ರಫ್ತು ತಗ್ಗಿ, ಆಮದು ಹಿಗ್ಗಿದ್ದು ಭಾರತದ ವ್ಯಾಪಾರ ಕೊರತೆಯು ಆಗಸ್ಟ್‌ನಲ್ಲಿ ದುಪ್ಪಟ್ಟಾಗಿದೆ. ರಫ್ತು ೩೩ ಬಿಲಿಯನ್ ಡಾಲರ್‌ಗಳಷ್ಟಿದ್ದು, ಶೇ.೧.೧೫ರಷ್ಟು ಕುಗ್ಗಿದೆ. ಆಮದು ೬೧.೬೮ ಬಿಲಿಯನ್ ಡಾಲರ್‌ಗಳಷ್ಟಿದ್ದು ಶೇ.೩೭ರಷ್ಟು ಏರಿದೆ. ವ್ಯಾಪಾರ ಕೊರತೆ ೨೮.೬೮ ಬಿಲಿಯನ್ ಡಾಲರ್‌ಗಳಿಗೆ ಏರಿದೆ. ೨೦೨೧ ಆಗಸ್ಟ್ ನಲ್ಲಿ ವ್ಯಾಪಾರ ಕೊರತೆ ೧೧.೭೨ ಬಿಲಿಯನ್ ಡಾಲರ್‌ಗಳಷ್ಟಿತ್ತು.