Mysore
21
overcast clouds

Social Media

ಸೋಮವಾರ, 24 ಆಗಸ್ಟ್ 2026
Light
Dark

ಕಡವೆ ಬೇಟೆ ಪ್ರಕರಣ: 60 ಕೆಜಿ ಮಾಂಸ ವಶಕ್ಕೆ, ತಲೆಮರೆಸಿಕೊಂಡ ಆರೋಪಿಗಳು

ಗೋಣಿಕೊಪ್ಪ: ಹಾತೂರು ಗ್ರಾಮದಲ್ಲಿ ಕಡವೆ ಬೇಟೆ ಮಾಡಿರುವ ಪ್ರಕರಣದಲ್ಲಿ ಸೋಮವಾರ ೬೦ ಕೆ.ಜಿ. ಕಡವೆ ಮಾಂಸ ವಶ ಪಡಿಸಿಕೊಂಡಿದ್ದು, ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ.
ಕಡವೆಯನ್ನು ಕೊಂದು ಮಾಂಸ ಮಾರಾಟಕ್ಕೆ ಮುಂದಾಗಿದ್ದ ಸಂದರ್ಭ ಸ್ಥಳಕ್ಕೆ ವಿರಾಜಪೇಟೆ ಅರಣ್ಯ ವಲಯದ ಕಾರ್ಯಾಚರಣೆ ತಂಡ ದಾಳಿ ಮಾಡಿದೆ. ಈ ಸಂದರ್ಭ ೬೦ ಕೆಜಿ ಮಾಂಸ ವಶಪಡಿಸಿಕೊಂಡಿದ್ದು, ಪ್ರಕರಣದಲ್ಲಿ ಮನೆ ಮಾಲೀಕ ಕೊಕ್ಕಂಡ ಸತ್ಯುಂಜಯ ಹಾಗೂ ಗೋಣಿಕೊಪ್ಪ ನಿವಾಸಿ ಶರಣು ಮತ್ತು ಇತರರ ಮೇಲೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗೆ ಪೊನ್ನಂಪೇಟೆ ಆರ್‌ಎಫ್‌ಒ ಶಂಕರ ಅವರಿಗೆ ಹಸ್ತಾಂತರಿಸಲಾಗಿದೆ.
ವಿರಾಜಪೇಟೆ ಡಿಸಿಎಫ್ ವೈ. ಚಕ್ರಪಾಣಿ ಮಾರ್ಗದರ್ಶನದಲ್ಲಿ ಎಸಿಎಫ್ ಕೊಚ್ಚೆರ ಎ. ನೆಹರು, ಆರ್‌ಎಫ್‌ಒ ಕಳ್ಳಿರ ದೇವಯ್ಯ, ಡಿಆರ್‌ಎಫ್‌ಒ ಶ್ರೀಶೈಲ ಮಾಲಿಗೌಡ್ರ, ದೇಯಂಡ ಸಂಜಿತ್ ಸೋಮಯ್ಯ, ಸಿಬ್ಬಂದಿ ಸಿ. ಅರುಣಾ, ಮಾಲತೇಶ್ ಬಡಿಗೇರ್, ಚಂದ್ರಶೇಖರ ಅಮರಗೋಳ, ಅಶೋಕ, ಆರ್‌ಆರ್‌ಟಿ ಸಿಬ್ಬಂದಿ ಅನಿಲ್, ವಿಕಾಸ್, ಸುರೇಶ, ಮಹೇಶ್, ನಾಚಪ್ಪ, ಮುರುಗನ್, ಮಂಜು, ಸಚಿನ್, ವಿನೋದ್, ವಿನು, ಅಚ್ಚಯ್ಯ ಇದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!