ಯೋಗಾಭ್ಯಾಸ ಓದಿಗೆ ಪೂರಕ: ನಂದೀಶ್

ಕೆ.ಆರ್‌ ನಗರ:  ಇಂದಿನ ವಿದ್ಯಾರ್ಥಿಗಳು ಮೊಬೈಲ್‌, ಟಿ.ವಿ.ನೋಡುವುದರಲ್ಲಿ ಹೆಚ್ಚಿನ ಸಮಯ ಕಳೆಯತ್ತಿದ್ದಾರೆ. ವಿದ್ಯಾರ್ಥಿಗಳ ಓದಿಗೆ ಯೋಗಾಭ್ಯಾಸ ಪೂರಕವಾಗಲಿದ್ದು ಎಲ್ಲಾ ವಿದ್ಯಾರ್ಥಿಗಳು ಪ್ರತಿದಿನ ಮನೆಯಲ್ಲಿ ಅರ್ಧ ಗಂಟೆ ಯೋಗಾಭ್ಯಾಸ ಮಾಡಿ ಎಂದು ಲಯನ್ಸ್‌ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಟಿ.ಪಿ ನಂದೀಶ್‌ ಮಕ್ಕಳಿಗೆ ಕಿವಿಮಾತು ಹೇಳಿದರು.

ಪಟ್ಟಣದ ಲಯನ್ಸ್ ವಿದ್ಯಾ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗಾ ದಿನಚರಣೆಯ ಅಂಗವಾಗಿ ಶಾಲಾ ಮಕ್ಕಳ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ಮಕ್ಕಳು ಓದಿಗೆ ಪೂರಕವಾಗುವ ದಾರಿಗಳನ್ನು ಹುಡುಕಿಕೊಳ್ಳಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇರುವುದರಿಂದ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಯೋಗಾಭ್ಯಾಸದಲ್ಲಿ ಮುಖ್ಯ ಶಿಕ್ಷಕರುಗಳಾದ ಎಲ್.ಎಸ್.ಲೋಕೇಶ್, ಜಿ.ರಮೇಶ್, ಶಿಕ್ಷಕರಾದ ಅನಿಲ್ ಕುಮಾರ, ಬಿ.ಎಸ್.ಹರೀಶ್, ಹೆಚ್.ದಿವಾಕರ್, ಸಿ.ರಾಮೇಗೌಡ, ಎ.ಎಸ್.ಅಶ್ವಿನಿ, ನಳಿನಿ, ಆಶಾ, ನಂದಿನಿ. ಸುಜಾತ, ಗಾಯತ್ರಿ, ಎಂಕೆ.ರುಕ್ಮಿಣಿ,ಯೋಗೇಶ್, ವನಾಜಾಕ್ಷಿ, ಬೀಬಿಜಾನ್, ಕೆ.ಆರ್.ವಿನುತ ಇದ್ದರು.

ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕಿ ಪಾರ್ವತಿ ಯೋಗಾಭ್ಯಾಸ ಮಾಡಿಸಿದರು.

Tags: