Mysore
22
overcast clouds

Social Media

ಮಂಗಳವಾರ, 30 ಜೂನ್ 2026
Light
Dark

ಸೋಮವಾರಪೇಟೆ: ನವರಾತ್ರಿ ಉತ್ಸವ ವಿಜಯದಶಮಿ ಸಂಪನ್ನ

ಸೋಮವಾರಪೇಟೆ: ಕಳೆದ ಒಂಭತ್ತು ದಿನಗಳಿಂದ ನಡೆಯುತ್ತಿದ್ದ ನವರಾತ್ರಿ ಉತ್ಸವ ವಿಜಯದಶಮಿಯಂದು ಸಂಪನ್ನಗೊಂಡಿತು.

ಇಲ್ಲಿನ ಬಸವೇಶ್ವರ ದೇವಾಲಯದಲ್ಲಿ ಆಯೋಜಿಸಿದ್ದ ದುರ್ಗಾದೇವಿಗೆ ಪ್ರತಿನಿತ್ಯ ವಿವಿಧ ಅಲಂಕಾರ, ಅರ್ಚನೆ, ಅಭಿಷೇಕ ಮಾಡಲಾಗಿತ್ತು. ವಿಜಯದಶಮಿಯಂದು ಬೆಳಗಿನಿಂದ ವಿಶೇಷ ಪೂಜೆಗಳು ನೆರವೇರಿಸಲಾಯಿತು.

ರಾತ್ರಿ ಅರ್ಚಕ ಹಿರೇಮಠ್ ನೇತೃತ್ವದ ಪುರೋಹಿತರ ತಂಡ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿ ಮೂರ್ತಿುಂನ್ನು ಹೊತ್ತು ಪಂಚ ಕಳಸಗಳೊಂದಿಗೆ ಬಾಳೆ ಕಡಿದು, ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿದರು. ದುರ್ಗಾದೇವಿಗೆ ಉ್ಂಯಾಲೆ ಸೇವೆಯ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಸಂಕನಳ್ಳಿಯ ಮಲ್ಲೇಶ್ ಮತ್ತು ತಂಡದ ವೀರಗಾಸೆ ತಂಡ ದೇವಿಗೆ ನೃತ್ಯ ಸೇವೆ ನಡೆಯಿತು.

ಎಂಡಿಕೆ೬ಎಸ್‌ಪಿಟಿ೫: ಸೋಮವಾರಪೇಟೆ ಬಸವೇಶ್ವರ ದೇವಾಲಯದಲ್ಲಿ ವಿಜಯದಶಮಿಯಂದು ಸಂಕನಳ್ಳಿ ಮಲ್ಲೇಶ್ ಮತ್ತು ತಂಡದ ವೀರಗಾಸೆ ತಂಡದಿಂದ ದೇವಿಗೆ ನೃತ್ಯ ಸೇವೆ ನಡೆಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!