ಭಾರತದ ಸಾಲ್ವೆಂಟ್ ಎಕ್ಸ್ಟ್ರಾಕ್ಟರ್ಸ್ ಅಸೋಸಿಯೇಷನ್ (ಎಸ್‌ಇಎ) ಪ್ರಕಾರ, ಜುಲೈ ತಿಂಗಳಲ್ಲಿ ಖಾದ್ಯ ತೈಲ ಆಹಾರಗಳ ರಫ್ತು ಪ್ರಮಾಣವು ಶೇ.೧೯ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೧.೯೧ಲಕ್ಷ ಟನ್ನುಗಳಷ್ಟಿದ್ದದ್ದು ಈಗ ೨.೨೭ ಲಕ್ಷ ಟನ್ನುಗಳಿಗೆ ಏರಿಕೆಯಾಗಿದೆ. ಏಪ್ರಿಲ್- ಜುಲೈ ಅವಧಿಯಲ್ಲಿ ರಫ್ತು ಪ್ರಮಾಣ ಶೇ.೩೫ರಷ್ಟು ವೃದ್ಧಿಸಿದೆ.