ಮೈಸೂರು: ಸಂಸದ ಪ್ರತಾಪ್ ಸಿಂಹ ಅವರದು ಪಬ್ ಸಂಸ್ಕೃತಿ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಡಾ.ಪುಷ್ಪ ಅಮರನಾಥ್ ಹೇಳಿದ್ದಾರೆ.
ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಸಂಸದ ಪ್ರತಾಪ್ ಸಿಂಹಗೆ ಮಾತನಾಡುವ ಯೋಗ್ಯತೆ ಇಲ್ಲ. ಏಕೆಂದರೆ ಪ್ರತಾಪ್ ಸಿಂಹ ವಾರಕ್ಕೆರಡು ಬಾರಿ ಪಗ್‌ಬ್‌ಗೆ ಹೋಗುತ್ತಾರೆ. ಅದರ ವೀಡಿಯೋಗಳು ನಮ್ಮ ಬಳಿ ಇವೆ ಎಂದರು.
ಬಾಯಲ್ಲಿ ಹೇಳುವುದು ಸಂಸ್ಕೃತಿ. ಆದರೆ, ಜೀವನದಲ್ಲಿ ಅಳವಡಿಸಿಕೊಂಡಿರುವುದು ಬೇರೊಂದು ಸಂಸ್ಕೃತಿ. ಆದರೂ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇಂತಹವರಿಂದ ಸಂಸ್ಕೃತಿ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಉತ್ತರಿಸಿದರು.