Mysore
34
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಮೈಸೂರು: ಹಣದಾಸೆಗೆ ಪರಿಚಿತ ವೃದ್ಧೆಯನ್ನೇ ಕೊಂದ ಮಹಿಳೆ

ಮೈಸೂರು: ಹಣದಾಸೆಗೆ ಪರಿಚಿತ ಸ್ನೇಹಿತಯನ್ನೇ ಹತ್ಯೆಗೈದ ಘಟನೆ ಮೈಸೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ವೃದ್ಧೆಯ ಬಳಿಯಿರುವ ಹಣಕ್ಕೆ ಮತ್ತು ಚಿನ್ನಕ್ಕೆ ಆಸೆ ಪಟ್ಟು ವೃದ್ದೇಯನ್ನು ಉಸಿರು ಗಟ್ಟಿಸಿ ಕೊಲೆ ಮಾಡಲಾಗಿದೆ.

ಈ ಘಟನೆ ಮೈಸೂರಿನ ಕೆ.ಸಿ. ಬಡಾವಣೆಯಲ್ಲಿ ನಡೆದಿದ್ದು, 62 ವರ್ಷದ ಸುಲೋಚನ ಮೃತ ವೃದ್ದೆಯಾಗಿದ್ದಾರೆ. ಜೆಸಿ ನಗರದ ನಿವಾಸಿಯಾಗಿರುವ 45 ವರ್ಷದ ಶಕುಂತಲ ಹತ್ಯೆ ಮಾಡಿರುವ ಆರೋಪಿಯಾಗಿದ್ದಾಳೆ. ಮಾರ್ಚ್.5 ರಂದು, ಸುಮಾರಿಗೆ ಸಂಜೆ 7 ಗಂಟೆಗೆ ಶಕುಂತಲಾ ಎಂಬಾಕೆ ಸುಲೋಚನಾಗೆ ಕರೆ ಮಾಡಿ, ತನ್ನ ಮನೆಗೆ ಭೇಟಿ ನೀಡುವಂತೆ ವಿನಂತಿಸಿದಳು. ಬಳಿಕ ಸುಲೋಚನಾ ಅವರು ಮನೆಗೆ ಬರುತ್ತಿದ್ದಂತೆ ಹಾಸಿಗೆಯ ಮೇಲೆ ಅವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದು ಚಿನ್ನದ ಸರ ತೆಗೆದು ಸುಮಾರು ರಾತ್ರಿ 9.30 ಗಂಟೆಗೆ ಟೆರೇಷಿಯನ್ ಕಾಲೇಜು ವೃತ್ತದ ಬಳಿ ಇರುವ ದುರ್ಗಾ ಜ್ಯುವೆಲರ್ಸ್‌ನಲ್ಲಿ ಅಡವಿಟ್ಟು 1.50 ಲಕ್ಷ ರೂ. ಪಡೆದಿದ್ದಾರೆ.

ನಂತರ ತನ್ನ ಬಾಡಿಗೆ ಮನೆ ಮಾಲೀಕನ ಮನೆಗೆ ತೆರಳಿ ಬಾಡಿಗೆ ಬಾಕಿರುವ 36,000 ರೂ.ಗಳನ್ನು ಹಿಂದಿರುಗಿಸಿದ್ದಾರೆ. ಅಲ್ಲದೇ ಸುಲೋಚನಾಳ ಶವವನ್ನೂ ತನ್ನ ಮನೆಯಲ್ಲಿಯೇ ಇಟ್ಟು, ಆಕೆಯ ಮಗ ರವಿಚಂದ್ರನಿಗೆ ಕರೆ ಮಾಡಿ, ತಮ್ಮ ತಾಯಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಜೊತೆಗೆ ಅವರೊಂದಿಗೆ ಮಾತನಾಡುವಾಗ ಅವರು ಬೆವರುತ್ತಿದ್ದರು ಎಂದಿದ್ದಾರೆ.

ಈ ವಿಚಾರ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಮೃತರ ಮಗ ರವಿಚಂದ್ರ ಬಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆ ವೇಳೆ ಖಾಸಗಿ ಆಸ್ಪತ್ರೆಯ ವೈದ್ಯರು ಇದು ಸಹಜ ಸಾವಲ್ಲ ಎಂಬುದನ್ನು ದೃಢ ಪಡಿಸಿದ್ದಾರೆ. ಈ ವಿಚಾರ ತಿಳಿದ ಮಗ ರವಿಚಂದ್ರ ನಗರದ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ವಿಚಾರಣೆ ಮಾಡಿದಾಗ ಶಕುಂತಲಾನೇ ತಾನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

Tags: