Mysore
23
broken clouds
Light
Dark

ಚಿತ್ರಮಂದಿರಗಳಿಗೆ ವರವಾಯಿತೇ ‘ಆದಿಪುರುಷ’ನ ಆಗಮನ?

 ತೆಲುಗು ಚಿತ್ರ ‘ಬಾಹುಬಲಿ’ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಿತುದಕ್ಷಿಣ ಭಾರತೀಯ ಭಾಷೆಗಳ ಚಿತ್ರಗಳ ಬಗ್ಗೆ ಅಸಡ್ಡೆ ತೋರುತ್ತಿದ್ದವರ ಕಣ್ಣು ತೆರೆಸಿದ ಚಿತ್ರವೂ ಆಯಿತುಭಾರತೀಯ ಚಿತ್ರರಂಗ ಎಂದರೆಬಾಲಿವುಡ್ ಯಾ ಹಿಂದಿ ಚಿತ್ರರಂಗ ಎಂದೇ ಬಿಂಬಿಸುತ್ತಿದ್ದ ಮಂದಿಗೆ ಹಾಗಲ್ಲ’ ಎಂದು ಹೇಳುವುದೂ ಆಯಿತುಅದರ ಬೆನ್ನಲ್ಲೇ ಬಂದ ಕನ್ನಡದ ‘ಕೆಜಿಎಫ್’ಗಳು, ‘ಕಾಂತಾರ’ ಭಾರತೀಯ ಮುಖ್ಯವಾಹಿನಿ ಚಿತ್ರ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದವುಇದೀಗ ‘ಆದಿಪುರುಷ್’.

ತೆಲುಗು ನಟ ಪ್ರಭಾಸ್ ಮುಖ್ಯಭೂಮಿಕೆಯ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆಕರ್ನಾಟಕದಲ್ಲಿ ಇಲ್ಲಿಯವರೆಗೆ ಆಗದಷ್ಟು ಚಿತ್ರಮಂದಿರಗಳಲ್ಲಿ ಇದರ ಬಿಡುಗಡೆ ಆಗುತ್ತಿದೆಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳಿಲ್ಲದ ಆತಂಕಕ್ಕಿಂತ ಹೆಚ್ಚಾಗಿ ಚಿತ್ರೋದ್ಯಮದ ಇನ್ನೊಂದು ಮುಖದ ಪರಿಚಯ ಇದರ ಜೊತೆಗೆ ಆಗುತ್ತಿದೆ.

ಸುಮಾರು ನೂರರಿಂದ ನೂರೈವತ್ತು ಏಕಪರದೆಯ ಚಿತ್ರಮಂದಿರಗಳುಚಿತ್ರಗಳಿಲ್ಲದೆ ಮುಚ್ಚಿರುವ ವಿಷಯ ಬಹಳಷ್ಟು ಮಂದಿಗೆ ತಿಳಿದಿಲ್ಲಈ ಚಿತ್ರಮಂದಿರಗಳು ಜನಪ್ರಿಯ ನಟರ ಚಿತ್ರಗಳ ಬಿಡುಗಡೆಗೆ ಕಾದಿರುತ್ತವೆಇದು ಏಕಪರದೆಯ ಚಿತ್ರಮಂದಿರಗಳಿಗೆ ಮಾತ್ರವಲ್ಲಮಲ್ಟಿಪ್ಲೆಕ್ಸ್‌ಗಳಿಗೂ ಅನ್ವಯವಾಗುತ್ತದೆ ಎನ್ನುತ್ತಾರೆ ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರಗಳ ವಿತರಕರಾಗಿರುವ ಮಾರ್ಸ್ ಹಂಚಿಕಾ ಸಂಸ್ಥೆಯ ಸುರೇಶ್ ಅವರುಕನ್ನಡದ ಸದಭಿರುಚಿಯ ಚಿತ್ರಗಳುಕಡಿಮೆ ನಿರ್ಮಾಣ ವೆಚ್ಚದ ಚಿತ್ರಗಳ ನಿರ್ಮಾಪಕರ ಪಾಲಿಗೆ ಆಪ್ತ ವಿತರಕರುಸಾಕಷ್ಟು ಚಿತ್ರಗಳನ್ನು ಅವರು ಹಂಚಿಕೆ ಮಾಡಿದ್ದಾರೆಚಿತ್ರಮಂದಿರಗಳನ್ನು ನಡೆಸಿದ ಅನುಭವವೂ ಅವರಿಗಿದೆ.

ಆದಿಪುರುಷ್’ ಚಿತ್ರ ಬಿಡುಗಡೆ ಆಗುತ್ತಿರುವುದರಿಂದ ಸಾಕಷ್ಟು ಮುಚ್ಚಿರುವ ಚಿತ್ರಮಂದಿರಗಳು ತೆರೆದಿವೆಬಹುಪರದೆಯ ಮಲ್ಟಿಪ್ಲೆಕ್ಸ್‌ಗಳಲ್ಲಿ ಈ ಹಿಂದೆ ಎಲ್ಲ ಪರದೆಗಳಲ್ಲೂ ಪ್ರದರ್ಶನ ಇರುತ್ತಿರಲಿಲ್ಲಎಂಟು ಹತ್ತು ಪರದೆಗಳಿದ್ದರೆಅವುಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಪ್ರದರ್ಶನ ಇರುತ್ತಿತ್ತುಇಂತಹ ಚಿತ್ರಗಳು ಬಂದಾಗ ಸಾಕಷ್ಟು ಪ್ರದರ್ಶಕರು ಅತ್ತ ಹೋಗುತ್ತಾರೆ ಎನ್ನುವುದು ಅವರ ಮಾತು.

ತಾಂತ್ರಿಕವಾಗಿ ಬಹಳ ಉನ್ನತ ಮಟ್ಟದ ಕೋಟಿಗಟ್ಟಲೆ ವ್ಯಯಿಸಿದ ಇಂತಹ ಚಿತ್ರಗಳನ್ನು ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆಯೇ ಹೊರತು ಒಟಿಟಿಗಳಲ್ಲಿ ಬರುವವರೆಗೆ ಕಾಯುವುದಿಲ್ಲಅದರಲ್ಲಿ ನೋಡುವ ಅನುಭವವೇ ಬೇರೆಚಿತ್ರಮಂದಿರಗಳಲ್ಲಿನ ಅನುಭವವೇ ಬೇರೆ.

ಚಿತ್ರಮಂದಿರಗಳತ್ತ ಜನರನ್ನು ಸೆಳೆಯಲುಉತ್ಕ ಷ್ಟ ತಾಂತ್ರಿಕತೆಯಉತ್ತಮ ಗುಣಮಟ್ಟದ ಇಂತಹ ಅದ್ಧೂರಿ ಚಿತ್ರಗಳು ಬೇಕು.

ಮಲ್ಟಿಪ್ಲೆಕ್ಸ್‌ಗಳಲ್ಲಿ ಬಹುಪರದೆಗಳಿರುವ ಕಾರಣಅಲ್ಲಿ ಪ್ರದರ್ಶನವಾಗುವ ಚಿತ್ರಗಳಲ್ಲಿ ಯಾವುದಕ್ಕಾದರೂ ಜನ ಬರಲಿಲ್ಲಬೇಡಿಕೆ ಇಲ್ಲ ಎಂದಾದರೆ ಅಲ್ಲಿ ಬೇರೆ ಚಿತ್ರಗಳನ್ನು ಪ್ರದರ್ಶಿಸಲು ಅವಕಾಶ ಇರುತ್ತದೆಆದರೆ ಒಂಟಿ ಪರದೆಯ ಚಿತ್ರಮಂದಿರಗಳು ಅಷ್ಟು ಸುಲಭದಲ್ಲಿ ಚಿತ್ರಗಳನ್ನು ವಾರದ ಮಧ್ಯದಲ್ಲಿ ಪಡೆಯುವುದು ಕಷ್ಟ ಸಾಧ್ಯಹಾಗಾಗಿಯೇ ಈ ಪ್ರದರ್ಶಕರದು ತ್ರಿಶಂಕು ಸ್ಥಿತಿ.

ಅದಕ್ಕಾಗಿ ಪ್ರದರ್ಶಕರು ಜನಪ್ರಿಯವರ್ಚಸ್ವೀ ನಟರ ಚಿತ್ರಗಳಿಗಾಗಿ ಬೇಡಿಕೆ ಇಡುತ್ತಿದ್ದಾರೆಈ ನಟರು ವರ್ಷದಲ್ಲಿ ಕನಿಷ್ಠ ಮೂರು ಚಿತ್ರಗಳನ್ನಾದರೂ ನೀಡಬೇಕು ಎನ್ನುವುದು ಅವರ ಕೋರಿಕೆಹಾಗಾದರೆ ಹೊಸಬರ ಚಿತ್ರಗಳಿಗೆ ಬೇಡಿಕೆ ಇಲ್ಲವೇಇದೆಅವು ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲವಾಗಬೇಕು. ‘ಕಿರಿಕ್ ಪಾರ್ಟಿ’ ಚಿತ್ರ ತೆರೆಕಂಡಾಗ ಅದರ ಮುಖ್ಯ ಪಾತ್ರಧಾರಿ ರಕ್ಷಿತ್ ಶೆಟ್ಟಿ ತಾರಾ ವರ್ಚಸ್ಸಿನ ನಟ ಆಗಿರಲಿಲ್ಲಇದೇ ಮಾತು ‘ಕಾಂತಾರ’ ಚಿತ್ರಕ್ಕೂ ಅನ್ವಯಿಸುತ್ತದೆಇವಲ್ಲದೆ ಇನ್ನೂ ಕೆಲವು ಹೊಸಬರ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆದ್ದ ಉದಾಹರಣೆಗಳಿವೆ.

ಅಲ್ಲೊಂದುಇಲ್ಲೊಂದು ಚಿತ್ರ ಗೆಲ್ಲುತ್ತದೆಆದರೆ ಚಿತ್ರಮಂದಿರಗಳಿಗೆ ನಿರಂತರ ಪ್ರೇಕ್ಷಕರನ್ನು ಸೆಳೆಯುವ ಚಿತ್ರಗಳ ಬೇಡಿಕೆ ಇರುತ್ತದೆಅಂತಹ ಚಿತ್ರಗಳೆಂದರೆಸಾಂಪ್ರದಾಯಕವಾಗಿತಾರಾ ವರ್ಚಸ್ಸಿನ ನಟರ ಚಿತ್ರಗಳು.

ಕನ್ನಡದಲ್ಲಿ ತಾರಾ ವರ್ಚಸ್ಸಿನಜನಪ್ರಿಯ ನಟರ ಸಂಖ್ಯೆ ಬಹಳ ಕಡಿಮೆಅವರಲ್ಲಿ ವರ್ಷಕ್ಕೆ ಎರಡೋ ಮೂರೋ ಚಿತ್ರಗಳನ್ನು ನೀಡುವವರ ಸಂಖ್ಯೆ ಇನ್ನೂ ಕಡಿಮೆಯಶ್ ಅಭಿನಯದ ಮುಂದಿನ ಚಿತ್ರ ಯಾವಾಗ ಬರಬಹುದುದರ್ಶನ್ ಅಭಿನಯದ ‘ಕ್ರಾಂತಿ’ ಚಿತ್ರ ನಿರ್ಮಾಪಕರಿಗೆ ಲಾಭ ತಂದುಕೊಟ್ಟಿದೆ.ಆದರೆ ಕೊಂಡುಕೊಂಡವರಿಗಲ್ಲ ಎನ್ನಲಾಗುತ್ತಿದೆ.

ಅವರ ಮುಖ್ಯಭೂಮಿಕೆಯ ಚಿತ್ರ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಈ ವರ್ಷದಲ್ಲಿ ತೆರೆ ಕಂಡರೂ ಕಾಣಬಹುದುಬಿ.ಸಿ.ಪಾಟೀಲರ ‘ಗರಡಿ’ಯಲ್ಲಿ ಅವರದು ಪುಟ್ಟ ಪಾತ್ರ ಎನ್ನಲಾಗಿದೆಇನ್ನು ಈಗಾಗಲೇ ಚಿತ್ರೀಕರಣ ಆರಂಭವಾಗಿರುವ ‘ರಾಜ ವೀರ ಮದಕರಿ ನಾಯಕ’ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿದ್ದುಅದರ ಮುಂದಿನ ಬೆಳವಣಿಗೆ ಏನು ಎಂದು ಈಗಲೇ ಹೇಳುವಂತಿಲ್ಲ.

ಉಪೇಂದ್ರ ಮತ್ತು ಸುದೀಪ್ ಅಭಿನಯಿಸಿಶಿವರಾಜಕುಮಾರ್ ಅವರು ಕೂಡ ಕಾಣಿಸಿಕೊಂಡ ಬಹುತಾರಾ ಚಿತ್ರಪ್ಯಾನ್ ಇಂಡಿಯಾ ಚಿತ್ರ ಎಂದು ನಿರ್ದೇಶಕನಿರ್ಮಾಪಕ ಆರ್.ಚಂದ್ರು ಹೇಳಿದ್ದ ಅವರ ‘ಕಬ್ಜ’ ಚಿತ್ರವೂ ನಿರ್ಮಾಪಕರ ಪಾಲಿಕೆ ವರವಾದರೂಅದನ್ನು ಕೊಂಡವರ ಪಾಲಿಗಲ್ಲ ಎನ್ನಲಾಗುತ್ತಿದೆ.

ಶಿವರಾಜಕುಮಾರ್ ಅಭಿನಯದ ‘ಘೋಸ್ಟ್’, ‘ನೀ ಸಿಗೋವರೆಗೂ’, ‘ಕರಟಕ ಧಮನಕ’, ‘45, ‘ಭೈರತಿ ರಣಗಲ್’ಜೊತೆಗೆ ತಮಿಳಿನ ‘ಜೈಲರ್’, ‘ಕ್ಯಾಪ್ಟನ್ ಮಿಲ್ಲರ್’ ಮತ್ತು ಈಗಾಗಲೇ ಪ್ರಕಟವಾಗಿರುವ ‘ಅಶ್ವತ್ಥಾಮ’, ‘ಸತ್ಯಮಂಗಲ’, ‘ಕಬ್ಜ 2’ ಚಿತ್ರಗಳಿವೆಬಿಡುವಿಲ್ಲದೆ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಶಿವಣ್ಣಗಣೇಶ್ ಅಭಿನಯದ ‘ಬಾನದಾರಿಯಲ್ಲಿ’ ತೆರೆಗೆ ಸಿದ್ಧವಾಗಿದೆಪರಂವಃ ಸ್ಟುಡಿಯೋಸ್ ನಿರ್ಮಾಣದ ಚಿತ್ರಗಳು ತೆರೆಗೆ ಸಿದ್ಧವಾಗುತ್ತಿವೆಇವುಗಳಲ್ಲಿ ಹೊಸಬರ ಚಿತ್ರಗಳಿವೆ.

1200ಕ್ಕೂ ಹೆಚ್ಚು ಚಿತ್ರಮಂದಿರಗಳಿದ್ದ ದಿನಗಳಲ್ಲಿ ತಯಾರಾಗುತ್ತಿದ್ದ ಚಿತ್ರಗಳ ಸಂಖ್ಯೆ ಕಡಿಮೆ ಇದ್ದರೂಚಿತ್ರಮಂದಿರಗಳಿಗೆ ಕೊರತೆ ಎನಿಸಲಿಲ್ಲಕೆಲವು ಸಂದರ್ಭಗಳಲ್ಲಿ ಪರಭಾಷಾ ಚಿತ್ರಗಳ ವಿರುದ್ಧ ಹೋರಾಡಬೇಕಾದ ದಿನಗಳೂ ಇದ್ದವೆನ್ನಿರಾಜಕುಮಾರ್ ಅಭಿನಯದ ‘ಹಾಲುಜೇನು’ ಚಿತ್ರದ ಬಿಡುಗಡೆ ಆಗಲು ನಿರ್ಧರಿಸಿದ್ದ ಸಂತೋಷ್ ಚಿತ್ರಮಂದಿರದಲ್ಲಿ ಹಿಂದಿಯ ‘ನಮಕ್ ಹಲಾಲ್’ ಚಿತ್ರ ಬಿಡುಗಡೆ ಮಾಡಬೇಕು ಎಂದು ಹಟ ಮಾಡಿದ ಅದರ ಮಾಲೀಕ ಬಿ.ಸಿ.ಎಸ್.ನಾರಾಯಣ್ ನಂತರ ಸೋಲೊಪ್ಪಿಕೊಳ್ಳಬೇಕಾಯಿತೆನ್ನಿ.

ಆ ದಿನಗಳಲ್ಲಿಕನ್ನಡ ಚಿತ್ರದ ಬಿಡುಗಡೆಗೆ ಬೆಂಗಳೂರಿನ ಹೃದಯ ಭಾಗವಾದ ಮೆಜೆಸ್ಟಿಕ್ ಪ್ರದೇಶದ ಕೆಂಪೇಗೌಡ ರಸ್ತೆಯ ಯಾವುದಾದರೂ ಒಂದು ಚಿತ್ರಮಂದಿರ ಬೇಕೇ ಬೇಕಾಗಿತ್ತುಸುಮಾರು ಇಪ್ಪತ್ತಕ್ಕೂ ಹೆಚ್ಚು ಚಿತ್ರಮಂದಿರಗಳು ಆ ರಸ್ತೆಯ ಇಕ್ಕೆಲಗಳಲ್ಲಿದ್ದವುಈಗ ಕೆಲವೇ ಉಳಿದಿವೆಭೂಮಿಕಾಸಂತೋಷ್ನರ್ತಕಿಸಪ್ನಾತ್ರಿವೇಣಿಅನುಪಮಅಭಿನಯಶಾರದಾ ಮಾತ್ರಉಳಿದವೆಲ್ಲ ನೆಲಸಮವಾಗಿ ಅಲ್ಲಿ ಬೇರೆ ಕಟ್ಟಡಗಳು ತಲೆ ಎತ್ತಿವೆಎತ್ತುತ್ತಿವೆ.

ಕನ್ನಡ ಚಿತ್ರಗಳ ಬಿಡುಗಡೆಗೂ ಕೆಂಪೇಗೌಡ ರಸ್ತೆಯಲ್ಲೇ ಚಿತ್ರಮಂದಿರಗಳನ್ನು ಎಲ್ಲರೂ ಬಯಸುತ್ತಿಲ್ಲಈ ತನಕ ತೆರೆಕಂಡ 107 ಚಿತ್ರಗಳಲ್ಲಿ ಕೆಂಪೇಗೌಡ ರಸ್ತೆಯ ಸಂತೋಷ್ (16), ತ್ರಿವೇಣಿ (11), ಅನುಪಮ(10), ಅಭಿನಯ(08), ಸಪ್ನಾ(03), ಭೂಮಿಕಾ (3), ಶಾರದಾ(01ಚಿತ್ರ ಮಂದಿರಗಳಲ್ಲದೆ ಪಿವಿಆರ್(12), ಐನಾಕ್ಸ್ (02), ಗೋಪಾಲನ್ ಮಾಲ್(05ಮುಂತಾಗಿ ಮಲ್ಟಿಪ್ಲೆಕ್ಸ್ ಗಳುಹೊರವಲಯದಲ್ಲಿರುವ ವೀರೇಶ(10), ಪ್ರಸನ್ನ(04), ಸಿದ್ದೇಶ್ವರ(02), ಬಾಲಾಜಿ(01), ಗೋವರ್ಧನ(01), ನವರಂಗ್(01), ಬಾಲಾಜಿ(01), ಅಮೃತ(01), ವಿಕ್ಟರಿ ಸಿನಿಮಾ(01), ಈಶ್ವರಿ(01ಚಿತ್ರಮಂದಿರಗಳು ಬಿಡುಗಡೆಯ ಮುಖ್ಯ ಚಿತ್ರಮಂದಿರಗಳಾದವುಬೆಂಗಳೂರಲ್ಲಿ ಬಿಡುಗಡೆ ಮಾಡದೆ ಬೇರೆಡೆ ತೆರೆಕಂಡ ಚಿತ್ರಗಳೂ ಇದ್ದವು.

ವಿಶೇಷ ತಾಂತ್ರಿಕತೆಅದ್ಧೂರಿತನ ಇಲ್ಲದ ಕಡಿಮೆ ವೆಚ್ಚದ ಚಿತ್ರಗಳುಮೂರು ವಾರ ಕಳೆಯುತ್ತಲೇ ಒಟಿಟಿ ತಾಣಕ್ಕೆ ಬರುತ್ತವೆಆಗ ನೋಡಿದರಾಯಿತು ಎಂದುಕೊಳ್ಳುವ ಬಹುದೊಡ್ಡ ಪ್ರೇಕ್ಷಕ ವರ್ಗ ಇದೆ.

ಕನ್ನಡದ ಬಹುತೇಕ ಚಿತ್ರಗಳನ್ನುಅವು ತೆರೆಕಂಡು ಯಶಸ್ವಿ ಆಗದೆ ಇದ್ದರೆಒಟಿಟಿ ತಾಣಗಳಲ್ಲಿ ಪ್ರಸಾರಕ್ಕೆ ಕೊಂಡುಕೊಳ್ಳುವುದಿಲ್ಲ ಎನ್ನುವುದು ಬಹಳ ಮಂದಿಗೆ ಗೊತ್ತಿಲ್ಲಕನ್ನಡ ಚಿತ್ರೋದ್ಯಮ ಕವಲು ದಾರಿಯಲ್ಲಿದೆಒಟಿಟಿ ತಾಣಗಳು ಚಿತ್ರಮಂದಿರಗಳ ಅಸ್ತಿತ್ವಕ್ಕೆ ನಿಧಾನವಾಗಿ ಕೊಡಲಿಯೇಟು ಹಾಕುತ್ತಿವೆಇದಕ್ಕೇನು ಮಾಡಬೇಕು ಎನ್ನುವುದನ್ನು ಸರ್ಕಾರವೂ ಸೇರಿದಂತೆ ಸಂಬಂಧಪಟ್ಟ ಎಲ್ಲರೂ ಒಟ್ಟಿಗೆ ಕುಳಿತು ಚರ್ಚಿಸಬೇಕಾದ ಸಮಯ ಇದು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ