Mysore
23
mist

Social Media

ಸೋಮವಾರ, 17 ನವೆಂಬರ್ 2025
Light
Dark

ಸೆ.28 ರಿಂದ ಯುವ ದಸರಾ ಆರಂಭ : ಹ್ಯಾಟ್ರಿಕ್ ಹೀರೋ ಶಿವಣ್ಣ ವಿಶೇಷ ಅತಿಥಿ

ಮೈಸೂರು :  ವಿಶ್ವವಿಖ್ಯಾತ ಮೈಸೂರು ದಸರಾ 2022ರ ಅಂಗವಾಗಿ ಯುವ ದಸರಾ ಕಾರ್ಯಕ್ರಮದ ಪಟ್ಟಿಯನ್ನು ಯುವ ದಸರಾ ಉಪ ಸಮಿತಿ ಇಂದು ಬಿಡುಗಡೆ ಮಾಡಿದೆ.

ಯುವ ದಸರಾ ಕಾರ್ಯಕ್ರಮಗಳು ಸೆ. 28ರಿಂದ ಅಕ್ಟೋಬರ್ 3ರ ವರೆಗೆ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಕನ್ನಡ ಚಿತ್ರರಂಗದ ಖ್ಯಾತ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಆಗಮಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್ ನಾಗೇಂದ್ರ ರವರು ವಹಿಸಲಿದ್ದಾರೆ.

ಯುವ ದಸರಾ ಕಾರ್ಯಕ್ರಮದ ವಿವರ :

28-09-2022 : ಮೊದಲ ದಿನ ಬುಧವಾರ

ಅಪ್ಪು ನಮನ7.00-10.00pm

ಖ್ಯಾತ ಹಿನ್ನೆಲೆ ಗಾಯಕರು ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್, ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್, ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ಕುನಾಲ್ ಗಾಂಜಾವಾಲಾ ರವರಿಂದ.


29-09-2022 : ಎರಡನೇ ದಿನ ಗುರುವಾರ

ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ – 6.00-06.30pm

ಸ್ಥಳೀಯ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ -6.30-07 pm

ಪವನ್ ಡ್ಯಾನ್ಸ್ ಹಾಗೂ ಇತರರಿಂದ ನೃತ್ಯ ರೂಪಕ -7.00-8.00pm

ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಕನ್ನಿಕ ಕಪೂರ್ ಅವರಿಂದ ಸಂಗೀತ ರಸ ಸಂಜೆ 8.00-10.00


30-09-2022 : ಮೂರನೇ ದಿನ ಶುಕ್ರವಾರ

ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ 6.00-06.30pm

ಸ್ಥಳೀಯ ಕಲಾವಿದರ ಕಾರ್ಯಕ್ರಮ 6.30-7.00pm

ಲೇಸರ್ ಆಕ್ಟ್ ಮತ್ತು ಸಿಗ್ನೇಚರ್ ಗ್ರೂಪ್ ತಂಡದಿಂದ ನೃತ್ಯ ರೂಪಕ 7.00-07.30pm

ಸ್ಯಾಂಡಲ್ ವುಡ್ ನೈಟ್ 07.30-10.00pm


01-10-2022 ನಾಲ್ಕನೇ ದಿನ ಶನಿವಾರ 

ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ 06.00-06.30pm

ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ಹನಿ ಸಿಂಗ್ ಮತ್ತು ಖ್ಯಾತ ಚಲನ ಚಿತ್ರ ಹಿನ್ನೆಲೆ ಗಾಯಕಿ ಡಾ. ಶಮಿತಾ ಮಲ್ನಾಡ್ ಅವರಿಂದ ಸಂಗೀತ ರಸಮಂಜರಿ. 06.30-10.00pm


02-10-2022 ಐದನೇ ದಿನ ಭಾನುವಾರ :

ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ 06.00-06.30pm

ಖ್ಯಾತ ಚಲನ ಚಿತ್ರ ನಟರದ ವಾರ್ಷಿಕ ಪೊನ್ನಚ್ಚ ಮತ್ತು ವಿಜಯ ರಾಘವೇಂದ್ರ ಅವರಿಂದ ಕನ್ನಡ ಸ್ಟಾರ್ ನೈಟ್ 06.30-7-30pm

ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಮಂಗ್ಲಿ ರವರಿಂದ ಸಂಗೀತ ರಸಮಂಜರಿ 07.30-8.30pm

ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ಅಮಿತ್ ತ್ರಿವೇದಿ ಅವರಿಂದ ಸಂಗೀತ ರಸಮಂಜರಿ 08. 30-10.00


03-10-2022 ಸೋಮವಾರ ಆರನೇ ದಿನ :

ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ 6.00-6.30pm.

ಸುಪ್ರಿಯ ರಾಮ್ ಮತ್ತು ಮಹಿಳಾ ಬ್ಯಾಂಡ್ ತಂಡದಿಂದ 06.30-7=30pm

ಫ್ಯಾಶನ್ ಶೋ 7.30-8.00 pm

ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಸುನಿಧಿ ಚೌಹಾನ್ ರವರಿಂದ ಸಂಗೀತ ರಸಮಂಜರಿ 8.00-10.00pm

ಕಾರ್ಯಕ್ರಮಗಳು ನಡೆಯಲಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!