ಹನೂರು : ಪಟ್ಟಣದ ಜಾ. ದಳ ಕಚೇರಿಯಲ್ಲಿ ಜಾ.ದಳ ಮುಖಂಡ ಎಂಆರ್ ಮಂಜುನಾಥ್ ಸಾರ್ವಜನಿಕರು ಹಾಗೂ ಕಾರ್ಯಕರ್ತರ ಕುಂದು ಕೊರತೆ ಆಲಿಸಿದರು.

ಕೌದಳ್ಳಿ,ರಾಮಾಪುರ, ಮ, ಬೆಟ್ಟ, ಬಂಡಳ್ಳಿ ಧನಗೆರೆ,ಪಿಜಿ ಪಾಳ್ಯ ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದಂತಹ ಸಾರ್ವಜನಿಕರು ಹಾಗೂ ಕಾರ್ಯಕರ್ತರು ತಮ್ಮ ಕಷ್ಟಗಳನ್ನು ಜೆಡಿಎಸ್ ಮುಖಂಡ ಎಮ್ ಆರ್ ಮಂಜುನಾಥ್ ರವರ ಜೊತೆ ಹಂಚಿಕೊಂಡರು. ಈ ಸಂದರ್ಭದಲ್ಲಿ ಮಂಜುನಾಥ್ ಆಪರೇಷನ್ ರೋಗಿಗಳಿಗೆ ಸ್ಥಳದಲ್ಲಿ ವೈಯಕ್ತಿಕ ಸಹಾಯ ಮಾಡಿದರು. ಉಳಿದ ರೋಗಿಗಳನ್ನು ಬೆಂಗಳೂರಿಗೆ ಕರೆತರುವಂತೆ ತಮ್ಮ ಆಪ್ತ ಸಹಾಯಕರಿಗೆ ಸೂಚನೆ ನೀಡಿ ತಮ್ಮ ಆರೋಗ್ಯದ ಕಡೆ ಒತ್ತು ನೀಡುವಂತೆ ಸಲಹೆ ನೀಡಿದರು.
ಇನ್ನು ಹತ್ತಕ್ಕೂ ಹೆಚ್ಚು ಮಕ್ಕಳ ವಿದ್ಯಾಭ್ಯಾಸಕ್ಕೆ ವೈಯಕ್ತಿಕ ಧನ ಸಹಾಯ ಮಾಡಿದರು. ಒಟ್ಟಾರೆ ಬಂದಿದ್ದಂತಹ ಕಾರ್ಯಕರ್ತರಿಗೆ ತಮ್ಮ ಕೈಲಾದ ಮಟ್ಟಿಗೆ ಸ್ಪಂದಿಸಿದ ಜೆಡಿಎಸ್ ಎಂ ಆರ್ ಮಂಜುನಾಥ್ ರವರ ಕಾರ್ಯವೈಖರಿಯನ್ನು ನೆರೆದಿದ್ದವರು ಪ್ರಶಂಶಿಸಿದರು.




