Mysore
17
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಬದಲಾಗುತ್ತಿರುವ ದಾರಿ, ದಾರಿ ತಪ್ಪುತ್ತಿರುವ ಮಂದಿ

 

ಸಾಮಾಜಿಕ ಮಾಧ್ಯಮಡಿಜಿಟಲ್ ಮಾಧ್ಯಮನವಮಾಧ್ಯಮ ಯಾವುದೇ ಹೆಸರಿನಲ್ಲಿ ಕರೆಯಬಹುದುಅವು ಇಂದು ತಮ್ಮದೇ ಆದ ಛಾಪನ್ನು ಮೂಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆಎಲ್ಲ ಕ್ಷೇತ್ರಗಳಲ್ಲೂಈ ದಿನಗಳಲ್ಲಿ ಸುದ್ದಿಗಳ ಸತ್ಯಾಸತ್ಯತೆಯನ್ನು ತಿಳಿಯುವುದೇ ಹರಸಾಹಸಟ್ವಿಟ್ಟರ್ಫೇಸ್‌ಬುಕ್ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲ ತಾಣಗಳುಅವುಗಳ ಜೊತೆಗೆ ಎಲ್ಲೆಂದರಲ್ಲಿ ಯುಟ್ಯೂಬ್ ಮೂಲಕ ಬರುವ ಮಂದಿ… ವಾಟ್ಸಾಪ್ ಗುಂಪುಗಳು… ಒಂದೇ ಎರಡೇ

ಇದು ಸಿನಿಮಾ ಕ್ಷೇತ್ರದಲ್ಲಿ ಇತ್ತೀಚೆಗೆ ಹೆಚ್ಚಾಗತೊಡಗಿದೆಇತರ ಭಾಷಾ ಚಿತ್ರೋದ್ಯಮಗಳಲ್ಲಿ ಇವುಗಳು ಬೀರುವ ಪರಿಣಾಮಗಳ ಕುರಿತಂತೆ ಪರವಿರೋಧ ಅಭಿಪ್ರಾಯಗಳಿವೆಸುದ್ದಿಗಳ ವಿಷಯಕ್ಕೆ ಬಂದರೆಸತ್ಯಮಿಥ್ಯೆಗಳನ್ನು ಬೇರ್ಪಡಿಸುವುದು ಕಷ್ಟಸಾಧ್ಯ ಎನ್ನುವುದು ಬಲ್ಲವರ ಮಾತುಸಿನಿಮಾ ಕ್ಷೇತ್ರ ಇದರಿಂದ ಹೊರತಲ್ಲ.

ಎರಡು ವಾರಗಳ ಹಿಂದೆ ನಿಧನರಾದ ಸ್ಪಂದನಾ ವಿಜಯ ರಾಘವೇಂದ್ರ ಅವರ ಕುರಿತಂತೆ ವಿಧವಿಧದ ಸುದ್ದಿಗಳುತಾವೇ ಸ್ವತಃ ದೃಕ್ಷಾಕ್ಷಿ ಎಂಬಂತೆ ಬಂದ ವರದಿಗಳಲ್ಲಿ ಬಹುತೇಕ ಗಾಳಿಮಾತುಗಳೇಯುಟ್ಯೂಬ್ ವಾಹಿನಿಗಳ ಮೇಲೆ ಯಾವುದೇ ನಿಯಂತ್ರಣ ಬೇರೆ ಎಲ್ಲೂ ಇಲ್ಲಆದರೆ ಕೇರಳದಲ್ಲಿ ಅಲ್ಲಿನ ಚಿತ್ರೋದ್ಯಮಅವುಗಳಿಗೆ ನಿಷೇಧ ಹೇರಿದ್ದಾಗಿ ವರದಿಯಾಗಿತ್ತುತಮ್ಮ ಚಿತ್ರಗಳ ಪತ್ರಿಕಾಗೋಷ್ಠಿಪೂರ್ವಪ್ರದರ್ಶನಗಳಿಗೆ ಈ ವಾಹಿನಿಗಳ ಮಂದಿಯನ್ನು ಆಹ್ವಾನಿಸದಿರಲು ನಿರ್ಧರಿಸಿದ್ದಾಗಿ ಹೇಳಿತ್ತು ಆ ವರದಿಮಾತ್ರವಲ್ಲಸರ್ಕಾರಕ್ಕೂ ಉದ್ಯಮದ ಪ್ರಾತಿನಿಧಿಕ ಸಂಸ್ಥೆಗಳು ಪತ್ರವನ್ನು ಬರೆದುಇವುಗಳ ನಿಯಂತ್ರಣಕ್ಕೆ ಸೂಕ್ತ ಕಾನೂನು ತರಬೇಕೆಂದೂ ಹೇಳಿತ್ತು.

ಡಿಜಿಟಲ್ ಪ್ರೊಮೋಶನ್ ಚಿತ್ರಗಳ ಪ್ರಚಾರಕ್ಕೆ ಹೊಸದಾಗಿ ಲಭ್ಯವಿರುವ ಇನ್ನೊಂದು ದಾರಿಯುಟ್ಯೂಬ್ ವಾಹಿನಿಗಳ ಮೂಲಕ ಈ ಪ್ರಚಾರಇವುಗಳು ಬರುವ ಮೊದಲುಸಿನಿಮಾಗಳ ಪ್ರಚಾರಕ್ಕೆ ಭಿತ್ತಿಪತ್ರಗಳುಕಟೌಟ್‌ಗಳುಸೈಕಲ್ಎತ್ತಿನ ಗಾಡಿಗಳಲ್ಲಿ ಹಿಂದೆ ನಾಟಕಗಳ ಪ್ರಚಾರದಂತೆ ಪ್ರಚಾರಚಿತ್ರಮಂದಿರಗಳಲ್ಲಿ ಸ್ಲೆ ಡ್‌ಗಳ ಮೂಲಕ ಪ್ರಚಾರ ಇರುತ್ತಿತ್ತುಜೊತೆಗೆ ಪತ್ರಿಕೆಗಳಲ್ಲಿ ಜಾಹೀರಾತುಸುದ್ದಿಲೇಖನಸಂದರ್ಶನವಿಶ್ಲೇಷಣೆವಿಮರ್ಶೆಗಳೂ ಚಿತ್ರಗಳ ಪ್ರಚಾರಕ್ಕೆ ಪೂರಕ ಆಗುತ್ತಿದ್ದವುಕಿರುತೆರೆ ನಡುಮನೆಗೆ ಕಾಲಿಟ್ಟ ನಂತರ ಅದು ಕೂಡ ಪ್ರಚಾರಕ್ಕೆ ದಾರಿ ಮಾಡಿಕೊಟ್ಟದ್ದು ಹೌದುಆರಂಭದ ದಿನಗಳಲ್ಲಿ ಉದ್ಯಮ ಇದು ನಮ್ಮ ಪಾಲಿಗೆ ಶಾಪವಾಗಬಹುದು ಎಂದುಕೊಂಡಿದ್ದ ಉಪಗ್ರಹ ವಾಹಿನಿಗಳು ಚಿತ್ರೋದ್ಯಮದ ಪಾಲಿಗೆ ಇದೀಗ ವರವಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯಪರಸ್ಪರ ಕೊಡುಕೊಳು ಇಲ್ಲಿ ನಡೆಯುತ್ತಿದೆಈ ಎರಡು ಮಾಧ್ಯಮಗಳ ನಂತರ ಹೊಸದಾಗಿ ತಲೆ ಎತ್ತಿರುವ ಯುಟ್ಯೂಬ್ ವಾಹಿನಿಗಳಲ್ಲಿ ವಿವಿಧ ಕ್ಷೇತ್ರಗಳ ಮಾಹಿತಿವಿವರವಿಶೇಷಗಳನ್ನು ಹೇಳುವವು ಇವೆಅವುಗಳಲ್ಲಿ ಕೆಲವು ಕೋಟ್ಯಂತರ ಚಂದಾದಾರರನ್ನು ಹೊಂದಿದವೂ ಇವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವು ತಮ್ಮದೇ ಆದ ಮಾಹಿತಿಗಳನ್ನು ನೀಡುವುದರ ಜೊತೆಗೆ ಸಾಕಷ್ಟು ಆರ್ಥಿಕ ಲಾಭವನ್ನೂ ಮಾಡುತ್ತಿರುತ್ತವೆಗೂಗಲ್ ಜಾಹೀರಾತುಗಳುಆ ವಾಹಿನಿಗಳ ಕಾರ್ಯಕ್ರಮಗಳನ್ನು ವೀಕ್ಷಿಸುವ ಮಂದಿಯ ಲೆಕ್ಕಕ್ಕೆ ಅನುಗುಣವಾಗಿ ಸಂಬಂಧಪಟ್ಟವರಿಗೆ ಪಾವತಿ ಆಗುತ್ತಿರುತ್ತವೆ.

ಡಿಜಿಟಲ್ ಪ್ರೊಮೋಶನ್ಡಿಜಿಟಲ್ ಮಾರ್ಕೆಟಿಂಗ್ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಂದಿಯನ್ನು ಒಟ್ಟು ಸೇರಿಸುವ ಸಂಘಟಕರೂ ಅಲ್ಲೊಬ್ಬರು ಇಲ್ಲೊಬ್ಬರು ಇದ್ದಾರೆಸಂಘಟಕರೆನ್ನಿಮಧ್ಯವರ್ತಿಗಳೆನ್ನಿಕನ್ನಡ ಚಿತ್ರರಂಗದಲ್ಲೂ ಈ ಬೆಳವಣಿಗೆ ಇದೆಆದರೆ ಈ ಯುಟ್ಯೂಬ್ ವಾಹಿನಿಗಳನ್ನು ನೋಡುವವರ ಸಂಖ್ಯೆ ಎಷ್ಟುಅವರಲ್ಲಿ ಎಷ್ಟು ಮಂದಿ ಸಂಬಂಧಪಟ್ಟ ಚಿತ್ರಗಳನ್ನು ನೋಡಲು ಬರುತ್ತಾರೆಬರಬಹುದು ಎನ್ನುವ ಕುರಿತಂತೆಅಧ್ಯಯನಗಳು ಬೇರೆ ದೇಶಗಳಲ್ಲಿ ಆದಂತೆ ಇಲ್ಲೇನೂ ಆದಂತಿಲ್ಲ.

ಗಮನಿಸಿಕಾಂತಾರ ಚಿತ್ರ ಕಳೆದ ವರ್ಷ ಸೆಪ್ಟೆಂಬರ್ ತಿಂಗಳ ಕೊನೆಯ ವಾರ ವಿಶ್ವಾದ್ಯಂತ ತೆರೆ ಕಂಡಿತಷ್ಟೇಅದು ಕನ್ನಡದಲ್ಲಿ ಮಾತ್ರ ತಯಾರಾಗಿದ್ದ ಚಿತ್ರಎರಡು ವಾರಗಳ ಕಾಲವಿಶ್ವಾದ್ಯಂತ ಚಿತ್ರರಸಿಕರು ಅದನ್ನು ಕನ್ನಡದಲ್ಲೇ ನೋಡಿದರುಯುಟ್ಯೂಬ್ ವಾಹಿನಿಗಳು ನಾಮುಂದುತಾಮುಂದು ಎಂಬಂತೆ ದೇಶಾದ್ಯಂತ ಆ ಚಿತ್ರದ ಕುರಿತಂತೆ ಹೇಳಿದವುತುಳುನಾಡಿನಲ್ಲಿ ಪ್ರಚಲಿತವಿರುವ ಭೂತಾರಾಧನೆಯ ಕುರಿತಂತೆ ದೇಶವಿದೇಶಗಳಲ್ಲಿ ವಿಶೇಷ ರೀತಿಯಲ್ಲಿ ತಿಳಿಯುವಂತೆ ಮಾಡಿದ್ದು ಈ ವಾಹಿನಿಗಳೇಇವು ಯಾವುವೂ ನಿರ್ಮಾಪಕರಿಂದ ಪ್ರಚಾರಕ್ಕಾಗಿ ಶುಲ್ಕ ಪಡೆದವುಗಳಾಗಿರಲಿಲ್ಲಚಿತ್ರವೇ ಅಂತಹದೊಂದು ವಾತಾವರಣವನ್ನು ಸೃಷ್ಟಿಸಿತ್ತು.

ಅಂತಹದೇ ಉದಾಹರಣೆ ಕಳೆದ ವಾರ ತೆರೆಕಂಡ ‘ಜೈಲರ್’ ಚಿತ್ರರಜನಿಕಾಂತ್ ಮುಖ್ಯ ಭೂಮಿಕೆಯ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ಮೋಹನ್‌ಲಾಲ್ಜಾಕಿಶ್ರಾ– ಮುಂತಾದವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದರುಶಿವಣ್ಣ ಅಭಿನಯದ ಕುರಿತಂತೆ ಸಾಮಾಜಿಕ ತಾಣಗಳಲ್ಲಿ ಎಲ್ಲೆಡೆ ಶಹಬ್ಬಾಸ್ ಗಿರಿ ವ್ಯಕ್ತವಾಗುತ್ತಿದೆದಕ್ಷಿಣದ ಎಲ್ಲ ರಾಜ್ಯಗಳ ಮಾಧ್ಯಮಗಳಿಂದಲೂ ನ ಭೂತೋ ಎನ್ನುವಂತಹ ಮಾತುಮೆಚ್ಚುಗೆಇವೆಲ್ಲ ಜಾಹೀರಾತೋಡಿಜಿಟಲ್ ಮಾರ್ಕೆಟಿಂಗ್‌ನಿಂದ ಆದ ಪ್ರಚಾರವೋ ಅಲ್ಲಅದಕ್ಕೆ ಮಧ್ಯವರ್ತಿಗಳ ಸಂಪರ್ಕವೂ ಇದ್ದಂತಿಲ್ಲ.

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಇಂತಹದೊಂದು ಬೆಳವಣಿಗೆಯ ಮಾತುಗಳು ಹೆಚ್ಚು ಹೆಚ್ಚು ಕೇಳಿಬರತೊಡಗಿದೆಪ್ಯಾನ್ ಇಂಡಿಯಾ ಹೆಸರಲ್ಲಿಎಲ್ಲ ಡಿಜಿಟಲ್ ಪ್ರೊಮೋಶನ್‌ಗೆ ಲಕ್ಷಗಳಲ್ಲಿ ನೀಡಬೇಕಾಗುತ್ತದೆ ಎಂದು ನಿರ್ಮಾಪಕರ ಶೋಷಣೆ ನಡೆಯುತ್ತಿದೆ ಎನ್ನುವ ದೂರೂ ಇದೆ.

ಬಹುಕೋಟಿ ವೆಚ್ಚದಲ್ಲಿ ಚಿತ್ರಗಳನ್ನು ನಿರ್ಮಿಸುವವರು ಕನ್ನಡ ಚಿತ್ರರಂಗದಲ್ಲಿ ಬಹಳ ಕಡಿಮೆಎರಡು ಮೂರು ಸಂಸ್ಥೆಗಳನ್ನು ಹೊರತುಪಡಿಸಿದರೆಉಳಿದ ನಿರ್ಮಾಪಕರಲ್ಲಿ ಕೆಲವರು ಹತ್ತು ಕೋಟಿಯ ಒಳಗೆ ಚಿತ್ರ ನಿರ್ಮಿಸಬಹುದುಒಂದೆರಡು ಕೋಟಿಯ ಗಡಿ ದಾಟದವರೇ ಹೆಚ್ಚುವರ್ಷದಲ್ಲಿ ತಯಾರಾಗುವ 350ರಿಂದ 400ರವರೆಗಿನ ಕನ್ನಡ ಚಿತ್ರಗಳಲ್ಲಿ ಬಹಳಷ್ಟು ಚಿತ್ರಗಳ ನಿರ್ಮಾಣ ವೆಚ್ಚ ಎಂಟಂಕಿ ದಾಟುವುದಿಲ್ಲ.

ಚಿತ್ರ ನಿರ್ಮಾಣಕ್ಕೆ ಒಂದು ಕೋಟಿ ರೂಕೂಡ ಬಂಡವಾಳ ಹೂಡಲು ಸಾಧ್ಯವಾಗದೆ ಇರುವವರು ಡಿಜಿಟಲ್ ಪ್ರಮೋಶನ್‌ಗಾಗಿ 15-20 ಲಕ್ಷ ರೂಪಾಯಿ ನೀಡುವುದು ಸಾಧ್ಯವೇಅದರ ನಂತರ ಪತ್ರಿಕಾ ಜಾಹೀರಾತುಗಳುವಾಹಿನಿಗಳಲ್ಲಿ ಜಾಹೀರಾತುಹೀಗೆಚಿತ್ರ ನಿರ್ಮಾಣಕ್ಕಿಂತ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಸ್ಥಿತಿ ಇವತ್ತು ಬಂದಿದೆ ಎನ್ನುತ್ತಾರೆ ನಿರ್ಮಾಪಕರೊಬ್ಬರುಸಾಮಾಜಿಕ ಜಾಲ ತಾಣಗಳಲ್ಲಿಯುಟ್ಯೂಬ್ ವಾಹಿನಿಗಳಲ್ಲಿ ಪ್ರಚಾರಕ್ಕಾಗಿ ಅದೇ ಕೆಲಸ ಮಾಡುತ್ತಿದ್ದೇವೆ ಎಂದು ದಾರಿ ತಪ್ಪಿಸುವುದು ಸುಲಭಇಲ್ಲಿ ಆ ಕೆಲಸ ನಡೆದಿದೆಅದರಲ್ಲೂ ಹೊಸ ನಿರ್ಮಾಪಕರು ಹೀಗೆ ಅವರಿವರ ಮಾತು ಕೇಳಿ ದಾರಿ ತಪ್ಪುತ್ತಿದ್ದಾರೆ ಎಂದು ಕೇಳಿಬರುತ್ತಿರುವುದು ಹೊಸದೇನೂ ಅಲ್ಲ.

ಪಾನ್ ಇಂಡಿಯಾ ಚಿತ್ರಗಳು ಎನ್ನುವ ಹೆಸರಲ್ಲಿ ಕನ್ನಡದಲ್ಲಿ ನಿರ್ಮಿಸಿಇತರ ಭಾಷೆಗಳಿಗೆ ಡಬ್ ಮಾಡುವಇತರ ಯಾವುದಾದರೂ ಭಾಷೆಯಲ್ಲಿ ತಯಾರಾಗಿ ಕನ್ನಡವೂ ಸೇರಿದಂತೆ ಇತರ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗುವ ಈ ಚಿತ್ರಗಳ ಗೆಲುವಿಗೆ ಯುಟ್ಯೂಬ್ ವಾಹಿನಿಗಳ ಮೂಲಕ ಪ್ರಚಾರದಿಂದ ಗೆಲುವು ಸುಲಭಸಾಧ್ಯ ಎನ್ನುವುದನ್ನು ನಂಬುವ ನಿರ್ಮಾಪಕರಲ್ಲಿ ಬಹಳಷ್ಟು ಮಂದಿಗೆ ತಮ್ಮ ಚಿತ್ರ ತೆರೆಕಂಡು ಅವು ಗಲ್ಲಾಪೆಟ್ಟಿಗೆಯಲ್ಲಿ ಕೆಳಮುಖ ಮಾಡಿದಾಗಪ್ರಚಾರದ ಹೆಸರಲ್ಲಿ ಆದ ಅಪವ್ಯಯದ ಬಗ್ಗೆ ತಿಳಿಯಬಹದೇನೋ.

ಯಾವುದೇ ಸಂಸ್ಥೆ ಆರಂಭಿಸಲು ಅನುಮತಿತರಬೇತಿಇತ್ಯಾದಿ ಅಗತ್ಯಆದರೆ ಚಿತ್ರಗಳನ್ನು ನಿರ್ಮಿಸಲು ಯಾವುದೇ ತರಬೇತಿಪರವಾನಗಿ ಬೇಕಿಲ್ಲಹೂಡಲು ಬಂಡವಾಳ ಇದ್ದರೆ ಸಾಕುಈಗ ಈ ಡಿಜಿಟಲ್ ದಿನಗಳಲ್ಲಿಡಿಜಿಟಲ್ ಪ್ರಚಾರಡಿಜಿಟಲ್ ಪ್ರೊಮೋಶನ್ಡಿಜಿಟಲ್ ಮಾರ್ಕೆಟಿಂಗ್ ಮಾಡುವವರನ್ನು ಸೇರಿಸಲು ಈ ಡಿಜಿಟಲ್ ತಂತ್ರಜ್ಞಾನವನ್ನು ತಿಳಿದಿರಬೇಕಾದ್ದು ಏನೂ ಇಲ್ಲಚಿತ್ರರಂಗದಲ್ಲಿರುವವರ ಸಂಪರ್ಕಮಾತನಾಡುವ ಛಾತಿ ಇದ್ದರೆ ಸಾಕು ಎನ್ನುತ್ತಾರೆ ಗಾಂಽನಗರಿಗರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!