Mysore
27
overcast clouds

Social Media

ಬುಧವಾರ, 06 ಮೇ 2026
Light
Dark

ಜನಗಣತಿ ಮಾಡುವ ವೇಳೆಯೇ ಹೃದಯಾಘಾತ: ಶಿಕ್ಷಕ ಸಾವು

ಕೆ.ಆರ್.ನಗರ: ಜನಗಣತಿ ಮಾಡುವ ವೇಳೆ ಸರ್ಕಾರಿ ಶಾಲೆಯ ಶಿಕ್ಷಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಪಟ್ಟಣದ ಕುವೆಂಪು ಬಡಾವಣೆಯಲ್ಲಿ ನಡೆದಿದೆ. ಮೃತಪಟ್ಟ ಶಿಕ್ಷಕನನ್ನು ಚಿಕ್ಕನಾಯಕನಹಳ್ಳಿ ಗ್ರಾಮದ ಸಿ.ಕೆ.ರಂಗನಾಥ್ ಎಂದು ಗುರುತಿಸಲಾಗಿದೆ.

ಶಿಕ್ಷಕ ಸಿ.ಕೆ.ರಂಗನಾಥ್‌ ಅವರು ಹುಣಸೂರು ತಾಲ್ಲೂಕಿನ ಗಾವಡಗೆರೆ ಹೋಬಳಿಯ ಮುಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಶಿಕ್ಷಣ ಇಲಾಖೆ ಸಿ.ಕೆ.ರಂಗನಾಥ್ ಅವರನ್ನು ಜನಗಣತಿ ಮಾಡಲು ನಿಯೋಜಿಸಿತ್ತು. ಇಂದು ಬೆಳಗ್ಗೆ ಪಟ್ಟಣದ ಕುವೆಂಪು ಬಡಾವಣೆಯಲ್ಲಿ ಜನಗಣತಿ ಮಾಡುವ ವೇಳೆ ಅವರಿಗೆ ಹೃದಯಘಾತವಾಗಿದ್ದು, ಸ್ಥಳೀಯರು ತಕ್ಷಣವೇ ಪಟ್ಟಣದ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆ ಕರತಂದರೂ ಯಾವುದೇ ಪ್ರಯೋಜನವಾಗಲಿಲ್ಲ.

ಇವರು ಪಟ್ಟಣದ ಕೊಳಲು ರಸ್ತೆಯ ಕುವೆಂಪು ಬಡಾವಣೆಯಲ್ಲಿ ವಾಸವಾಗಿದ್ದರು. ಇವರ ಪಾರ್ಥಿವ ಶರೀರವನ್ನು ಸ್ವಗ್ರಾಮ ಚಿಕ್ಕನಾಯಕನಹಳ್ಳಿ ಗ್ರಾಮಕ್ಕೆ ಕೊಂಡೋಯ್ದು ಅಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

 

 

 

 

 

Tags:
error: Content is protected !!