ಮೈಸೂರು : ಕಳೆದ ಒಂದೂವರೆ ತಿಂಗಳಿಂದ ಸತತವಾಗಿ ಭಾರಿ ಮಳೆಯಾಗಿ ನದಿಯಿಂದಾಗಿ ವರುಣ ಕ್ಷೇತ್ರದ ಹಲವೆಡೆ ಸಾಕಷ್ಟು ಹಾನಿ ಉಂಟಾಗಿದ್ದು ಈ ಸಂಬಂಧ ಇಂದು ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯನವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತರ ಬೆಳೆಗಳು ಹಾಗೂ ಗ್ರಾಮಗಳಲ್ಲಿ ಮನೆಗಳು ಹಾನಿಯಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಕುಸಿತಗೊಂಡಿರುವ ಮನೆಗಳನ್ನು ವೀಕ್ಷಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮನೆ, ಬೆಳೆಗಳನ್ನು ಕಳೆದುಕೊಂಡ ಸಾಕಷ್ಟು ಜನರು ರೈತರ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಕಬಿನಿ ನದಿ ಪ್ರವಾಹದಲ್ಲಿ ರೈತರ ಬೆಳೆ ಹಾನಿಯ ಸ್ಥಳಗಳಿಗೆ ಭೇಟಿ ನೀಡಿದ್ದರು.
ವರುಣ ಕ್ಷೇತ್ರದ ಸುತ್ತೂರು. ಆಲತ್ತೂರು. ಮಾಡಳ್ಳಿ. ಹೊಸಕೋಟೆ. ನಂದು ಗುಂದ. ಕುಪ್ಪೇಗಾಲ. ಸಿದ್ದರಾಮಹುಂಡಿ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ರೈತರ ಜಮೀನುಗಳಿಗೆ, ಬೆಳೆ,ಮನೆಗಳನ್ನು ಪರಿಶೀಲಿಸಿದ್ದಾರೆ.
ಮಳೆಯಿಂದಾಗಿ ಬೆಳೆ ಹಾಗೂ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಶ್ರೀಘ್ರದಲ್ಲಿ ಪರಿಹಾರ ದೊರಕಿಸಿಕೊಡಲು ಸರ್ಕಾರವನ್ನು ಒತ್ತಾಯಮಾಡಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಸ್ಥಳದಲ್ಲಿದ್ದ ಅಧಿಕಾರಿಗಳಾದ ಸಹಾಯಕ ಕೃಷಿ ನಿರ್ದೇಶಕರಾದ ದೀಪಕ್ ಅವರಿಗೆ ರೈತರು ಮನವಿ ಪತ್ರಗಳನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ. ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾದ. ಎಸ್ಸಿ ಬಸವರಾಜ್. ಬ್ಲಾಕ್ ಅಧ್ಯಕ್ಷರಾದ. ರಂಗಸ್ವಾಮಿ, ರೈತ ಮುಖಂಡರಾದ. ಚಿಕ್ಕು ಸು. ಮಹದೇವಮ್ಮ. ಮಹೇಶ್. ಕೆಎಸ್ ಉಂಡಿ ರವಿ, ತಾಲ್ಲೂಕಿನ ಇತರ ಅಧಿಕಾರಿಗಳು ಹಾಜರಿದ್ದರು. ಸುತ್ತಮುತ್ತ ಗ್ರಾಮಗಳ ರೈತರು ಹಾಜರಿತ್ತು.