Mysore
23
overcast clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಸುಬ್ರಹ್ಮಣ್ಯ ಷಷ್ಠಿ: ಈ ವರ್ಷ ಸಿದ್ದಲಿಂಗಪುರ ದೇವಸ್ಥಾನ ಜಾತ್ರಾ ಮಹೋತ್ಸವ ಇಲ್ಲ

ಮೈಸೂರು : ಡಿಸೆಂಬರ್ 18 ರಂದು ಸಿದ್ದಲಿಂಗಪುರದ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಬ್ರಮಣ್ಯ ಷಷ್ಠಿ ಅಂಗವಾಗಿ ನಡೆಯುವ ಜಾತ್ರಾ ಮಹೋತ್ಸವ ಈ ವರ್ಷ ರದ್ದಾಗಿದೆ.

ಪ್ರತಿ ವರ್ಷ ವಿಜೃಂಬಣೆಯಿಂದ ಜಾತ್ರಾ ಮಹೋತ್ಸವ ಜರುಗುತ್ತಿತ್ತು. ಆದರೆ ಈ ರ್ಷ ದೇವಾಲಯದ ಅಭಿವೃದ್ದಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆ ಈ ಬಾರಿ ಜಾತ್ರಾಮಹೋತ್ಸವ ರದ್ದುಪಡಿಸಲಾಗಿದೆ ಎಂದು ಮೇಟಗಳ್ಳಿ ಆರಕ್ಷಕ ನಿರೀಕ್ಷಕರು ಪ್ರಕಟಣೆಯಲ್ಲಿ ತಳಿಸಿದ್ದಾರೆ.

ಈ ವರ್ಷ ಅದ್ದೂರಿ ಪೂಜಾ ಕೈಂಕರ್ಯಗಳು ನಡೆಯುವುದಿಲ್ಲ. ಹೀಗಾಗಿ ಸಾರ್ವಜನಿಕರಿಗೆ, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮಾಹಿತಿ ನೀಡುವಂತೆ ಮೇಟಗಳ್ಳಿ ಠಾಣೆ ನಿರೀಕ್ಷಕರು ಸಿದ್ದಲಿಂಗಪುರ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ