Mysore
22
overcast clouds

Social Media

ಸೋಮವಾರ, 17 ಆಗಸ್ಟ್ 2026
Light
Dark

ಇರಾನ್‌ ಈವರೆಗೆ 400ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿದೆ ; ಇಸ್ರೇಲ್‌

ಜೆರುಸಲೆಂ : ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಬಳಿಕ ಇರಾನ್‌ನಿಂದ ಇಸ್ರೇಲ್‌ ಮೇಲೆ ಈವರೆಗೆ 400ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ. ಅದರಲ್ಲಿ ಶೇ.92ರಷ್ಟು ಕ್ಷಿಪಣಿಗಳನ್ನು ನಿಷ್ಕಿಯಗೊಳಿಸಲಾಗಿದೆ ಎಂದು ಇಸ್ರೇಲ್ ಸೇನೆ ಘೋಷಿಸಿದೆ.

ಇರಾನ್‌ನ ಎಲ್ಲಾ ದಾಳಿಯನ್ನು ನಾವು ತಡೆದಿದ್ದೇವೆ. ಮುಂದೆಯೂ ತಡೆಯಲಿದ್ದೇವೆ. ಕೆಲ ದಾಳಿ ತಡೆಯಲು ವಿಫಲವಾದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಸೇನೆ ಹೇಳಿದೆ.

ಇರಾನ್‌ನ ಪ್ರತೀಕಾರಾತ್ಮಕ ದಾಳಿಯ ಭಾಗವಾಗಿ ಭಾನುವಾರ ಬೆಳಗ್ಗೆ ನಡೆದ ದಾಳಿಯಲ್ಲಿ ಇಸ್ರೇಲ್‌ನ ಡಿಮೋನಾ ಮತ್ತು ಅರಾದ್ ಪಟ್ಟಣಗಳ ಮೇಲೆ ನೇರವಾಗಿ ಕ್ಷಿಪಣಿಗಳು ಅಪ್ಪಳಿಸಿವೆ. ಡಿಮೋನಾ ಪ್ರದೇಶದ ಸ್ಥಳೀಯ ಕಟ್ಟಡಗಳಿಗೆ ಗಣನೀಯ ಹಾನಿಯಾಗಿದೆ. ಕೆಲವು ಕಡೆ ಬೆಂಕಿ ಹತ್ತಿಕೊಂಡಿದ್ದು, ರಕ್ಷಣಾ ತಂಡಗಳು ತುರ್ತು ಕಾರ್ಯಾಚರಣೆ ನಡೆಸುತ್ತಿವೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

 

Tags:
error: Content is protected !!