ಮೈಸೂರು : ಇಂದು 75 ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮೈಸೂರು ವಿವಿ ವತಿಯಿಂದ ಆಯೋಜಿಸಿರುವ ಯುವಜನ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಿದ್ದ ಸಂದರ್ಭದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ನಡೆಯುತ್ತಿರುವ ರಾಜಕೀಯ ವಿವಾದದ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅವರು ರಾಜಕೀಯ ಪ್ರೇರಿತವಾದ ಈ ಘಟನೆಗಳಿಗೆ ಯಾವುದೇ ಆಧಾರಗಳಿಲ್ಲ ಎಂಬುದು ನನಗೆ ತಿಳಿದಿದೆ. ಹಾಗಾಗಿ ನಾನು ಈಗ ಮೊದಲಿಗಿಂತಲೂ ಗಟ್ಟಿಯಾಗಿದ್ದೇನೆ.ಇದನ್ನೇ ಪ್ರೇರಣೆಯಾಗಿಟ್ಟುಕೊಂಡು, ಬರುವಂತಹ ದಿನಗಳಲ್ಲಿ ಪಕ್ಷದ ಬಲವರ್ಧನೆ ಹಾಗೂ ಜನ ಉಪಯೋಗಿ ಕೆಲಸಗಳಿಗೆ ದಿನದ ಬಹುಪಾಲು ಸಮಯವನ್ನು ಮೀಸಲಿಡಲಿದ್ದೇನೆ ಎಂದರು
ಮುಂದುವರಿದು,ನಾನು ರಾಜ್ಯದ ಅಭಿವೃದ್ದಿಗೆ ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದೇನೆ, ಇವೆಲ್ಲ ರಾಜಕೀಯ ಪ್ರೇರಿತವಾದ ಘಟನೆಗಳಿಗೆ ಯಾವುದೇ ಆಧಾರಗಳಿಲ್ಲ ಎಂದರು.