Mysore
20
overcast clouds

Social Media

ಭಾನುವಾರ, 19 ಜನವರಿ 2025
Light
Dark

ಆಷಾಢ ಮಾಸಕ್ಕೆ ತವರಿಗೆ ಬಂದಿದ್ದ ನವವಧು ಪ್ರಿಯಕರನ ಜೊತೆ ಎಸ್ಕೇಪ್ – ಈಗ ಸಾವಿಗೆ ಶರಣು

ಮೈಸೂರು- ಆಷಾಢ ಮಾಸಕ್ಕೆ ತವರು ಮನೆಗೆ ಬಂದಾಗ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದ ನವವಧು ಈಗ ಸಾವಿಗೀಡಾಗಿರುವ ಘಟನೆ ಮೈಸೂರಿನ ನಂಜನಗೂಡಿನಲ್ಲಿ ಸಂಭವಿಸಿದೆ.

ಮೈಸೂರಿನ ನಂಜನಗೂಡಿನ ಕಾರ್ಯ ಗ್ರಾಮದ 20 ವರ್ಷದ ವರ್ಷಿತ ಸಾವಿಗೆ ಶರಣಾದವಳು.

ಆಷಾಢ ಮಾಸಕ್ಕಾಗಿ ತವರು ಮನೆಗೆ ಬಂದ ನವವಧು ಪಕ್ಕದ ಮನೆಯಲ್ಲಿದ್ದ ಪ್ರಿಯಕರನ ಜೊತೆ ಪರಾರಿಯಾಗಿದ್ದಳು. ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿಕೊಂಡ ಪೊಲೀಸರು ಒಂದು ವಾರದಲ್ಲಿ ಪತ್ತೆ ಮಾಡಿ ಪ್ರಿಯಕರನಿಂದ ಬೇರ್ಪಡಿಸಿದ್ದರು. ಪ್ರಿಯಕರನ ಅಗಲಿಕೆಯಿಂದ ಮನನೊಂದ ನವವಧು ಈಗ ನೇಣಿಗೆ ಶರಣಾಗಿದ್ದಾಳೆ.

ವರ್ಷಿತಾ ತನ್ನ ಮನೆಯ ಪಕ್ಕದಲ್ಲಿದ್ದ ಕಿರಣ್ ಎಂಬಾತನನ್ನ ಪ್ರೀತಿಸುತ್ತಿದ್ದಳು.ಮಗಳ ಮನವೊಲಿಸಿದ ಪೋಷಕರು ಪ್ರಿಯಕರನಿಂದ ಬೇರೆ ಮಾಡಿ ಚಾಮರಾಜನಗರದ ಅಭಿಷೇಕ್ ಜೊತೆ ಮೇ 8 ರಂದು ಅದ್ದೂರಿಯಾಗಿ ವಿವಾಹ ಮಾಡಿದ್ದರು.

ಆಷಾಢ ಮಾಸ ಹಿನ್ನಲೆ ವರ್ಷಿತಾ ತವರು ಮನೆ ಕಾರ್ಯ ಗ್ರಾಮಕ್ಕೆ ಬಂದಿದ್ದಾಳೆ.ಈ ವೇಳೆ ಪಕ್ಕದ ಮನೆಯಲ್ಲಿದ್ದ ಪ್ರಿಯತಮ ಕಿರಣ್ ಜೊತೆ ಓಡಿಹೋಗಿದ್ದಾಳೆ. ವರ್ಷಿತಾ ಕಾಣೆಯಾದ ಬಗ್ಗೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರೇಮಿಗಳು ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದು ವಾಪಸ್ ಕರೆತಂದ ಪೊಲೀಸರು ಇಬ್ಬರಿಗೂ ಬುದ್ದಿವಾದ ಹೇಳಿ ಬೇರ್ಪಡಿಸಿದ್ದಾರೆ. ನಂತರ ವರ್ಷಿತಾ ಮೈಸೂರಿನಲ್ಲಿದ್ದ ಸಂಭಂಧಿಕರ ಮನೆಗೆ ಬಂದು 3 ದಿನ ಇದ್ದು ನಂತರ ರಾಂಪುರ ಗ್ರಾಮದಲ್ಲಿರುವ ತಾತನ ಮನೆಗೆ ಬಂದಿದ್ದಾಳೆ.

ಪ್ರಿಯಕರನ ಅಗಲಿಕೆಯಿಂದ ಮನನೊಂದಿದ್ದ ವರ್ಷಿತಾ ತಾತನ ಮನೆಯ ವಾಶ್ ರೂಂ ನಲ್ಲಿ ನೇಣಿಗೆ ಶರಣಾಗಿದ್ದಾಳೆ.

ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ