Mysore
27
broken clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣದ ಆರೋಪಿ ಬಂಧನ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿಯ ದೀಪಿಕಾ ಎಂಬ ಶಿಕ್ಷಕಿಯ ಶವ ಮೇಲುಕೋಟೆ ಯೋಗನರಸಿಂಹ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಈ ವಿಚಾರವಾಗಿ ದೀಪಿಕಾ ಕುಟುಂಬಸ್ಥರು ದೀಪಿಕಾ ಸಾಯುವ ಮುನ್ನೆ ಕೊನೆಯದಾಗಿ ಕರೆ ಮಾಡಿರುವ ಅದೇ ಗ್ರಾಮದ ನಿತೀಶ್‌ ಎಂಬುವವನ ವಿರುದ್ಧ ಕೊಲೆ ಮಾಡಿರುವ ಆರೋಪ ಮಾಡಿ ದೂರು ನೀಡಿದ್ದರು. ಅತ್ತ ನಿತೀಶ್ ದೀಪಿಕಾ ಶವ ಸಿಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ. ‌

ಹೀಗೆ ಕಾಣೆಯಾದ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಆತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ತಲೆ ಮರೆಸಿಕೊಂಡಿದ್ದ ನಿತೀಶ್‌ನನ್ನು ಮೇಲುಕೋಟೆ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದ್ದು, ನಿತೀಶ್‌ ಕೊಲೆ ಮಾಡಿರುವುದು ತಾನೇ ಎಂದು ತಿಳಿದುಬಂದಿದೆ.

ದೀಪಿಕಾಳನ್ನು ಕೊಲೆ ಮಾಡಲು ಮೊದಲೇ ಯೋಜನೆ ನಡೆದಿತ್ತು. ಕೊಲೆ ಮಾಡುವ ಮುನ್ನ ನಿತೀಶ್‌ ಗುಂಡಿ ಸಿದ್ಧಪಡಿಸಿಕೊಂಡಿದ್ದ. ಬಳಿಕ ದೀಪಿಕಾಳನ್ನು ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಅಡ್ಡಗಟ್ಟಿ ಕೊಲೆ ಮಾಡಿದ ಎಂಬ ಅಂಶ ವಿಚಾರಣೆ ವೇಳೆ ತಿಳಿದುಬಂದಿದೆ. ಕೊಲೆ ಮಾಡಿರುವುದು ತಾನೇ ಎಂದೂ ಸಹ ನಿತೀಶ್‌ ಒಪ್ಪಿಕೊಂಡಿದ್ದಾನೆ.

ಇನ್ನು ದೀಪಿಕಾ ಶವ ಪತ್ತೆಯಾಗುವುದಕ್ಕೂ ಮುನ್ನ ಕಾಣೆಯಾಗಿದ್ದಾಳೆ ಎಂದು ಕುಟುಂಬ ಹುಡುಕಾಟ ನಡೆಸುತ್ತಿದ್ದಾಗ ದೀಪಿಕಾ ತಂದೆಗೆ ಕರೆ ಮಾಡಿ ʼಅಕ್ಕ ಸಿಕ್ಕಿದ್ಳಾ ಅಪ್ಪಾಜಿʼ ಎಂದು ವಿಚಾರಿಸಿ ತನ್ನ ಮೇಲೆ ಅನುಮಾನ ಬಾರದ ಹಾಗೆ ನಟಿಸಿದ್ದ ಎಂಬ ವಿಷಯ ಸಹ ತಿಳಿದುಬಂದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!