ಎಚ್.ಡಿ.ಕೋಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು ಹಾಕಿದೆ.
ಇಂದು ಸಂಜೆ 5ಗಂಟೆ ಸಮಯದಲ್ಲಿ ಹೊಲದಲ್ಲಿ ಕಟ್ಟಿಹಾಕಿದ್ದ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಹಸುವಿನ ಕಿರುಚಾಟ ಕೇಳಿ ಅಕ್ಕಪಕ್ಕದ ಜಮೀನಿನವರು ಓಡಿ ಬಂದು ಕಿರುಚಾಟ ಮಾಡಲಾಗಿ ಹುಲಿ ಅಲ್ಲಿಂದ ಕಾಲ್ ಕಿತ್ತು ಓಡಿಹೋಗಿದೆ.
ಹುಲಿಗಳನ್ನ ಸೆರೆ ಹಿಡಿಯಲಾಗಿದೆ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಜನಕ್ಕೆ ಇದೀಗ ಮತ್ತೆ ಹುಲಿಯ ಕಾಟ ಶುರುವಾಗಿದೆ. ಒಟ್ಟಿನಲ್ಲಿ ಕೋಟೆ ಮತ್ತು ಸರಗೂರು ಜನತೆಗೆ ಹುಲಿಯ ಉಪಟಳಕ್ಕೆ ಬೆಚ್ಚಿ ಬೇರಗಾಗುತ್ತಿರುವುದಂತು ಸತ್ಯ.




