ತಿ.ನರಸೀಪುರ: ತಾಲ್ಲೂಕಿನ ಮುತ್ತತ್ತಿ ಗ್ರಾಮದ ಇನ್ನಾಯತ್ ಹುಸೇನ್ ಎಂಬವರ ಮಾವಿನ ತೋಟದಲ್ಲಿ ಹಲವು ದಿನಗಳ ಹಿಂದೆ ಇಟ್ಟಿದ್ದ ಬೋನಿನಲ್ಲಿ ಗುರುವಾರ ರಾತ್ರಿ ಎರಡು ವರ್ಷದ ಗಂಡು ಚಿರತೆ ಸೆರೆಯಾಗಿದೆ,
ಮುತ್ತತ್ತಿ ಗ್ರಾಮದಲ್ಲಿ ಚಿರತೆ ಓಡಾಡುತ್ತಿದೆ ಎಂಬ ಗ್ರಾಮಸ್ಥರ ದೂರಿನ ಅನ್ವಯ ಇನ್ನಾಯತ್ ಹುಸೇನ್ ಎಂಬುವರ ತೋಟದಲ್ಲಿ ಬೋನು ಇರಿಸಲಾಗಿತ್ತು. ಗುರುವಾರ ರಾತ್ರಿ ಈ ಗಂಡು ಚಿರತೆ ಬೋನಿನಲ್ಲಿ ಬಿದ್ದಿದೆ. ಹುಸೇನ್ ತೋಟದ ಪಕ್ಕದ ಜಮೀನಿನ ಮಾಲೀಕ ದಿಲೀಪ್ ಎಂಬುವರು ಬೆಳಿಗ್ಗೆ ಜಮೀನಿಗೆ ಬಂದಾಗ ಬೋನಿಗೆ ಚಿರತೆ ಬಿದ್ದಿರುವುದನ್ನು ಗಮನಿಸಿ ಅರಣ್ಯ ಇಲಾಖೆಯವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ,
ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ, ಚಿರತೆಯನ್ನು ತಮ್ಮ ವಶಕ್ಕೆ ಪಡೆದು, ಪಟ್ಟಣದ ವಲಯ ಅರಣ್ಯ ಅಧಿಕಾರಿಗಳ ಕಚೇರಿಗೆ ತಂದಿದ್ದು, ಮೈಸೂರಿನ ಪಶು ವೈದ್ಯರಿಂದ ತಪಾಸಣೆ ನಡೆಸಿ, ಅರಣ್ಯ ಇಲಾಖೆಯ ಮೇಲಧಿಕಾರಿಗಳ ಆದೇಶದ ಮೇರೆಗೆ ಅರಣ್ಯಕ್ಕೆ ಬಿಡಲಾಗುವುದು ಎಂದು ಉಪ ವಲಯ ಅರಣ್ಯ ಅಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ತಾಲೂಕಿನ ಮುತ್ತತ್ತಿ ಗ್ರಾಮದಲ್ಲಿ ಇಲ್ಲಿಯವರೆಗೂ ಒಟ್ಟು ಏಳು ಚಿರತೆಗಳನ್ನು ಆಗಿದೆ, ದಿಲೀಪ್ ಎಂಬುವರ ತೋಟದಲ್ಲಿ ಐದು ವಿರತೆಗಳನ್ನು ಸೆಡೆ ಹಿಡಿಯಲಾಗಿದ್ದು, ಹಾಗೂ ಇನ್ನಾಯತ್ ಹುಸೇನ್ ಎಂಬುದು ತೋಟದಲ್ಲಿ ಜುಲೈ 11ರಂದು ಎರಡು ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿತ್ತು, ಇಂದು ಎರಡು ವರ್ಷದ ಗಂಡು ಚಿರತೆ ಬನಿಗೆ ಬೀಳುವ ಮೂಲಕ ಇವರ ತೋಟದಲ್ಲಿ ಎರಡು ಚಿರುತೆಗಳು ಸರಿಯಾಗಿವೆ ಎಂದು ತಿಳಿದು ಬಂದಿದೆ.
ಮತ್ತೆ ಈ ಸ್ಥಳದಲ್ಲಿ ಬೋನನ್ನು ಇಡಲಾಗಿದೆ, ಮುತ್ತುತ್ತಿಯ ಗ್ರಾಮಸ್ಥರು ಕತ್ತಲಾದ ಮೇಲೆ ಜಮೀನ ಬಳಿ ತಿರುಳಲು ಭಯಭೀತರಾಗಿದ್ದಾರೆ,
ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿಗಳಾದ ಉಮೇಶ್, ನಾಗರಾಜು, ಅರಣ್ಯ ಇಲಾಖೆಯ ನಾಗರಾಜು, ಲೋಕೇಶ್ ಹಾಗೂ ಸಿಬ್ಬಂದಿ ವರ್ಗದವರು ಭೇಟಿ ನೀಡಿದ್ದರು.