Mysore
25
broken clouds

Social Media

ಭಾನುವಾರ, 15 ಜೂನ್ 2025
Light
Dark

ಥಿಯೇಟ್ರಲ್ಲಿ ಬಾಂಬಿಟ್ಟಿದ್ದಾರೆ ಹುಷಾರ್

ಹಿಂದಿನ ಸಂಚಿಕೆಯಿಂದ

ಈ ರೀತಿ ಕಳಿಸೋದಾದ್ರೆ ಇನ್ನೂ ಮುಕ್ಕಾಲು ಗಂಟೆಯಾಗಿ ಹೋಗುತ್ತಲ್ಲಾ ಸಾರ್ವಿಷ್ಯ ತಿಳಿದ ತಕ್ಷಣ ಜನರನ್ನ ಕಳಿಸೋದು ಬಿಟ್ಟು ರೀಫಂಡ್ ಪಾಸ್ ಕೊಡುತ್ತಾ ಕಾಲಹರಣ ಮಾಡಿದರುಈ ಅನಾಹುತಕ್ಕೆ ಪೊಲೀಸ್ನೋರೆ ಹೊಣೆ ಅಂತ ಶುರುವಾಗುತ್ತೆನಮ್ಮಗಳ ತಲೆದಂಡವಾಗುತ್ತೆ’ ಎಂಬುದು ಸಬ್ ಇನ್‌ಸ್ಪೆಕ್ಟರ್ ರಾಜೇಂದ್ರರ ಆತಂಕ.

ಈಗ ಬಾಂಬ್ ಸುದ್ದಿ ಹೇಳಿದ್ರೂ ಗಾಬ್ರಿ ಬಿದ್ದು ಜನ ಆಚೆ ಬರೋದಿಕ್ಕೆ ಅರ್ಧ ಗಂಟೇನೆ ಆಗುತ್ತೆರೀಫಂಡ್ ಕಾರ್ಡ್ ಕೊಟ್ರೆ ಇನ್ನೊಂದು ಹತ್ತು ನಿಮಿಷ ಹೆಚ್ಚಾಗಬಹುದುಕಾರ್ಡ್ ಕೊಡೋದು ಕೊಟ್ಟು ಬಿಡಲಿರಗಳೆ ಇರೋದಿಲ್ಲರೊಳ್ಳೆ ತೆಗೆಯೋದಿಲ್ಲಕಾರ್ಡ್ ಕೈಗೆ ಸಿಕ್ಕರೆ ಸಾಕು ಯಾರೂ ಇಲ್ಲಿ ನಿಲ್ಲೋದೂ ಇಲ್ಲ’

ಹಾಗಲ್ಲ ಸಾರ್ಏನಾದ್ರೂ ಅನಾಹುತವಾದ್ರೆ ಕಂಟ್ರೋಲ್ ರೂಮಿಗೆ ಮಾಹಿತಿ ಬಂದಾಗಲಿಂದ ನಾವು ಏನೇನು ಮಾಡಿದೋ ಅಂತ ಲೆಕ್ಕ ಹಿಡಿದು ನಮ್ಮನ್ನೇ ಹೊಣೆ ಮಾಡ್ತಾರೆಸಮರ್ಥಿಸಿಕೊಳ್ಳೋದಿಕ್ಕೆ ಆಗೋದಿಲ್ಲ’

ಮಿನಿಟ್ ಟು ಮಿನಿಟ್ ಲೆಕ್ಕ ಹಿಡಿದರೆ ನಾವೇ ಫಿಕ್ಸಾಗೋದು ಗ್ಯಾರಂಟಿಆಗಿದ್ದು ಆಗಲಿ ಫೇಸ್ ಮಾಡೋಣ’ ಅಂದೆ.

ಥಿಯೇಟರ್ ಕರೆಂಟ್ ಬಂದ್ ಆಯಿತುಜನ ಹೋ ಎಂದರು. slide ಕಾಣಿಸಿತುಎಲ್ಲ ಗೇಟುಗಳಲ್ಲಿ ರೀಫಂಡ್ ಪಾಸ್ ಕೊಡಲು ಶುರು ಮಾಡಿದರುಅರ್ಧಗಂಟೆಯೊಳಗೆ ಥಿಯೇಟರ್ ಖಾಲಿ.

ಮೇಲಧಿಕಾರಿಗಳಿಗೆ ಕರೆ ಮಾಡಿ ‘ಪರಿಸ್ಥಿತಿ ಹೀಗೀಗಿದೆಏನು ಮಾಡಲಿ ಸರ್?’ ಕೇಳಿದೆ.

ಹಾಗ್ ಮಾಡಿ ಹೀಗ್ ಮಾಡಿ ಎಂದವರುಹೇಗೂ ಸ್ಪಾಟಲ್ಲಿ ಇದ್ದೀರಾ? you are the better judge ನೀವಂದಂಗೇ ಮಾಡಿ ಬಿಡಿಎಂಬ ಸೂಚನೆ ಬಂತು.

ಥಿಯೇಟರ್ ಖಾಲಿಯಾಗಿತ್ತುಒಳಗಡೆಬಾಲ್ಕನಿಹೊರಗಿನ ಕಾರಿಡಾರ್ಟಿಕೆಟ್ ಕೌಂಟರ್ ಎಲ್ಲ ಕಡೆಗೂ ಪೊಲೀಸರನ್ನು ನಿಯೋಜಿಸಿ ಹೆಜ್ಜೆ ಪ್ರತಿ ಹೆಜ್ಜೆ ತಡಕ ತೊಡಗಿದೆವುರಾತ್ರಿ ಎಂಟಾಗಲಿತ್ತುಸಂಜೆ ಆರೂವರೆ ಶೋ ರದ್ದಾಗಿತ್ತು.

ಎರಡು ಶೋ ಲಾಸ್ ಆಗಿದೆಎಂಟೂವರೆ ಕೊನೆ ಶೋಗಾದ್ರೂ ಬಿಟ್ಟುಕೊಡಿ’ ಥಿಯೇಟರ್‌ನವರು ಕೇಳಿಕೊಂಡರು.

ನಮಗೂ ಸಾಕಾಗಿತ್ತುಬೋಗಸ್ ಬಾಂಬ್ ಕರೆ ಎಂದು ಖಚಿತವಾಗಿದ್ದರೂಸಂಪೂರ್ಣ ತಲಾಶ್ ಮಾಡದೆ ಹೋಗುವಂತಿಲ್ಲಪೊಲೀಸ್ ಪತ್ತೇದಾರಿ ನಾಯಿಗಳೂ ಬಂದಿದ್ದವುಬುಸು ಬುಸು ಉಸಿರುಬಿಡುತ್ತಾ ಹುಡುಕ ತೊಡಗಿದವುಅದೇ ಅಂತಿಮ ಟೆಸ್ಟ್ಬಾಂಬ್ ಇದ್ದರೆ ಪತ್ತೆಯಾಗೇ ಆಗುತ್ತೆ ಎಂದು ನಾನೂ ಆಶಾವಾದಿಯಾಗಿ ಕಾಯುತ್ತಾ ನಿಂತಿದ್ದೆ.

ರವಿಕುಮಾರ್ ಎಂಬ ಪೇದೆ ಆಗಿನ್ನೂ ಸರ್ವೀಸಿಗೆ ಸೇರಿದ್ದವನು ಅನುಮಾನದ ರಾಗ ಎಳೆದ, ‘ಏನಿಲ್ಲಾ ಸಾರ್ಈ ನಾಯಿಗಳು ನಿಜವಾಗಿ ಪತ್ತೆ ಮಾಡ್ತವಾ ಅಂತ’

ಏನಯ್ಯಾ ಹೀಗಂತೀಯಾಅವಕ್ಕೆ ಸ್ಪೆಷಲ್ಲಾಗಿ ಟ್ರೇನಿಂಗ್ ಕೊಟ್ಟಿರ್ತಾರೆಬಾಂಬ್ ಇದೆ ಅಂದ್ರೆ ಸಾಕು ಷ್ಯೂರಾಗಿ ಪತ್ತೆ ಮಾಡ್ತಾವೆ’ ಎಂದೆ.

ಸಾರಿ ಸರ್ಮಾಮೂಲಿ ಸ್ಛೋಟಕಗಳಿದ್ದರೆ ಇವು ವಾಸನೆ ಹಿಡೀತಾವೆಈಗೆಲ್ಲಾ ಈಗಿ ನಂತಹ ಪ್ಲಾಸ್ಟಿಕ್ ಬಾಂಬ್‌ಗಳು ಬಂದಿವೆ (1996ಅವಕ್ಕೆ ವಾಸನೇನೂ ಇರೋದಿಲ್ಲರಿಮೋಟ್ ಬೇರೆ ಇರುತ್ತೆಹೊರಗಡೆ ಎಲ್ಲಿಂದಾದರೂ ನಿಂತು ಢಮಾರ್ ಅನ್ನಿಸಬೋದು ಅಲ್ಲವಾ?’

ನನ್ನ ದೃಢನಂಬಿಕೆ ಕುಸಿದು ಹೋಯಿತುಅದಕ್ಕಿಂತ ನನ್ನ ಅಜ್ಞಾನದ ಬಗ್ಗೆ ನಾಚಿಕೆಯಾಯಿತುಬಾಂಬ್ ಪ್ರಪಂಚ ಎಷ್ಟೊಂದು ಮುಂದುವರಿದಿದೆನಾನಿನ್ನೂ ಪಟಾಕಿ ಯುಗದಲ್ಲೇ ಇದ್ದೀನಿನಾಯಿಗಳ ಶೋ ಮಾಡಿಕೊಂಡು ಜನಗಳನ್ನಿರಲಿ ನಮ್ಮನ್ನೂ ವಂಚಿಸಿಕೊಳ್ಳುತ್ತಿದ್ದೇವೆ ಅಲ್ಲವೇಪೊಲೀಸ್ ಅಂದರೆ ಕಳ್ಳರಿಗಿಂತ ತಂತ್ರಗಾರಿಕೆಯಲ್ಲಿ ಮೂವತ್ತು ವರ್ಷ ಮುಂದಿರಬೇಕುನಾವು?

ಸರಿ ಬಿಡಪ್ಪಾನಾಯಿ ವೇಷ ಹಾಕ್ಕಂಡಿದ್ದೇವೆಜೋರಾಗಿ ಬೊಗಳಿ ಬಿಡೋಣಈಗ ಥಿಯೇಟರ್ ಕ್ಲಿಯರ್ ಮಾಡಿ ಕೊಡೋಣಮುಂದಿನ ಶೋನಾದ್ರೂ ಮಾಡಿಕೊಳ್ಳಲಿ’ ಎಂದೆ.

ಇನ್ನೇನು ತಲಾಶ್ ಮುಗಿಯಲಿದೆ ಎಂದಾಗ ಮೇಲಽಕಾರಿಯೊಬ್ಬ ಬಂದಆವರೆಗೆ ನಡೆದದ್ದನ್ನೆಲ್ಲಾ ಒಪ್ಪಿಸಿದೆಬಂದ ಮೇಲೆ ತನ್ನದೊಂದು ಅಮೋಘ ಸೂಚನೆ ಕೊಡ ಬೇಕಲ್ಲಾ?

ನೀವು ಹೀಗೆ path way ನಲ್ಲಿ ನಡೆದುಕೊಂಡು ಬಂದರೆ ಬಾಂಬ್ ಹುಡುಕಿದಂತೆಯೇ?’ ಎಂದು ರಾಗ ಎಳೆದರು. ‘ಒಂದೊಂದು ಪುಶ್ ಬ್ಯಾಕ್ ಸೀಟನ್ನೂ ಎಳೆದೆಳೆದು ನೋಡಿಸೀಟಿನ ಕೆಳಗಡೆ ಏನಾದ್ರೂ ಬಾಂಬನ್ನು ಅಂಟಿಸಿರಬಹುದುಪ್ರತಿಯೊಂದನ್ನೂ ಕೈಯಾಡಿಸಿ ತಡ್ರುಸಿ (ತಡವರಿಸಿನೋಡಬೇಕುಹೀಗೆ ಸುಮ್ಮನೆ ಬಂದ ಪುಟ್ಟ ಹೋದ ಪುಟ್ಟ ಅಂತ ಹುಡುಕಿದರೆ ಪ್ರಯೋಜನವಿಲ್ಲ’ ಎಂದರು ಕುಹಕವಾಗಿವಿಕಾರವಾಗಿ.

ಮೇಲಧಿಕಾರಿ ಎಂದರೆ ಪ್ರಬುದ್ಧಜಾಣಮೇಧಾವಿಅಪಾರ ಅನುಭವಿ ತಾನೇಅವರ ಸೂಚನೆ ಮೀರುವುದುಂಟೇಅದೂ ಪೊಲೀಸಿನಲ್ಲಿಕಮಕ್ ಕಿಮಕ್ ಅನ್ನದೆ ಅವರು ಹೇಳಿದಂತೆಯೇ ಪುನಾ ಹುಡುಕತೊಡಗಿದೆವುಒಂದೊಂದು ಸೀಟಿನ ಕೆಳಗೂ ಬಗ್ಗಿತಡವರಿಸಿ ನೋಡುವುದರೊಳಗೆ ಅನೇಕರ ಡೊಳ್ಳು ಹೊಟ್ಟೆಗಳು ಕರಗಿಯೇ ಬಿಟ್ಟಿದ್ದವು.

ರಾತ್ರಿ ಹನ್ನೊಂದಾಗಿತ್ತುಆ ಅಧಿಕಾರಿ ಹೋಗಿ ಎಷ್ಟೋ ಹೊತ್ತಾಗಿತ್ತುನಮ್ಮ ತಪಾಸಣೆ ಮುಗಿದಿರಲಿಲ್ಲಅಷ್ಟರಲ್ಲಿ ರಾತ್ರಿ ಗಸ್ತಿನ ಉಸ್ತುವಾರಿ ಅಧಿಕಾರಿ ಬಂದರು. ‘ಏನಾದ್ರೂ ಪತ್ತೆಯಾಯಿತಾ?’ ಅವರ ಪ್ರಶ್ನೆ.

ಪತ್ತೆ ಆಗೋಯ್ತಲ್ಲಾ ಸಾರ್’ ಎಂದೆ ಸಲಿಗೆಯ ನಗೆಯಲ್ಲಿನನಗಿಂತ ಎರಡು ವರ್ಷ ಸೀನಿಯರ್ಅದೇ ತಾನೆ ಬಡ್ತಿ ಹೊಂದಿದ್ದರು.

ಓಹ್ ಹೌದಾಮತ್ತೆ ಏನೂ ಮೆಸೇಜೇ ಬರಲಿಲ್ಲವಲ್ಲಾ?’

ಯಾರೋ ಈ ಥಿಯೇಟರ್‌ಗೆ ಆಗದಿರೋನು ಮಧ್ಯಾಹ್ನ

ಮೂರು ಗಂಟೆ ಶೋ ಶುರುವಾದ ಮೇಲೆ ಕಂಟ್ರೋಲ್ ರೂಮಿಗೆ

ಬಾಂಬ್ ಕರೆ ಮಾಡಿದ್ದಾನೆಆದರೆ ಥಿಯೇಟರ್‌ನವರಿಗೆ ತಿಳಿಸಿಲ್ಲನಾವು ಬಂದು ಹುಡುಕಿ ನೋಡುವುದರೊಳಗೆ ಎರಡು ಶೋ ಕ್ಯಾನ್ಸಲ್ ಆಯ್ತು.

ಮೂರನೇ ಶೋಗೆ ಅನುವು ಮಾಡಿಕೊಡೋಣ ಎಂದರೆ ಸಾಹೇಬರು

ಬಂದು ಕೂಲಂಕಷವಾಗಿ ಹುಡುಕಿ ಅಂದರುಮೂರನೇ ಶೋ ಕೂಡ ಚೌರಇನ್ನೊಂದು ಶೋ ಫ್ರೀ ಬಿಡಬೇಕುಒಟ್ಟು ನಾಲ್ಕು ಶೋ ದುಡ್ಡು ಅವರಿಗೆ ಲಾಸು ಸರ್ನಮಗೆ ಇಡೀ ದಿನದ ಡ್ಯೂಟಿ ಲಾಸುಮಧ್ಯಾಹ್ನದಿಂದ ಬಸ್ಟಾಂಡಿನಲ್ಲಿ ಮೂರು ಪಿಕ್ ಪಾಕೆಟ್ಒಂದು ಸೂಟ್ ಕೇಸ್ ಲಿಫ್ಟ್ ಆಗಿದೆಅದು ನಮಗೆ ಗಿಫ್ಟು…’

ನಾವೇನೂ ಮಾಡೋದಿಕ್ಕೆ ಆಗೋದಿಲ್ರೀಈಗ ltte ಬೆದರಿಕೆ ಇರೋದ್ರಿಂದ ಅರಮನೆಕೆಆರ್‌ಎಸ್ ಸ್ಛೋಟದ ಬೆದರಿಕೆ ಇರೋದ್ರಿಂದ ಯಾವುದನ್ನೂ ಲಘುವಾಗಿ ತೆಗೆದು ಕೊಳ್ಳೋದಿಕ್ಕೆ ಆಗೋದಿಲ್ಲneceesary evils ಅಂದರೆ ಇವೇ’ ಮಾತು ಮುಗಿಸಿದರು.

(ಮುಗಿದಿದೆ)

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!