ಮೈಸೂರು: ಮನೆಯ ಡೋರ್‌ಲಾಕ್ ಮೀಟಿ ಒಳ ನುಗ್ಗಿರುವ ಕಳ್ಳರು, ಮನೆಯಲ್ಲಿದ್ದ 2 ಲಕ್ಷ ರೂ. ನಗದು, 1.50 ಲಕ್ಷ ರೂ. ಚಿನ್ನಾಭರಣ ಹಾಗೂ 25 ಸಾವಿರ ರೂ. ಬೆಳ್ಳಿ ಪದಾರ್ಥಗಳನ್ನು ಕದ್ದೊಯ್ದಿದ್ದಾರೆ.
ತಾಲ್ಲೂಕಿನ ಕಾಮನಕೆರೆ ಗ್ರಾಮದ ನಿವಾಸಿ ಅಭಿಷೇಕ್ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ. ಅವರು ಜು.2 ರಂದು ಶ್ರೀರಾಂಪುರದಲ್ಲಿನ ತಮ್ಮ ಸತ್ತೆಯ ಮನೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.
ಜ್ಯೋತಿಷಿ ಗಿರುವ ಅಭಿಷೇಕ್ ಅವರು ಜೂ.೨ ರಂದು ಸಂಜೆ ಶ್ರೀರಾಂಪುರದಲ್ಲಿರುವ ತಮ್ಮ ಅತ್ತೆಯ ಮನೆಗೆ ತೆರಳಿ ಅಲ್ಲಿಯೇ ಉಳಿದುಕೊಂಡಿದ್ದರು. ಮಾರನೆಯ ದಿನ ಬೆಳಿಗ್ಗೆ ಮನೆಗೆ ಬಂದು ನೋಡಿದ ವೇಳೆ ಕಳ್ಳತನವಾಗಿರುವುದು ಗೊತ್ತಾಗಿದೆ.
ಖದೀಮರು ಮನೆಯಲ್ಲಿ ಇದ್ದ 31 ಗ್ರಾಂ ಚಿನ್ನಾಭರಣ, ನಗದು ಹಾಗೂ 250 ಗ್ರಾಂ ಬೆಳ್ಳಿ ಪದಾರ್ಥಗಳನ್ನು ಕದ್ದೊಯ್ದಿದ್ದಾರೆ. ಈ ಸಂಬಂದ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





