Light
Dark

ಆಂದೋಲನ ಓದುಗರಪತ್ರ : 20 ಬುಧವಾರ 2022

ಪರಿಷ್ಕೃತ ತೆರಿಗೆ ರದ್ದು ಮಾಡಿ

ಜಿಎಸ್‌ಟಿ ಸಮಿತಿಯ ನೇತೃತ್ವ ವಹಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತರಾಮನ್ ಅವರಿಗೆ ಬಡತನ ಬೆಗೆಯಿಂದ ಗಾರೆ ಹೊರುವ, ಸೈಜುಕಲ್ಲು ಹೊರುವ, ಕೂಲಿ ಮಾಡುವ, ಬಡ ಕುಟುಂಬದ ಅನುಭವದ ಕೊರತೆ ಇದೆ. ಆ ಕಾರಣಕ್ಕಾಗಿ ಬಡವರು ಶ್ರಮಿಕರನ್ನು ಬಡಿದು ಬಿಗುವ ಬಿಜೆಪಿ ಸರ್ಕಾರದ ತೆರಿಗೆ ಹೇರಿಕೆ ಮಾಡಲು ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಈಗಾಗಲೇ ಅಡುಗೆ ಅನಿಲ, ದವಸಧಾನ್ಯಗಳು, ಪೆಟ್ರೋಲ್, ಡಿಸೇಲ್, ದುಪ್ಪಟ್ಟು ವಾಹನ ತೆರಿಗೆ, ವಿಮೆ ಹಣ ಹೆಚ್ಚಳದಿಂದ ಜನತೆ ತತ್ತರಿಸಿದ್ದಾರೆ. ಈಗ ಹಾಲು, ಹಪ್ಪಳ, ಉಪ್ಪಿನಕಾಯಿ,ಪೆನ್ನು ಪೆನ್ಸಿಲ್ ಮೇಲೂ ಎಖ (ಗಬ್ಬರ್ ಸಿಂಗ್ ಟ್ಯಾಕ್ಸ್) ಏರಿಕೆ ಮಾಡಿದೆ. ಏರಿಕೆಯ ಪರಿಣಾಮಗಳ ಬಗ್ಗೆ ಸರಿಯಾಗಿ ಚಿಂತಿಸದೆ ಎಲ್ಲಾ ಭಾರವನ್ನು ಜನರ ಮೇಲೆ ಹೇರುವ ಬಿಜೆಪಿಯ ಡಬ್ಬಲ್ ಇಂಜನ್ ಸರ್ಕಾರದ ನಿರ್ಧಾರ ಖಂಡನಾರ್ಹ. ಈ ರೀತಿಯ ಜನವಿರೋಧಿ, ಬಡ, ಮಧ್ಯಮವರ್ಗದ ಬದುಕಿಗೆ ದುಬಾರಿ ಯಾಗುವ ಈ ಎಖ ಪರಿಷ್ಕೃತ ತೆರಿಗೆಯನ್ನು ರದ್ದು ಮಾಡಬೇಕು. ಆ ಮೂಲಕ ಬಡವರು ಕೂಲಿಕಾರ್ಮಿಕರು ಶ್ರಮಿಕರ ನೇರವಿಗೆ ನಿಲ್ಲುವಂತೆ ಒತ್ತಾಯಿಸುತ್ತೇವೆ.
-ಪಿ.ರಾಜು, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘ.


ದುಬಾರಿ ದುನಿಯಾ?

ಎರಡು ದಿನಗಳಿಂದ ದೇಶದಲ್ಲಿ ದುಬಾರಿ ದುನಿಯಾ ಬಗ್ಗೆಯೇ ಮಾತು. ಹೌದು ! ಏಕೆಂದರೆ ಇತ್ತೀಚೆ ೆಕೇಂದ್ರಸರ್ಕಾರವು ಬೆಳಗಾದರೆ ಪ್ರತಿ ಜನರು ಉಪಯೋಗಿಸುವ ಅವಶ್ಯಕ ವಸ್ತುಗಳಾದ ಹಾಲು, ಮೊಸರು, ಲಸ್ಸಿ, ಅಕ್ಕಿ, ಗೋಧಿ ಮುಂತಾದವುಗಳ ಮೇಲೆ ಶೇ.೫ರಷ್ಟು ತೆರಿಗೆ ಹೇರಿದೆ. ದೇಶದಲ್ಲಿ ಹಣದುಬ್ಬರ ಶೇ.೭ಕ್ಕಿಂತ ಮೀರಿದೆ, ಅಡುಗೆ ಅನಿಲ ಬೆಲೆ ಏರಿದೆ, ಕರೊನಾ ಮಹಾಮಾರಿಯಿಂದ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಇವೆಲ್ಲ ಕಾಣದ ಸರ್ಕಾರ ತೆರಿಗೆ ಹೆಚ್ಚಿಸಿದೆ. ಈ ರೀತಿಯ ಏರಿಕೆಯಾದರೆ ಬಡ ಮತ್ತು ಮಧ್ಯಮ ವರ್ಗದ ಜನರು ಏನು ಮಾಡಬೇಕು? ಇದು ಪ್ರಜಾಪ್ರಭುತ್ವ ದೇಶವಾ ಅಥವಾ ಸರ್ವಾಧಿಕಾರಿದೇಶವಾ ?ತಿಳಿಯದಾಗಿದೆ. ಕೇಂದ್ರಸರ್ಕಾರದ ಈರೀತಿಯ ನಿಲುವಿನಿಂದ ಜನರಿಗೆ ‘ಅಚ್ಛೆದಿನ್’ ಬರುವುದಿಲ್ಲ ಬದಲು ‘ಭೂರಾದಿನ್’ ಬರುತವೆ.

-ಮಣಿಕಂಠ ಟಿ, ಪತ್ರಿಕೋದ್ಯಮವಿದ್ಯಾರ್ಥಿ, ಮೈಸೂರು.


ನಷ್ಟದಲ್ಲಿರುವ ಬಿಸ್ಸೆನ್ನೆಲ್‌ಗೆ ಕಾಯಕಲ್ಪ ನೀಡಿ

ಭಾರಿ ನಷ್ಟಕ್ಕೆ ಸಿಲುಕಿರುವ ಸಾರ್ವಜನಿಕ ವಲಯದ ದೂರಸಂಪರ್ಕ ಸಂಸ್ಥೆಯಾದ ಬಿಎಸ್‌ಎನ್‌ಎಲ್‌ನ ಭವಿಷ್ಯದ ಸ್ಥಿತಿಗತಿಯ ಬಗ್ಗೆ ಸರಕಾರ ಚಿಂತನೆ ನಡೆಸಬೇಕಿದೆ. ಬಿಎಸ್‌ಎನ್‌ಎಲ್ ನಷ್ಟಕ್ಕೆ ಕಾರಣಗಳು ಹಲವಾರಿವೆ. ಸರಕಾರ ೫ಜಿ ಹರಾಜಿಗೆ ಕಾರ್ಯಪ್ರವೃತ್ತವಾಗಿದ್ದರೂ, ಬಿಎಸ್‌ಎನ್‌ಎಲ್ ಇನ್ನೂ ೪ಜಿಯನ್ನೇ ಹೊಂದಿಲ್ಲ. ಇದರಿಂದ ಬಿಎಸ್‌ಎನ್‌ಎಲ್ ಚಂದಾದಾರರ ಸಂಖ್ಯೆಯ ಬೆಳವಣಿಗೆ ತೀವ್ರ ಮಂದಗತಿಯಲ್ಲಿದೆ. ನಗರ ಹಾಗೂ ತುಂಬಾ ಕುಗ್ರಾಮ ಅನಿಸುವಂತಹ ಗ್ರಾಮೀಣ ಪ್ರದೇಶಗಳಲ್ಲಿ ಬಿಎಸ್‌ಎನ್‌ಎಲ್‌ನ ನೆಟ್‌ವರ್ಕ್ ತುಂಬಾ ಸಮರ್ಥವಾಗಿದ್ದು, ಈಗಲೂ ಕೂಡ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿ ಹಾಗೂ ನೌಕರವರ್ಗ ಸೇರಿದಂತೆ ಲಕ್ಷಾಂತರ ಚಂದಾದಾರರು ಇದನ್ನೇ ಆಶ್ರಯಿಸಿದ್ದಾರೆ. ಹೀಗೆ ಹೆಚ್ಚು ಜನಸ್ನೇಹಿಯಾಗಿದ್ದರೂ ಮಾರುಕಟ್ಟೆಯ ತೀವ್ರ ಸ್ಪರ್ಧೆಯಿಂದ ಹಾಗೂ ಅದರ ದಕ್ಷ ನಿರ್ವಹಣೆಯ ಕೊರತೆಯಿಂದ ನಷ್ಟದತ್ತ ಸಾಗಿದೆ. ಕೇಂದ್ರಸರ್ಕಾರದಿಂದ ತುರ್ತು ನೆರವು ಇಲ್ಲದೇ ಬಿಎಸ್‌ಎನ್‌ಎಲ್ ನಿರ್ವಹಿಸುವುದು ಕಷ್ಟಸಾಧ್ಯವಾಗಿದೆ. ಕೇಂದ್ರಸರ್ಕಾರ ಯಾವುದೇ ಕಾರಣಕ್ಕೂ ಬಿಎಸ್‌ಎನ್‌ಎಲ್‌ಅನ್ನು ಮುಚ್ಚಬಾರದು. ಬದಲಾಗಿ ಕಾಯಕಲ್ಪ ನೀಡಿ, ೪ಜಿ ಸೇವೆಯನ್ನು ದೇಶದಾದ್ಯಂತ ತುರ್ತಾಗಿ ಆರಂಭಿಸಲಿ.

-ಹರಳಹಳ್ಳಿಪುಟ್ಟರಾಜು, ಪಾಂಡವಪುರ.


ಸಿಂಧುಗೆ ಅಭಿನಂದನೆ!!

ಭಾರತದ ನಂಬರ್ ಒನ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂದು ಸಿಂಗಾಪುರ ಓಪನ್ ಸೂಪರ್ -೫೦೦ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದ್ದಾರೆ. ಈ ಮೂಲಕ ಚೊಚ್ಚಲ ಸಿಂಗಾಪುರ ಓಪನ್ ಟೂರ್ನಿ ಚಾಂಪಿಯನ್ ಆಗಿದ್ದಾರೆ. ಸಿಂಧು ಫೈನಲ್ ಪಂದ್ಯದಲ್ಲಿ ಚೀನಾದ ಆಟಗಾರ್ತಿ ವಾಂಗ್ ಝೀ ವಿರುದ್ದ ಗೆಲುವು ಸಾಧಿಸಿದ್ದಾರೆ. ಇದು ನಮ್ಮ ದೇಶವೇ ಹೆಮ್ಮೆ ಪಡುವ ವಿಚಾರ. ನಮ್ಮ ದೇಶದ ಬ್ಯಾಡ್ಮಿಂಟನ್ ಯುವ ಪ್ರತಿಭೆಗಳಿಗೆ ಆಕೆ ಸ್ಪೂರ್ತಿ!

-ಅನನ್ಯ ಜಿ, ಮಹಾರಾಜ ಕಾಲೇಜು ಮೈಸೂರು.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ