ಎಚ್.ಡಿ.ಕೋಟೆ : ವಾಹನ ಡಿಕ್ಕಿ ಹೊಡೆದು ಚಿರತೆ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಮೈಸೂರು-ಮಾನಂದವಾಡಿ ಮುಖ್ಯರಸ್ತೆಯ ಎಚ್.ಮಟಕೆರೆ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಮಂಗಳವಾರ ರಾತ್ರಿ ಸುಮಾರು ೯ರ ಸಮಯದಲ್ಲಿ ಒಂದು ಜಮೀನಿನಿಂದ ಮತ್ತೊಂದು ಜಮೀನಿಗೆ ಹೋಗಲು ಚಿರತೆ ರಸ್ತೆ ದಾಟುತ್ತಿದ್ದಾಗ ವಾಹನ ಡಿಕ್ಕಿಯಾದ ಪರಿಣಾಮ ಒಂದು ವರ್ಷದ ಗಂಡು ಚಿರತೆ ರಸ್ತೆಯಲ್ಲಿಯೇ ಮೃತಪಟ್ಟಿದೆ.
ಇದನ್ನೂ ಓದಿ: ಮೈಸೂರು| ಅಗ್ನಿ ಅವಘಡ: ವೃದ್ಧ ಸಜೀವ ದಹನ
ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಪರಿಶೀಲನೆ ನಡೆಸಿ ಚಿರತೆಯ ಮೃತದೇಹವನ್ನು ಹ್ಯಾಂಡ್‌ಪೋಸ್ಟ್‌ನ ಅರಣ್ಯ ಇಲಾಖೆ ಕಚೇರಿಯಲ್ಲಿ, ಮರಣೋತ್ತರ ಪರೀಕ್ಷೆ ನಡೆಸಿ, ಕೇಸು ದಾಖಲು ಮಾಡಿಕೊಂಡಿದ್ದಾರೆ.





