ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ವಿ.ಆರ್.ಶೈಲಜ ಸೋಮವಾರ ಅಧಿಕಾರ ಸ್ವೀಕರಿಸಿದರು.
ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರನ್ನು ಸರ್ಕಾರ ಮೊನ್ನೆಯಷ್ಟೆ ಕುಲಸಚಿವರಾಗಿ ನೇಮಿಸಲಾಗಿತ್ತು. ಅದರಂತೆ ಸೋಮವಾರ ಬೆಳಿಗ್ಗೆ ಕ್ರಾಫರ್ಡ್ ಭವನಕ್ಕೆ ಆಗಮಿಸಿ ಹಂಗಾಮಿ ಕುಲಪತಿ ಪ್ರೊ.ಎಚ್.ರಾಜಶೇಖರ್ ಸಮ್ಮುಖದಲ್ಲಿ ಕರ್ತವ್ಯದ ವರದಿಯನ್ನು ಮಾಡಿಕೊಂಡರು.
ನಂತರ ಕುಲಸಚಿವರ ಕೊಠಡಿಗೆ ಆಗಮಿಸಿ ಸಿಟಿಸಿ ಪ್ರತಿಗಳಿಗೆ ಸಹಿ ಹಾಕುವ ಮೂಲಕ ವಿದ್ಯುಕ್ತವಾಗಿ ಅಧಿಕಾರ ವಹಿಸಿಕೊಂಡರು. ಬಳಿಕ ಮಾತನಾಡಿದ ವಿ.ಆರ್.ಶೈಲಜ ಮೈಸೂರು ವಿವಿ ಕುಲಸಚಿವರಾಗಿ ನೇಮಕವಾಗಿದ್ದೇನೆ. ನಾನು ಓದಿದ ವಿವಿಯಲ್ಲಿ ಕೆಲಸ ಮಾಡುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಕೆಲಸ ಮಾಡುವೆ ಎಂದರು