ತೆ ನೀರಿನ ಕ್ರಾಂತಿ ನಡೆಯುತ್ತಿದೆ. ವಿದ್ಯುತ್ತನ್ನು ಬಳಸದೆ ನವೀಕರಸಬಹುದಾದ ಸಂಪನ್ಮೂಲವನ್ನು ಬಳಸಿ ನೀರನ್ನು ಉತ್ಪಾದಿಸಬೇಕೆಂಬ ಗುರಿಯೊಂದಿಗೆ ಪ್ರದೀಪ್ ಗರ್ಗ್, ಸ್ವಪ್ನಿಲ್ ಶ್ರೀವಾಸ್ತವ್, ವೆಂಕಟೇಶ್ ಹಾಗು ಗೋವಿಂದ ಬಾಲಾಜಿ ಸೇರಿಕೊಂಡು ಬೆಂಗಳೂರಿನಲ್ಲಿ ಹೊಸ ಠಿಚ್ಟಠ್ಠಿ ಒಂದನ್ನು ಕಟ್ಟಿದ್ದಾರೆ. ಅದರ ಹೆಸರು ಖ್ಕಿಅ್ಖಖಿ ಔಚಿ ಎಂದು. ಇವರು ಕಂಡು ಹಿಡಿದಿರುವ ತಂತ್ರಜ್ಞಾನದಲ್ಲಿ ದಿನ ಬಳಕೆಯ ವಿದ್ಯುತ್ತಿನ ಅವಶ್ಯಕತೆಯಿಲ್ಲವಂತೆ. ಬದಲಿಗೆ ದೊಡ್ಡ ಕೈಗಾರಿಕೆಗಳಲ್ಲಿ ಬಿಡುಗಡೆಯಾಗುವ ಶಾಖವನ್ನು ಬಳಸಿ ಖ್ಕಿಅ್ಖಖಿ ಯಂತ್ರ ಕೆಲಸ ಮಾಡುತ್ತದೆ. ಹಾಗೆಯೇ ಸೌರಶಕ್ತಿ, ಬಯೋಮಾಸ್ ತ್ಯಾಜ್ಯವನ್ನೂ ಬಳಸಿಕೊಳ್ಳಬಹುದು. ಈ ಯಂತ್ರದ ವಿಶೇಷತೆಯೆಂದರೆ ನೀರಿನ ಶುದ್ಧೀಕರಣದ ಪ್ರಕ್ರಿಯೆಯಲ್ಲಿ ಒಂದು ಹನಿ ನೀರೂ ಪೋಲಾಗುವುದಿಲ್ಲವಂತೆ. ಮನೆಗಳಲ್ಲಿ ಬಳಕೆಯಲ್ಲಿರುವ ವಾರ್ಟ ಫಿಲ್ಟರ್‌ನಲ್ಲಿ ಬಳಕೆಯಾಗುವ ್ಟಛಿಛ್ಟಿಛಿ ಓಸ್ಮೋಸಿಸ್ ಎಂಬ ತಂತ್ರಜ್ಞಾನದಲ್ಲಿ ಶುದ್ಧ ಗೊಳ್ಳುವ ನೀರಿಗಿಂತ ಹೆಚ್ಚು ನೀರು ಪೋಲಾಗುತ್ತದೆ. ಖ್ಕಿಅ್ಖಖಿ ಒಂದು ಹನಿ ನೀರೂ ಹಾಳಾಗದಂತೆ ನೀರನ್ನು ಶುದ್ಧ ಮಾಡುತ್ತದೆಯೆಂದರೆ ಅದು ಹುಬ್ಬೇರಿಸಬೇಕಾದ ವಿಚಾರವೇ!

ನಿಮಗೆ ಗೊತ್ತ, ಯಾವುದೇ ತಂಪು ಪಾನೀಯ ಅಥವಾ ಬಿಯರ್‌ನಲ್ಲಿ ಸುಮಾರು ೯೦% ಕ್ಕಿಂತ ಅಧಿಕ ಪ್ರಮಾಣದಲ್ಲಿರುವುದು ನೀರು! ಮೊದಲೇ ತಿಳಿಸಿದ ಹಾಗೆ ಅಂತರ್ಜಲ ಪಾನೀಯ ಕಂಪನಿಗಳ ನೆಚ್ಚಿನ ನೀರಿನ ಮೂಲ. ಹಾಗಾಗಿ ಇಂತಹ ಉದ್ಯಮಗಳನ್ನು ಗುರಿಯಾಗಿರಿಸಿಕೊಂಡ ಖ್ಕಿಅ್ಖಖಿ, ಬೆಲ್ಜಿಯಂ ಮೂಲದ ಬಹುರಾಷ್ಟ್ರೀಯ ಬಿಯರ್ ಉತ್ಪಾದನಾ ಸಂಸ್ಥೆಯಾದ ಅಆ ಐ್ಞಆಛಿ ಜೊತೆಗೆ ಒಪ್ಪಂದ ಮಾಡಿಕೊಂಡು ಈಗಾಗಲೇ ಬೆಂಗಳೂರಿನ ಆಫೀಸಿನಲ್ಲಿ ಗಾಳಿಯಿಂದ ನೀರು ತಯಾರಿಸುವ ಘಟಕವನ್ನು ತೆರೆದಿದೆ.

ಈಗಿನ್ನೂ ಆರಂಭಿಕ ಹಂತದಲ್ಲಿರುವ ಈ ಸಂಸ್ಥೆ, ದಿನಕ್ಕೆ ೧೦೦-೨೦೦ ಲೀಟರ್ ನೀರನ್ನು ಗಾಳಿಯಿಂದ ಬೇರ್ಪಡಿಸುತ್ತಿದೆ. ಇದಕ್ಕೆ ತಗಲುವ ವೆಚ್ಚ ಕೇವಲ ೪ ರೂಪಾಯಿ. ಉದ್ಯಮ ಇನ್ನೂ ಬೆಳೆದಾಗ ವೆಚ್ಚ ಇನ್ನಷ್ಟು ಕಡಿಮೆಯಾಗಿ ಲೀಟರೊಂದಕ್ಕೆ ೨ ರಿಂದ ೨.೫ ರೂಪಾಯಿ ತಗಲುವ ದಿನಗಳು ಬರಲಿವೆ. ಒಂದು ವೇಳೆ ಗಾಳಿ ಕಲುಷಿತಗೊಂಡಿದ್ದರೆ, ನೀರು ಕೂಡ ವಿಷಕಾರಿಯಾಗುವುದೇ ಎಂಬ ಅನುಮಾನ ನಿಮ್ಮನ್ನು ಕಾಡುತ್ತಿರಬಹುದು. ಈ ಯಂತ್ರಗಳಲ್ಲಿ ಶುದ್ಧೀಕರಣ ಪ್ರಕ್ರಿಯೆ ನಡೆದೇ ಕುಡಿಯುವ ನೀರು ನಮ್ಮ ಕೈಸೇರುವುದು. ಒಂದು ಹನಿಯೂ ಪೋಲಾಗದಂತೆ ನೀರನ್ನು ಶುದ್ಧಿ ಮಾಡುವ ಖ್ಕಿಅ್ಖಖಿ, ನೀರಿನ ಅಭಾವದ ಸಮಸ್ಯೆಗೆ ವರವಾಗಲಿ. ಅಂದ ಹಾಗೆ ತಮಿಳಿನಲ್ಲಿ ಖ್ಟಿಡ್ಠ ಎಂದರೆ ಸಂಬಂಧ ಎಂದರ್ಥ. ಮೆಟ್ರೋಪಾಲಿಟನ್ ಟ್ಯಾಗ್ ಪಡೆಯಲು ರೇಸಿನಲ್ಲಿರುವ ಎಲ್ಲಾ ನಗರಗಳು ಬಹುಮಹಡಿ ಕಟ್ಟಡ, ಮೆಟ್ರೋವನ್ನು ಕಟ್ಟುವುದರ ಜೊತೆಗೆ ನೀರಿನ ಅಭಾವದ ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸಿ, ಪ್ರಕೃತಿ ಹಾಗು ಮಾನವರ ಸಂಬಂಧವನ್ನು ಉಳಿಸಲು ಮುಂದೆ ಬರುವ ಇಂತಹ ಸಂಸ್ಥೆಗಳನ್ನೂ ಪ್ರೋತ್ಸಾಹಿಸಲಿ ಎಂದು ಆಶಿಸೋಣ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ