ಹುಣಸೂರು : ತಾಲೂಕಿನ ಚಿಕ್ಕಾಡಿಗನಹಳ್ಳಿಯ ಸುತ್ತಮುತ್ತ ಆಗಾಗ ರೈತರಿಗೆ ಕಾಣಿಸಿಕೊಂಡು ಭೀತಿ ಹುಟ್ಟಿಸಿದ್ದ ಹುಲಿ ಮರಿ ಸೆರೆಯಾಗಿದೆ.
ಗ್ರಾಮದಲ್ಲಿ ಆಗಾಗ ತಾಯಿ ಹುಲಿ ತನ್ನ ಮೂರು ಮರಿಗಳೊಂದಿಗೆ ಕಾಣಿಸಿಕೊಂಡು ಆತಂಕ ಸೃಷ್ಠಿಸಿತ್ತು. ಈ ಹಿನ್ನೆಲೆ ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು. ಒಂದು ಗಂಡು ಹುಲಿ ಮರಿ ಸೆರೆಯಾಗಿದೆ. ತಾಯಿ ಹುಲಿ ಎರಡು ಮರಿಗಳಿಗಾಗಿ ಹುಡುಕಾಟ ಮುಂದುವರಿದಿದೆ.
ಇದನ್ನು ಓದಿ: ಎಐ ಹುಲಿ ಹಾವಳಿಗೆ ಹೈರಾಣಾದ ಜನತೆ: ಕಿಡಿಗೇಡಿಗಳಿಗೆ ವಾರ್ನಿಂಗ್ ಕೊಟ್ಟ ಅರಣ್ಯ ಇಲಾಖೆ
ಬಿಳಿಕೆರೆಯ ಚಿಕ್ಕಾಡಿಗನಹಳ್ಳಿ ಹಾಗೂ ಇಲವಾಲ ಹೋಬಳಿ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ದೊಡ್ಡಕಾಡನಹಳ್ಳಿ, ರಟ್ನಳ್ಳಿ, ಹೊಸಕಾಮನಕೊಪ್ಪಲು, ಹಳೇಕಾಮನಕೊಪ್ಪಲು, ಈರಪ್ಪನಕೊಪ್ಪಲು ಸುತ್ತಮುತ್ತಲ ಗ್ರಾಮಗಳಲ್ಲಿ ಹುಲಿ ಹಾಗೂ ಮರಿ ಓಡಾಡುತ್ತಿರುವ ಮಾಹಿತಿ ಲಭ್ಯವಾಗಿದೆ.





