ಮೈಸೂರು: ಈ ಆದರೆ ಪ್ರತಾಪ್ ಸಿಂಹಗೆ ಟಿಕೆಟ್ ಸಿಗದ ಕಾರಣ, ಒಕ್ಕಲಿಗರು ಕಾಂಗ್ರೆಸ್ ಗೆ ಬೆಂಬಲ ಘೋಷಿಸಿದ್ದಾರೆ. ಈ ಬಾರಿ ನಾವೂ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರನ್ನು ಬೆಂಬಲಿಸುತ್ತೇವೆ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗರು ಎಂಬ ಕಾರಣಕ್ಕೆ ಮೈಸೂರಿನಲ್ಲಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಿದೆ. ಲಕ್ಷ್ಮಣ್ ಅವರು ಒಕ್ಕಲಿಗರಲ್ಲ ಎಂದು ಕೆಲವರು ಆರೋಪ ಮಾಡಿದರು. ಲಕ್ಷ್ಮಣ್ ಅವರು ಒಕ್ಕಲಿಗರೇ. ಅವರು ಒಕ್ಕಲಿಗರ ಸಂಘದಿಂದ ಸ್ಪರ್ಧೆ ಮಾಡಿದ್ದಾರೆ.
ಬಿಜೆಪಿ ಒಕ್ಕಲಿಗರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ. ಹೀಗಾಗಿಯೇ ನಾವೂ ಲಕ್ಷ್ಮಣ್ ಅವರಿಗೆ ಬೆಂಬಲ ನೀಡುತ್ತಿದ್ದೇವೆ. ಲಕ್ಷ್ಮಣ್ ಕಾಂಗ್ರೆಸ್ ಅಭ್ಯರ್ಥಿ ಎಂದು ಬೆಂಬಲಿಸುತ್ತಿಲ್ಲ. ಪ್ರತ್ಯೇಕ ಅಗಿ ಬೆಂಬಲ ನೀಡಿದ್ದೇವೆ ಎಂದಿದ್ದಾರೆ.
ಮೈಸೂರಿನಲ್ಲಿ ಇತ್ತಿಚೆಗೆ ನಡೆದ ಪ್ರಚಾರ ಕಾರ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಒಕ್ಕಲಿಗ ಎಂಬ ಕಾರ್ಡ್ ಪ್ರದರ್ಶಿಸಿದರು. ಲಕ್ಷ್ಮಣ್ ಅವರನ್ನು ಒಕ್ಕಲಿಗ ಎಂಬುದನ್ನು ಬಿಂಬಿಸಿದರು. ಪ್ರಚಾರದ ನಡುವೆ ಅದನ್ನೇ ಒತ್ತಿ ಒತ್ತಿ ಹೇಳಿದರು.
ಆದರೆ ಇದಕ್ಕೆ ವಿರುದ್ಧವಾಗಿ ಬಿಜೆಪಿ ನಾಯಕರು ಲಕ್ಷ್ಮಣ್ ಒಕ್ಕಲಿಗನಲ್ಲ ಎಂಬುದನ್ನು ಸಾಬೀತು ಮಾಡಲು ಪ್ರಯತ್ನಿಸಿದರು. ಇದೀಗ ಸಿದ್ದರಾಮಯ್ಯ ಚಲಾಯಿಸಿದ ಕಾರ್ಡ್ ಸಕ್ಸಸ್ ಆಗಿದೆ.