Mysore
36
few clouds

Social Media

ಶುಕ್ರವಾರ, 17 ಏಪ್ರಿಲ 2026
Light
Dark

ಎಚ್.ಡಿ.ಕೋಟೆ| ಕಾಡಾನೆ ದಾಳಿ: ಮಹಿಳೆ ಸ್ಥಿತಿ ಗಂಭೀರ

ಮಂಜು ಕೋಟೆ: ಎಚ್.ಡಿ.ಕೋಟೆ ತಾಲ್ಲೂಕು ವರದಿಗಾರರು 

ಎಚ್.ಡಿ.ಕೋಟೆ: ಜಮೀನಿಗೆ ಸೌದೆ ತರಲು ಹೋದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಮಹಿಳೆ ಸ್ಥಿತಿ ಗಂಭೀರವಾಗಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯ ಮಾರನಹಾಡಿ ಬಳಿ ನಡೆದಿದೆ.

ಮಾರನಹಾಡಿಯಿಂದ 2 ಕಿಲೋ ಮೀಟರ್‌ ದೂರದಲ್ಲಿರುವ ಆಡುಕುಪ್ಪೆ ಕೆರೆ ಬಳಿ ಈ ಘಟನೆ ನಡೆದಿದೆ.

ಸೌದೆ ತರಲೆಂದು 15 ಮಂದಿ ಮಹಿಳೆಯರು ಕೆರೆ ಹತ್ತಿರ ತೆರಳಿದ್ದರು. ಈ ವೇಳೆ ಕಾಡಾನೆಯೊಂದು ಹಠಾತ್‌ ದಾಳಿ ನಡೆಸಿದ ಪರಿಣಾಮ ಮಹಿಳೆ ಜ್ಯೋತಿ ಎಂಬುವವರಿಗೆ ಗಂಭೀರ ಗಾಯಗಳಾಗಿದೆ. ಕಾಡಾನೆ ದಾಳಿ ನಡೆಸುತ್ತಿದ್ದಂತೆ ಮಹಿಳೆಯರು ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

ಕಾಲಿನಿಂದ ತುಳಿದು ನಂತರ ಕೊಂಬಿನಿಂದ ಬಲವಾಗಿ ಹೊಟ್ಟೆಯ ಪಕ್ಕೆಲುಬಿಗೆ ತಿವಿದಿರುವುದರಿಂದ ಹೊಟ್ಟೆಯ ಪಕ್ಕೆಲುಬಿನಲ್ಲಿ ರಂಧ್ರವಾಗಿದೆ. ಮಹಿಳೆ ಜ್ಯೋತಿಗೆ ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.‌ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Tags:
error: Content is protected !!