Mysore
22
few clouds

Social Media

ಶನಿವಾರ, 03 ಅಕ್ಟೋಬರ್ 2026
Light
Dark

ಓದುಗರ ಪತ್ರ: ಶಾಲಾ ವಾಹನ ಮಾಸಿಕ ಶುಲ್ಕ ಏರಿಕೆ ತಡೆಗೆ ಕ್ರಮ ಅಗತ್ಯ

dgp murder case

ಡೀಸೆಲ್ ಬೆಲೆ ಏರಿಕೆ, ಬಿಡಿಭಾಗಗಳ ದುಬಾರಿ ವೆಚ್ಚ ಮತ್ತು ವಿಮೆ, ತೆರಿಗೆಗಳ ಹೆಚ್ಚಳದಿಂದಾಗಿ ಖಾಸಗಿ ಶಾಲಾ ವಾಹನಗಳ ಮಾಸಿಕ ಶುಲ್ಕವನ್ನು ಕನಿಷ್ಠ ಶೇ.೧೦ರಷ್ಟು ಹೆಚ್ಚಳ ಮಾಡಲು ಮುಂದಾಗಿರುವುದು ಪೋಷಕರಿಗೆ ಮತ್ತೊಂದು ದೊಡ್ಡ ಹೊರೆಯಾಗಿದೆ.

ಈಗಾಗಲೇ ಶೈಕ್ಷಣಿಕ ಶುಲ್ಕ, ಪುಸ್ತಕ ಹಾಗೂ ಸಮವಸ್ತ್ರಗಳ ವೆಚ್ಚದಿಂದ ಕಂಗಾಲಾಗಿರುವ ಪೋಷಕರಿಗೆ ಈ ದರ ಏರಿಕೆ ಆತಂಕ ಮೂಡಿಸಿದೆ. ರಾಜ್ಯದಲ್ಲಿ ಸುಮಾರು ೨೦ ಸಾವಿರಕ್ಕೂ ಹೆಚ್ಚು ಶಾಲಾ ವಾಹನಗಳು ಮಕ್ಕಳ ಸೇವೆಯಲ್ಲಿದ್ದು, ಇಂಧನ ದರ ಏರಿಕೆಯಿಂದಾಗಿ ಇವುಗಳ ನಿರ್ವಹಣೆ ಕಷ್ಟಕರವಾಗಿದೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಶಾಲಾ ವಾಹನಗಳಿಗೆ ತ್ರೆ ಮಾಸಿಕ ರಸ್ತೆ ತೆರಿಗೆ ಮತ್ತು ಟೋಲ್ ಶುಲ್ಕದಲ್ಲಿ ವಿಶೇಷ ವಿನಾಯಿತಿ ನೀಡಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾ ಬಸ್ ಹಾಗೂ ವ್ಯಾನ್‌ಗಳಿಗೆ ರಿಯಾಯಿತಿ ದರದಲ್ಲಿ ಡೀಸೆಲ್ ಒದಗಿಸಬೇಕು. ಖಾಸಗಿ ಸಾರಿಗೆ ಕ್ಷೇತ್ರವು ನಷ್ಟಕ್ಕೆ ಸಿಲುಕದಂತೆ ಸರ್ಕಾರವು ನಿಯಮಿತವಾಗಿ ಆರ್ಥಿಕ ಅನುದಾನ ಅಥವಾ ಪ್ಯಾಕೇಜ್ ಘೋಷಿಸಬೇಕು.

-ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು

 

Tags:
error: Content is protected !!