Mysore
27
overcast clouds

Social Media

ಭಾನುವಾರ, 21 ಜೂನ್ 2026
Light
Dark

ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರ ಸಾವು

ಮಂಡ್ಯ : ನಗರದ ರೈಲ್ವೆ ಗೇಟ್ ಬಳಿ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ಬೆಳಿಗ್ಗೆ 9.10 ರ ಸುಮಾರಿಗೆ ಸಂಭವಿಸಿದೆ.

ಬೆಂಗಳೂರಿನಿಂದ ಮಂಡ್ಯಕ್ಕೆ ಬಂದಿಳಿದ ಕಾಚಿಗೂಡ ರೈಲಿನಿಂದ ಬಂದಿಳಿದ ಮಹಿಳೆಯರು ಮೈಸೂರಿನಿಂದ ಬರುತ್ತಿದ್ದ ಮೈಲಾಡು ತೊರೈ ರೈಲು ಬರುತ್ತಿರುವುದು ಗಮನಕ್ಕೆ ಬಾರದೆ ತರಾತುರಿಯಲ್ಲಿ ರೈಲು ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ರೈಲಿಗೆ ಸಿಲುಕಿ ಸಾವನ್ನಪ್ಪಿದಾರೆ. ಇಬ್ಬರು ಮಹಿಳೆಯರಿಗೆ ಸುಮಾರು 35 ಮತ್ತು 50 ವರ್ಷವಾಗಿರಬಹುದು ಎನ್ನಲಾಗಿದೆ.ಕೆಲವರು ಶಿವಳ್ಳಿ ಗ್ರಾಮದ ಕಡೆಯ ಅಮ್ಮ ಮಗಳು ಎಂದು ಹೇಳುತ್ತಿದ್ದು,ನಿಖರ ಮಾಹಿತಿ ಇನ್ನಷ್ಟೇ ಪತ್ತೆ ಯಾಗಬೇಕಿದೆ.

ಸ್ಥಳಕ್ಕೆ ರೈಲ್ವೆ ಪೋಲಿಸರು ಬಂದು ಅವರ ಬ್ಯಾಗ್ ಗಳನ್ನು ಏನಾದರೂ ಮಾಹಿತಿ ದೊರಕಬಹುದೆಂದು ಪರಿಶೀಲನೆ ಮಾಡುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!