Mysore
21
overcast clouds

Social Media

ಗುರುವಾರ, 06 ಆಗಸ್ಟ್ 2026
Light
Dark

ಚಿರತೆಯು ಹೊತ್ತೊಯ್ದಿದ್ದ ಬಾಲಕ ಶವವಾಗಿ ಪತ್ತೆ

ಮೈಸೂರು : ಜಿಲ್ಲೆಯ ತಿ.ನರಸೀಪುರದ ಹೊರಳಹಳ್ಳಿ ಗ್ರಾಮದಲ್ಲಿ ಚಿರತೆ ಹೊತ್ತೊಯ್ದಿದ್ದ 11 ವರ್ಷದ ಬಾಲಕ ಜಯಂತ್ ಮೃತದೇಹ ಪತ್ತೆಯಾಗಿದೆ.

ಗ್ರಾಮದ ದಶಕಂಠ ಎಂಬುವರ ಪುತ್ರ ಜಯಂತ್‌ ಎಂಬ ಬಾಲಕನೇ ಶವವಾಗಿ ಪತ್ತೆ ಯಾದವ. ಈ ಬಾಲಕ ನೆನ್ನೆ ಸಂಜೆ 3.60ರಲ್ಲಿ ಗ್ರಾಮದಲ್ಲಿರುವ ಅತ್ತೆ ಮನೆಗೆ ಹೋಗಿ ಬಿಸ್ಕೆಟ್ ಪಡೆದುಕೊಂಡು ಬರುತ್ತೇನೆಂದು ಮನೆಯಿಂದ ಹೊರಹೋಗಿದ್ದ ಬಳಿಕ ಮನೆಯವರೆಲ್ಲರೂ ಹುಡುಕಾಡಿದ್ದರೂ ಪತ್ತೆಯಾಗದ ಕಾರಣ ಚಿರತೆ ಎಳೆದುಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿತ್ತು.

ಇಂದು ಬೆಳಿಗ್ಗೆ ಅರ್ಧ ತಿಂದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಕುಟುಂಬಸ್ಥರ ಆಕ್ರಂ ದನ ಮುಗಿಲು ಮುಟ್ಟಿದ್ದು, ಚಿರತೆ ಸೆರೆಗೆ ವಿಫಲವಾದ ಇಲಾಖೆ ಹಾಗೂ ಸರಕಾರದ ವಿರುದ್ದ ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!