Mysore
21
overcast clouds

Social Media

ಶನಿವಾರ, 13 ಜೂನ್ 2026
Light
Dark

ಟ್ರಾಕ್ಟರ್ ಸಾಲ ಪಾವತಿಸಲಾಗದ ರೈತನಿಗೆ ಖಾಸಗಿ ಪೈನಾನ್ಸ್ ನಿಂದ ಕಿರುಕುಳ ಆರೋಪ: ರೈತ ಆತ್ಮಹತ್ಯೆ

ಗುಂಡ್ಲುಪೇಟೆ: ತಾಲೂಕಿನ ನೇನೆಕಟ್ಟೆ ಗ್ರಾಮದ ರೈತ ಕೃಷ್ಣ(೬೫) ಖಾಸಗಿ ಪೈನಾನ್ಸ್ ನಿಂದ ಸಾಲ ಪಡೆದು ಟ್ಯಾಕ್ಟರ್ ಪಡೆದುಕೊಂಡಿದ್ದ ಕಳೆದ ಎರಡು ವರ್ಷದಿಂದ ಇಎಂಐ ಕಟ್ಟದ ಕಾರಣದಿಂದ ಟ್ಯಾಕ್ಟರ್ ಅನ್ನು ವಶಪಡಿಸಿಕೊಂಡ ಖಾಸಗಿ ಕಂಪನಿಯವರು ನಂತರ ಆತನ ಮೇಲೆ ಚೆಕ್ ಬೌನ್ಸ್ ಕೇಸ್ ಹಾಕಿ ಕೋರ್ಟಿನ ಮೆಟ್ಟಿಲೇರಿದ್ದರು ತಾನು ಕಟ್ಟಿದ್ದ ಮುಂಗಡ ಹಣ ಟ್ಯಾಕ್ಟರ್ ಎಲ್ಲವನ್ನು ಕಳೆದುಕೊಂಡು ಈಗ ಚೆಕ್ ಬೌನ್ಸ್ ಕೇಸ್ನಲ್ಲಿ ಆರೋಪಿಯಾಗಿ ನಿಂತು ಅವಮಾನ ಅನುಭವಿಸಿದ ಕಾರಣದಿಂದ ಸೋಮವಾರ ಸಂಜೆ ರೈತ ಕೃಷ್ಣ ವಿಷ ಸೇವಿಸಿದ್ದಾರೆ ನಂತರ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ್ದಾರೆ ಅದರೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇರುವುದರಿಂದ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಖಾಸಗಿ ಪೈನಾನ್ಸ್ ಕಾರಣ ಎಂದು ಜಿಲ್ಲಾ ರೈತಸಂಘ ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಮುಂದೆ ಪ್ರತಿಭಟನೆ ನಡೆಸಿದರು.

ಮೃತ ರೈತ ಕೃಷ್ಣ ಎಂಬುವವರಿಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದು ಅತ್ಮಹತ್ಯೆಯ ವಿಚಾರದಿಂದ ಮನನೊಂದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!