ಎಚ್.ಡಿ.ಕೋಟೆ : ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಕೋಳಿ ಫಾರಂನಲ್ಲಿ ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕರೊಬ್ಬರ ಐದು ವರ್ಷದ ಬಾಲಕಿ ಸಾವನ್ನಪ್ಪಿದ್ದರೆ, ಮತ್ತೊಬ್ಬ ಬಾಲಕಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಬಿಹಾರ್‌ನ ಜಹಾದ್ ಮತ್ತು ಸಂಗೀತ ದಂಪತಿಯ ಪುತ್ರಿ ಸಂಜನಾ (೫) ಮೃತಪಟ್ಟಿರುವ ಬಾಲಕಿ.
ಇದನ್ನು ಓದಿ: ಹುಲಿ ದಾಳಿಗೆ ಹಸು ಸಾವು
ಬಿಹಾರದ ಅನೇಕ ಕೂಲಿಕಾರ್ಮಿಕರು ತಾಲ್ಲೂಕಿನ ಅನೇಕ ಕೋಳಿ ಫಾರಂಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತಾಲ್ಲೂಕಿನ ಆಲನಹಳ್ಳಿ ಗ್ರಾಮದ ವ್ಯಾಪ್ತಿಯ ಸಪ್ತಗಿರಿ ಕೋಳಿಫಾರಂನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಹದ್ ಮತ್ತು ಸಂಗೀತ ದಂಪತಿಯ ಪುತ್ರಿ ಸಂಜನಾ ಮತ್ತು ಇವರ ಸಂಬಂಧಿಕರ ಪುತ್ರಿ ಸವಿತಾ (೫) ಆಟವಾಡುತ್ತಿದ್ದಾಗ ಫಾರಂನಲ್ಲಿ ಕೆಲಸದ ನಿಮಿತ್ತ ಬಂದಿದ್ದ ಟ್ರಾಕ್ಟರ್ ಚಾಲಕನ ಅಜಾಗರೂಕತೆಯಿಂದ ಈ ಮಕ್ಕಳ ಮೇಲೆ ಹರಿಸಿದ ಪರಿಣಾಮ ಸಂಗೀತ ಸ್ಥಳದಲ್ಲೇ ಸಾವನಪ್ಪಿದ್ದಾಳೆ. ಸವಿತಾ ತೀವ್ರವಾಗಿ ಗಾಯಗೊಂಡಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಟ್ರಾಕ್ಟರ್ ಚಾಲಕ ಟ್ರಾಕ್ಟರ್ ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಗಂಗಾಧರ್ ದೂರು ದಾಖಲಿಸಿಕೊಂಡಿದ್ದಾರೆ.



