ಮೈಸೂರು : ರಾಜ್ಯ ಸರ್ಕಾರದ ವತಿಯಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ವ್ಯಾಪ್ತಿಯಲ್ಲಿ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಅರ್ಹ ಗ್ರಾಹಕರ ವಿದ್ಯುತ್ ಸ್ಥಾವರಗಳಿಗೆ 1995.18 ಕೋಟಿ ರೂ. ಹಾಗೂ ಕೃಷಿ ನೀರಾವರಿ ಪಂಪ್ ಸೆಟ್ ವಿದ್ಯುತ್ ಸ್ಥಾವರಗಳಿಗೆ 6717.79 ಕೋಟಿ ರೂ.ಗಳ ಸಹಾಯ ಧನವನ್ನು ಬಿಡುಗಡೆ ಮಾಡಲಾಗಿದೆ.
ಸೆಸ್ಕ್ ವ್ಯಾಪ್ತಿಗೆ ಒಳಪಡುವ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ 2317781 ಗ್ರಾಹಕರು ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ನೊಂದಣಿಯಾಗಿದ್ದಾರೆ. ಸದರಿ ಯೋಜನೆ ಅಡಿಯಲ್ಲಿ ನೊಂದಣಿಯಾಗಿರುವ ಅರ್ಹ ಗ್ರಾಹಕರ ವಿದ್ಯುತ್ ಸ್ಥಾವರಗಳಿಗೆ 2023ರ ಆಗಸ್ಟ್‌ನಿಂದ 2025ರ ಜೂನ್‌ವರೆಗೆ 1995.18 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಮೈಸೂರು ಜಿಲ್ಲೆಯ 900148 ಗ್ರಾಹಕರಿಂದ 872.14 ಕೋಟಿ ರೂ.ಗಳು, ಚಾಮರಾಜನಗರ ಜಿಲ್ಲೆಯ 264749 ಗ್ರಾಹಕರಿಂದ 186.28 ಕೋಟಿ ರೂ.ಗಳು, ಕೊಡಗು ಜಿಲ್ಲೆಯ 154290 ಗ್ರಾಹಕರಿಂದ 149.85 ಕೋಟಿ ರೂ.ಗಳು, ಮಂಡ್ಯ ಜಿಲ್ಲೆಯ 480349 ಗ್ರಾಹಕರಿಂದ 393.69 ಕೋಟಿ ರೂ.ಗಳು ಹಾಗೂ ಹಾಸನ ಜಿಲ್ಲೆಯ 518245 ಗ್ರಾಹಕರಿಂದ 393.22 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಕೃಷಿ ಪಂಪ್‌ಸೆಟ್‌ಗಳಿಗೆ 6717.79 ಕೋಟಿ ರೂ. ಸಹಾಯಧನ ನೀಡಲಾಗಿದೆ
ಸೆಸ್ಕ್ ವ್ಯಾಪ್ತಿಯ 10 ಎಚ್.ಪಿ. ಮತ್ತು 10 ಎಚ್.ಪಿ. ವರೆಗಿನ ಕೃಷಿ ನೀರಾವರಿ ಪಂಪ್ ಸೆಟ್ ವಿದ್ಯುತ್ ಸ್ಥಾವರಗಳಿಗೆ 2023ರ ಮೇ ತಿಂಗಳಿನಿಂದ 2025ರ ಮೇ ತಿಂಗಳವರೆಗೆ ಮೈಸೂರು ಜಿಲ್ಲೆಯ 149472 ಗ್ರಾಹಕರಿಂದ 1528.37 ಕೋಟಿ ರೂ., ಚಾಮರಾಜನಗರ ಜಿಲ್ಲೆಯ 75815 ಗ್ರಾಹಕರಿಂದ 1042.97 ಕೋಟಿ ರೂ., ಕೊಡಗು ಜಿಲ್ಲೆಯ 9337 ಗ್ರಾಹಕರಿಂದ 91.75 ಕೋಟಿ ರೂ., ಮಂಡ್ಯ ಜಿಲ್ಲೆಯ 121935 ಗ್ರಾಹಕರಿಂದ 2287.28 ಕೋಟಿ ರೂ. ಹಾಗೂ ಹಾಸನ ಜಿಲ್ಲೆಯ 143685 ಗ್ರಾಹಕರಿಂದ 1767.42 ಕೋಟಿ ರೂ.ಗಳು ಸೇರಿದಂತೆ ಐದು ಜಿಲ್ಲೆಗಳ 500244 ಗ್ರಾಹಕರಿಂದ 6717.79 ಕೋಟಿ ರೂ.ಗಳ ಸಹಾಯಧನ ಬಿಡುಗಡೆ ಮಾಡಲಾಗಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





