Mysore
27
light rain

Social Media

ಗುರುವಾರ, 13 ಆಗಸ್ಟ್ 2026
Light
Dark

ಅಪರಿಚಿತ ಮೃತದೇಹದ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದ ಪೊಲೀಸರು

ಹನೂರು: ಅಪರಿಚಿತ ವ್ಯಕ್ತಿಯ ಮೃತದೇಹವನ್ನು ಮಲೆಮಹದೇಶ್ವರ ಬೆಟ್ಟ ಪೊಲೀಸರು ಅಂತ್ಯಕ್ರಿಯೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟ ರಂಗಮಂದಿರದಲ್ಲಿ ಕಳೆದ 3ದಿನಗಳಿಂದ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಮೃತ ವ್ಯಕ್ತಿಯ ಗುರುತು ಪತ್ತೆಯಾಗದಿದ್ದರಿಂದ ಶವವನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಶೈತ್ಯಗಾರದಲ್ಲಿ ಇರಿಸಲಾಗಿತ್ತು.3 ದಿನಗಳು ಕಳೆದರೂ ಸಹ ಯಾರೊಬ್ಬ ವಾರಸುದಾರರೂ ಬಾರದೆ ಇದ್ದರಿಂದ ಮ ಬೆಟ್ಟ ಪೊಲೀಸ್ ಠಾಣಾ ಎಎಸ್ಸೈ ಮಾದಪ್ಪ ಹಾಗೂ ಬಸವರಾಜೇಂದ್ರ ಹಾಗೂ ಇನ್ನಿತರರು ಚಾಮರಾಜನಗರ ಜಿಲ್ಲಾ ಕೇಂದ್ರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.ಈ ಮೂಲಕ ಪೊಲೀಸರು ಪ್ರಶಂಸೆಗೆ ಪಾತ್ರರಾಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!