Mysore
23
overcast clouds

Social Media

ಸೋಮವಾರ, 23 ಮಾರ್ಚ್ 2026
Light
Dark

ದರೋಡೆ ಸ್ಕೆಚ್‌ ರೂಪಿಸಿ ಪತಿ ಮೇಲೆ ಪತ್ನಿ ಹಲ್ಲೆ : ಕೊನೆಗೂ ಸಾವಿಗೀಡಾದ ಪತಿ

died trAacter

ನಂಜನಗೂಡು : ದರೋಡೆ ಸ್ಕೆಚ್ ರೂಪಿಸಿ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿಸಿ ಕೊಲೆ ಯತ್ನಕ್ಕೆ ಒಳಗಾಗಿದ್ದ ಪತಿ ರಾಜೇಂದ್ರ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಸಾವೀಗಿಡಾಗಿದ್ದಾನೆ.

೨೦ ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಇಂದು ಸಾವೀಗಿಡಾಡದರು. ಪತಿರಾಜೇಂದ್ರನ ಕೊಲೆಗೆ ದರೋಡೆ ಸ್ಕೆಚ್ ರೂಪಿಸಿದ ಪತ್ನಿ ಸಂಗೀತಾ ಈಗ ಜೈಲು ವಾಸಿಯಾಗಿದ್ದಾಳೆ.

ಇದನ್ನು ಓದಿ: ಬ್ಯಾಂಕ್‌ ದರೋಡೆ ಪ್ರಕರಣ | ಬಂಧನಕ್ಕೆ 7 ವಿಶೇಷ ತಂಡ ರಚನೆ

ಘಟನೆ ವಿವರ:
ಅಕ್ಟೋಬರ್ ೨೬ ರಂದು ನಂಜನಗೂಡಿನ ಹುಂಡುವಿನಹಳ್ಳಿ ಬಡಾವಣೆಯಲ್ಲಿ ರಾಜೇಂದ್ರ ತನ್ನ ಪತ್ನಿ ಸಂಗೀತಾ ಜೊತೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಕಾರ್ ನಲ್ಲಿ ಬಂದ ಮೂವರು ಅಟ್ಯಾಕ್ ಮಾಡಿ ರಾಜೇಂದ್ರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ದರೋಡೆ ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಟೌನ್ ಪೊಲೀಸರು ವಿಶೇಷ ತಂಡ ರಚಿಸಿ ದುಷ್ಕರ್ಮಿಗಳ ಸೆರೆಗೆ ಜಾಲ ಬೀಸಿದ್ದರು. ಸಿ.ಸಿ ಟಿವಿ ಫುಟೇಜ್ ಪರಿಶೀಲಿಸಿದ ಪೊಲೀಸರಿಗೆ ಪತ್ನಿ ಸ್ಕೆಚ್ ಬಯಲಾಗಿತ್ತು. ಪತಿ ಕೊಲೆಗೆ ದರೋಡೆ ಬಣ್ಣ ಕಟ್ಟಿ ಸುಪಾರಿ ನೀಡಿ ಹತ್ಯೆಗೆ ಯತ್ನಿಸಿದ ಸಂಚು ಬಯಲಾಗಿತ್ತು. ತೀವ್ರ ಹಲ್ಲೆಗೆ ಒಳಗಾಗಿದ್ದ ರಾಜೇಂದ್ರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾಯಾಗದೆ ರಾಜೇಂದ್ರ ಮೃತಪಟ್ಟಿದ್ದಾನೆ.

Tags:
error: Content is protected !!