Mysore
23
overcast clouds
Light
Dark

ಲಾರಿ-ಕಾರು ಡಿಕ್ಕಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

ಮಂಡ್ಯ: ಮದ್ದೂರು ತಾಲೂಕು ಗೆಜ್ಜಲಗೆರೆ ಸಮೀಪ ಸೋಮವಾರ ನಸುಕಿನ ಜಾವ ಲಾರಿ ಮತ್ತು ಕಾರು ಡಿಕ್ಕಿಯಾಗಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.

ಕಾರು ಚಾಲಕ ಶಾಕಿಬ್ (25), ಸದ್ದಾಂ ಷರೀಫ್(23) ಮೃತರು. ನಸೀರಾ(24), ನಿಖತ್(20), ಜಹೀಬ್(36) ಗಾಯಗೊಂಡಿದ್ದು, ಮಂಡ್ಯದ ಮಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಸಂಬಂಧಿಕರ ಬೀಗರ ಔತಣ ಕೂಟಕ್ಕೆಂದು ಬೆಂಗಳೂರಿಗೆ ಹೋಗಿ ಕಾರಿನಲ್ಲಿ ವಾಪಸ್ ಮಂಡ್ಯಗೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಇವರು ಪ್ರಯಾಣಿಸುತ್ತಿದ್ದ ಕಾರು 3:30ರ ಸಮಯದಲ್ಲಿ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ತೀವ್ರ ಗಾಯಗೊಂಡ ಇಬ್ಬರೂ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಮೃತ ಸದ್ದಾಂ ಅವರು ಮಂಡ್ಯ ನಗರದ ಗುತ್ತಲು ಬಡಾವಣೆಯ ವಿಜಯ ಕರ್ನಾಟಕ ಪತ್ರಿಕೆ ವಿತರಕ ಕಲೀಂ ಷರೀಫ್ ಅವರ ಪುತ್ರ. ಕಲೀಂ‌ ಷರೀಫ್ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆಯಾಗಿದ್ದರಿಂದ ಸದ್ದಾಂ ಅವರೇ ಮನೆಮನೆಗೆ ಪತ್ರಿಕೆಗಳ ವಿತರಣೆ ನೋಡಿಕೊಳ್ಳುತ್ತಿದ್ದರು. ಪತ್ರಿಕೆಗಳನ್ನು ವಿತರಣೆ ಮಾಡುವ ಸಲುವಾಗಿಯೇ ಮಧ್ಯರಾತ್ರಿ ಬೆಂಗಳೂರಿನಿಂದ ಮಂಡ್ಯಗೆ ಹೊರಟಿದ್ದರು. ಅಪಘಾತದಲ್ಲಿ ಮಗ ಸತ್ತಿರುವ ಸುದ್ದಿ ತಿಳಿದ ಬಳಿಕವೂ ಕಲೀಂ‌ ಷರೀಫ್ ಅವರು ಖುದ್ದು ತಾವೇ ಹೋಗಿ 600ಕ್ಕೂ ಹೆಚ್ಚು ಪತ್ರಿಕೆಗಳನ್ನು ವಿತರಣೆ ಮಾಡಿ, ವೃತ್ತಪರತೆ ಪ್ರದರ್ಶಿದ್ದಾರೆ. ಘಟನೆ ಸಂಬಂಧ ಮದ್ದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ