ಬೇಸಿಗೆ ಬಂತೆಂದರೆ ಒಂದು ಕಡೆ ಸಂತೋಷ ಮತ್ತೊಂದು ಕಡೆ ಎಚ್ಚರಿಕೆಯ ನಡೆಯನ್ನೂ ಅನುಸರಿಸಬೇಕಾಗುತ್ತದೆ. ಏಕೆಂದರೆ ಹಣ್ಣುಗಳ ರಾಜ ಮಾವಿನ ಹಣ್ಣು, ಹಲಸಿನ ಹಣ್ಣು ಗಳ ಋತು ಇದು. ದ್ರಾಕ್ಷಿ ಹಣ್ಣು, ಕಲ್ಲಂಗಡಿ, ಖರ್ಬೂಜ ಒಳಗೊಂಡಂತೆ ವಿವಿಧ ಹಣ್ಣುಗಳು ಹೇರಳವಾಗಿ ಮಾರುಕಟ್ಟೆಗೆ ಬರುವ ಋತು ಬೇಸಿಗೆ.. ಇವುಗಳನ್ನು ಆರೋಗ್ಯಕ್ಕೆ ಹಾನಿಯಾಗದ ಸುರಕ್ಷಿತ ಸ್ಥಿತಿಯಲ್ಲಿ ಸೇವಿಸುವುದು ಆರೋಗ್ಯದ ದೃಷಿಯಿಂದ ತುಂಬಾ ಒಳಿತು. ಕತ್ತರಿಸಿ, ತೆರೆದ ಸ್ಥಿತಿಯಲ್ಲಿರಿಸಿದ ಯಾವುದೇ ಪದಾರ್ಥಗಳ ಸೇವನೆಯು ಬೇಸಿಗೆಯಲ್ಲಿ ಅನಾರೋಗ್ಯಕ್ಕೆ ಆಹ್ವಾನವಿತ್ತಂತೆ.
———————-
ಬೇಸಿಗೆ ಕಾಲಿಟ್ಟಿದೆ? ಬೇಸಿಗೆ ಆರಂಭದಲ್ಲೇ ಸುಡು ಸುಡು ಬಿಸಿಲಿನ ಅಬ್ಬರ ಶುರುವಾಗಿದೆ. ಪ್ರಾರಂಭದಲ್ಲೇ ಬಿಸಿಲಿನ ಪ್ರವಾಣ ಹೆಚ್ಚಾಗುತ್ತಿದೆ. ಈ ಬಾರಿ ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಬೇಸಿಗೆ ಪ್ರಭಾವ ಜಾಸ್ತಿಾಂಗಲಿದೆ ಎಂದು ಹವಾವಾನ ಇಲಾಖೆ ಕೂಡ ಸೂಚನೆ ನೀಡಿದೆ. ಬಿರು ಬೇಸಿಗೆುಂಲ್ಲಿ ಬಿಸಿಲಿನ ಝಳದ ಬೆನ್ನಲ್ಲೇ ಕಾಡ್ಗಿಚ್ಚಿನಂತಹ ಅಗ್ನಿ ಅನಾಹುತಗಳೂ ಹೆಚ್ಚಾಗಿೆುೀಂ ಸಂಭವಿಸುತ್ತವೆ. ಇದರ ಜೊತೆ ಜೊತೆಗೇ ಬೇಸಿಗೆಯು ಅನಾರೋಗ್ಯಕ್ಕೂ ಕಾರಣವಾಗಲಿದೆ. ಹಾಗಾದರೆ ಬೇಸಿಗೆುಂಲ್ಲಿ ನಾವು ಹೇಗಿರಬೇಕು? ಸುಡುವ ಸೂಂರ್ುನಿಂದ ರಕ್ಷಿಸಿಕೊಳ್ಳುವುದು ಹೇಗೆ? ಬಿಸಿಲಿನಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ…
ಬೇಸಿಗೆ ಶುರುವಾಗುವುದು ಾಂವಾಗ?
ಬೇಸಿಗೆ ಸಾವಾನ್ಯವಾಗಿ ಫೆಬ್ರವರಿ ಅಂತ್ಯ ಅಥವಾ ವಾರ್ಚ್ ಪ್ರಾರಂಭದಿಂದ ಶುರುವಾಗಿ ಜೂನ್ ಆರಂಭದವರೆಗೆ ಇರುತ್ತದೆ. ಆದರೆ ವಾನ್ಸೂನ್ ತಡವಾದರೆ ಅದು ಜೂನ್ ಮೊದಲ ವಾರದವರೆಗೂ ವಿಸ್ತರಿಸಬಹುದು.
ಹಲವು ರೋಗಗಳಿಗೆ ಆಹ್ವಾನ:
ಬೇಸಿಗೆುುಂ ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಚರ್ಮ, ಕೂದಲು ಮತ್ತು ಆರೋಗ್ಯ ಸಮಸ್ಯೆಗಳಾದ ಸನ್‌ಸ್ಟ್ರೋಕ್ ಮತ್ತು ಅತೀ ಶಾಖ, ನಿರ್ಜಲೀಕರಣ ಇತ್ಯಾದಿಗಳು ಸಂಭವಿಸಬಹುದು. ಹೀಗಾಗಿ ಇವುಗಳಿಂದ ಬೇಸಿಗೆುಂ ತಿಂಗಳುಗಳಲ್ಲಿ ಆರೋಗ್ಯವನ್ನು ರಕ್ಷಿಸಿಕೊಳ್ಳುವುದೂ ಒಂದು ಸವಾಲಾಗಿದೆ.
ಸಾಕಷ್ಟು ನೀರು ಕುಡಿುುಂತ್ತಲೇ ಇರಿ:
ದಿನವಿಡೀ ಸಾಕಷ್ಟು ನೀರು ಕುಡಿಯಿರಿ. ಹಣ್ಣಿನ ರಸ, ಮಜ್ಜಿಗೆ ಸೇರಿದಂತೆ ಲಭ್ಯವಿರುವ ಆರೋಗ್ಯಕರವೆನಿಸುವ ದ್ರವ ಪದಾರ್ಥಗಳನ್ನು ಕುಡಿಯಬೇಕು. ಸಕ್ಕರೆ ಪಾನೀುಂಗಳು ಮತ್ತು ಆಲ್ಕೋಹಾಲ್ ನಿಂದ ದೂರ ಇರಿ. ಏಕೆಂದರೆ ಅವು ನಿಮ್ಮನ್ನು ನಿರ್ಜಲೀಕರಣಗೊಳಿಸುವ ಸಾಧ್ಯತೆಯೇ ಹೆಚ್ಚು.
ಬಿಸಿಲಿಗೆ ಹೋಗುವಾಗ ಸನ್‌ಸ್ಕ್ರೀನ್ ಧರಿಸಿ:
ಕೆಲವರಿಗೆ ಸನ್ ಬರ್ನಿಂಗ್ ತುಂಬಾ ಕಾಡುತ್ತದೆ. ಮುಖ ಮತ್ತು ಮೈಚರ್ಮ ಸುಟ್ಟಂತಾಗುತ್ತದೆ. ಸಭೆ,ಸಮಾರಂಭಗಳಿಗೆ ಹೋಗಬೇಕಾದಾಗ ಮಾನಸಿಕವಾಗಿ ಕಿರಿ ಕಿರಿ ಮತ್ತು ಹಿಂಜರಿಕೆಯನ್ನು ಈ ಸನ್ ಬರ್ನಿಂಗ್ ಉಂಟು ಮಾಡುತ್ತದೆ. ಹಾಗಾಗಿ ಹೊರಗೆ ಹೋಗುವ ಮೊದಲು ಸನ್‌ಸ್ಕ್ರೀನ್ ಅನ್ನು ಹಚ್ಚಿ. ಬಿಸಿಲಿನಲ್ಲಿ ಬರಿ ಮೈನಲ್ಲಿ ಹೊರಗೆ ಹೋಗುವುದನ್ನು ಆದಷ್ಟು ತಪ್ಪಿಸಿ,ತೋಳು ಮತ್ತು ಮೈಯನ್ನು ಪೂರ್ತಿ ಮುಚ್ಚಿಕೊಳ್ಳುವಂತಹ ಉತ್ತಮ ಗುಣಮಟ್ಟದ ಹಗುರವಾದ ಹತ್ತಿ (ಕಾಟನ್)ಬಟ್ಟೆಗಳನ್ನು ಧರಿಸುವುದು ಉತ್ತಮ.ದೇಹದ ಉಷ್ಣಾಂಶವನ್ನು ಇವು ಕಡಿಮೆಗೊಳಿಸುತ್ತವೆ.
ಟೋಪಿ, ಛತ್ರಿ, ಕನ್ನಡಕ, ನೀರಿನ ಬಾಟಲಿ ಜೊತೆಯಿರಲಿ:
ನೀವು ಬೇಸಿಗೆುಂಲ್ಲಿ ಮನೆಯಿಂದ ಹೊರ ಹೋಗುವಾಗ ಒಂದು ಬ್ಯಾಗ್ ನಿಮ್ಮ ಜೊತೆಯಿರಲಿ. ಅದರಲ್ಲಿ ಒಂದು ಬಾಟಲಿ ನೀರು, ತಂಪು ಕನ್ನಡಕ, ಟೋಪಿ, ಛತ್ರಿ ಇರಲಿ.
ಸದಾ ಕಾಲ ತಂಪಾಗಿರಿ:
ದಿನನಿತ್ಯ ಒಳಾಂಗಣಗಳಲ್ಲಿ ಅಥವಾ ಮಬ್ಬಾದ ಪ್ರದೇಶಗಳಲ್ಲಿ, ಗಿಡ,ಮರ ನೆರಳು ಇದ್ದು ತಂಪಾದ ವಾತಾವರಣ್ಲಲಿ ಇರಲು ಯತ್ನಿಸಿ. ತಂಪಾಗಿರಲು ಹವಾನಿುಂಂತ್ರಣ ಅಥವಾ ಫ್ಯಾನ್ ಬಳಸಬಹುದಾದರೂ ಅಗತ್ಯಕ್ಕನುಗುಣವಾಗಿದ್ದರೆ ಒಳಿತು.
ಆರೋಗ್ಯಕರ ಆಹಾರ ಸೇವಿಸಿ:
ಸಾಕಷ್ಟು ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ತಿನ್ನಬೇಕು ಮತ್ತು ಕೊಬ್ಬಿನ ಮತ್ತು ಕರಿದ ಆಹಾರ ಸೇವನೆಯನ್ನು ಸಾಕಷ್ಟು ದೂರ ಇಟ್ಟರೆ ಒಳಿತು. ಇದು ನಿಮ್ಮ ದೇಹವನ್ನು ಆರೋಗ್ಯಕರವಾಗಿ ಮತ್ತು ಶಕ್ತಿುುಂತವಾಗಿರಿಸಲು ಸಹಾುಂ ವಾಡುತ್ತದೆ.
ಸುರಕ್ಷಿತ ವ್ಯಾಾಂಮ:
ತಾಪವಾನವು ತಂಪಾಗಿರುವಾಗ ಮುಂಜಾನೆ ಅಥವಾ ಸಂಜೆ ಸಮಯದಲ್ಲಿ ತಂಪಾದ ಅನುಕೂಲಕರ ವಾತಾವರಣದಲ್ಲಿ ವ್ಯಾಾಂಮ ವಾಡಿ. ಕೀಟಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ
ಸೊಳ್ಳೆಗಳು ಮತ್ತು ಉಣ್ಣಿಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಕೀಟ ನಿವಾರಕವನ್ನು ಬಳಸಿ ಮತ್ತು ಹೆಚ್ಚಿನ ಕೀಟ ಚಟುವಟಿಕೆಯಿರುವ ಪ್ರದೇಶಗಳಲ್ಲಿ ಉದ್ದನೆುಂ ತೋಳುಗಳುಳ್ಳ ಅಂಗಿ ಮತ್ತು ಕೀಟಗಳು ಕಚ್ಚಿದರೆ ಅಥವಾ ಮೇಲೆ ಕುಳಿತರೆ ನಿಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುವಂತಹ ಪ್ಯಾಂಟುಗಳನ್ನು ಧರಿಸಿ.
ಅಗತ್ಯ ಔಷಧ ಸನಿಹದಲ್ಲಿರಲಿ:
ಪ್ರಥಮ ಚಿಕಿತ್ಸಾ ಕಿಟ್ ಮನೆಯಲ್ಲಿರಲಿ ಅಥವಾ ನಿಮಗೆ ತಕ್ಷಣ ಲಭ್ಯವಾಗುವ ಸ್ಥಳದಲ್ಲಿರಲಿ ಮತ್ತು ಶಾಖದ ಹೊಡೆತ ಅಥವಾ ಕೀಟ ಕಡಿತದಂತಹ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ವೈದ್ಯರು ಸೂಚಿಸಿದ ಅಗತ್ಯ ಕ್ರೀಮ್, ನೋವುನಿವಾರಕಗಳು, ಔಷಧಗಳು ಲಭ್ಯವಿರುವಂತೆ ನೋಡಿಕೊಳ್ಳಿ.