ಮೈಸೂರು : ಉರಿಗೌಡ,ನಂಜೇಗೌಡ ವಿವಾದದ ಬಗ್ಗೆ ಯಾವುದೇ ಚರ್ಚೆ ಮಾಡಬಾರದು ಎಂಬ ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆಗೆ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಸ್ವಾಮೀಜಿಗಳ ಬಗ್ಗೆ ನನಗೆ ಗೌರವ ಇದೆ.ಆದರೆ ಉರಿಗೌಡ,ನಂಜೇಗೌಡ ಬಗ್ಗೆ ಚರ್ಚೆ ನಡೆಯದಂತೆ ಮಾಡಿದ್ದು ಸರಿಯಲ್ಲ ಈ ಬಗ್ಗೆ ಸಂಶೋಧನೆ ನಡೆಯಲಿ ಎನ್ನಬೇಕಿತ್ತು” ಎಂದು ಕಾರ್ಯಪ್ಪ ಹೇಳಿದ್ದಾರೆ.
“ಅವರು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸ್ವಾಮೀಜಿ. ಬೇರೆ ಜಾತಿಗಳಿಗೆ ಅಲ್ಲ.ಒಕ್ಕಲಿಗ ಸಮುದಾಯ ರಕ್ಷಣೆ ಮಾಡುವುದು ಅವರ ಕೆಲಸ.ಹಾಗಂತ ಉರಿಗೌಡ,ನಂಜೇಗೌಡ ಕುರಿತು ಚರ್ಚೆ ನಡೆಯಲೇ ಬಾರದು ಅಂತಾ ಹೇಳಿದ್ದು ಸರಿಯಲ್ಲ”ಎಂದಿದ್ದಾರೆ.
“ಸ್ವಾಮೀಜಿಗಳು ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರ ಬೆನ್ನಿಗೆ ನಿಂತರು.ಆಗಾಗ ಡಿಕೆಶಿ ಅವರನ್ನ ಕರೆದು ಕುಮಾರಸ್ವಾಮಿ ನಮ್ಮವ,ಅವರ ಸರ್ಕಾರ ಬೀಳದಂತೆ ನೋಡಿಕೊ ಎಂದು ಹೇಳಿದ್ದರು”ಎಂದು ಗಂಭೀರ ಆರೋಪ ಮಾಡಿರುವ ಅವರು,ಅವರಿಗೆ ಕುಮಾರಸ್ವಾಮಿ,ಡಿಕೆಶಿ ಮಾತ್ರ ಒಕ್ಕಲಿಗ ನಾಯಕರು,ಸಿ.ಟಿ.ರವಿ,ಅಶ್ವತ್ ನಾರಾಯಣ್ ಅವರೆಲ್ಲ ಅದೇ ಸಮುದಾಯದವರಾದರೂ ಸ್ವಾಮೀಜಿಗೆ ಬೇಕಿಲ್ಲ ಎಂದಿದ್ದಾರೆ.
ನಿರ್ಮಲಾನಂದನಾಥ ಸ್ವಾಮೀಜಿ ಅವರು ವಿವಾದದ ಬಗ್ಗೆ ಚರ್ಚೆ ಮಾಡಬಾರದು,ಎಂದು ಹೇಳಿದ ಬಳಿಕವೂ ಸಿ.ಟಿ ರವಿ ಹಾಗೂ ಇನ್ನಿತರೆ ನಾಯಕರು ಮಾತನಾಡುತ್ತಲೇ ಇದ್ದಾರೆ.ಅದರ ಮುಂದುವರಿದ ಭಾಗವಾಗಿ ಈಗ ಅಡ್ಡಂಡ ಕಾರ್ಯಪ್ಪ ಮಾತನಾಡಿದ್ದಾರೆ.
ನಿರ್ಮಲಾನಂದನಾಥ ಸ್ವಾಮೀಜಿ ಏನು ಹೇಳಿದ್ದರು..?
ಇತೀಚೆಗೆ ಉರಿಗೌಡ ನಂಜೇಗೌಡ ವಿವಾದ ತೀವ್ರ ಸ್ವರೂಪ ಪಡೆದಾಗ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಯಾರೂ ಕೂಡ ಈ ಬಗ್ಗೆ ಹೆಚ್ಚು ಚರ್ಚೆ ಮಾಡಬಾರದು ಎಂದು ಹೇಳಿದ್ದರು.
ಸಿ.ಟಿ.ರವಿ ಇರಲಿ ಅಶ್ವಥ್ ನಾರಾಯಣ್,ಗೋಪಾಲಯ್ಯ ಯಾರೇ ಇರಲಿ ಯಾರೆಲ್ಲ ಈ ವಿಷಯದಲ್ಲಿ ಮಅತನಾಡುತ್ತಿದ್ದಾರೋ ವರೆಲ್ಲರೂ ಸುಮ್ಮನಾಗಬೇಕು.
ಕಲ್ಪನೆ ಮಾಡಿಕೊಂಡು ಬರೆಯುವುದು ಕಾದಂಬರಿ ಆಗುತ್ತದೆ.ಶಾಸನಗಳು ಮತ್ತು ಇತಿಹಾಸದ ಹಿನ್ನೆಲೆಯನ್ನು ಇಟ್ಟುಕೊಂಡು ಬರೆಯುವುದು ಕಾಂಬರಿ ಆಗುತ್ತದೆ.ಶಾಸನಗಳು ಮತ್ತು ಇತಿಹಾಸದ ಹಿನ್ನೆಲೆಯನ್ನು ಇಟ್ಟುಕೊಂಡು ಬರೆದಿರುವುದು ಮುಂದಿನ ಪೀಳಿಗೆಗೆ ಒಂದಿಷ್ಟು ಶಕ್ತಿಯಾಗುತ್ತದೆ.ಅಂತಹದ್ಯಾವುದೂ ಇದುವರೆಗೆ ಕಂಡುಬಾರದೇ ಇರುವುದರಿಂದ ಹೇಳಿಕೆಗಳ ಮೂಲಕ ಯವಕರಲ್ಲಿ ಮತ್ತು ಸಮಕಾಲೀನರಲ್ಲಿ ಜಗತ್ತಿನಲ್ಲಿ ಗೊಂದಲವನ್ನು ಸೃಷ್ಠಿ ಮಾಡಿ ವ್ಯಕ್ತಿಗಳ ಶಕ್ತಿಯನ್ನು ಹಾಳು ಮಾಡಬಹುದು,ಸಮುದಾಯಕ್ಕೆ ಧಕ್ಕೆಯನ್ನು ಕೂಡ ತರಬಾರದು.ಇನ್ನು ಮುಂದುವರಿದು,ಯಾವ ವಿಚಾರ ಪ್ರಸ್ತಾಪ ಆಗುತ್ತಿದೆಯೋ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಉರಿಗೌಡರು ಮತ್ತು ನಂಜೇಗೌಡರ ಬಗೆಗೆ ಇತಿಹಾಸವನ್ನು ಸಾರುವಂತಹ ನಮೂದು ಆಗಿರುವಂತಹ ಅತವಾ ಶಾಸನಗಳು ಸಿಕ್ಕಿದ್ದೇ ಆದರೇ ಶ್ರೀ ಕ್ಷೇತ್ರಕ್ಕೆ ತಂದುಕೊಡಿ ಅದರಲ್ಲಿ ಎಲ್ಲವನ್ನೂ ಕ್ರೂಢಿಕರಿಸಿ,ಯಾಕೆಂದರೆ ಶಾಸನ ತಜ್ಙರು ಇರುತ್ತಾರೆ ಕಾರ್ಬನ್ ಡೇಟಿಂಗ್ ಟೆಕ್ನಾಲಜಿ ನಮ್ಮಲ್ಲಿದೆ.ಇತಿಹಾಸವನ್ನು ವಿಮರ್ಶೆ ಮಾಡುವ ಐತಿಹಾಸಿಕ ಶ್ರೇಷ್ಠ ವಿಮರ್ಶಕರು ಇದ್ದಾರೆ.ಇವರನ್ನೆಲ್ಲ ಇಟ್ಟುಕೊಂಡು ತಂದುಕೊಟ್ಟ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಒರೆಗೆ ಹಚ್ಚಿ ನಂತರ ಒಂದು ನಿರ್ಧಾರಕ್ಕೆ ಬರಲಾಗುತ್ತದೆ.ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಗೊಂದಲಕ್ಕೆ ಮತ್ತು ಸಮುದಾಯದ ಬಾವನೆಗಳಿಗೆ ಧಕ್ಕೆ ತರುವಂಥ ಕೆಲಸ ಆಗುತ್ತಿದೆ.ಇದನ್ನು ತಕ್ಷಣ ನಿಲ್ಲಿಸಬೇಕು ಎನ್ನುವುದು ನಮ್ಮ ಆಗ್ರಹ ಎಂದಿದ್ದರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.