ಎಚ್.ಡಿ.ಕೋಟೆ: ಹಂಪಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರವಿ ಸಂತು ಬಳಗದ ವತಿಯಿಂದ ಮೂಲಭೂತ ಸೌಕರ್ಯ ಒದಗಿಸಲಾಯಿತು.
ಶಾಲೆಗೆ ರವಿ ಸಂತು ಬಳಗದ ಪರವಾಗಿ ರಮೇಶ್ ನಾಗರಾಜ ಅವರ ಕುಟುಂಬದ ಹೆಸರಲ್ಲಿ ಸಮಗ್ರ ಅಭಿವೃದ್ಧಿ ಸಂಸ್ಥಾಪಕರಾದ ಡಾಕ್ಟರ್ ಸ್ನೇಹ ರಾಕೇಶ್ ಅವರ ನೇತೃತ್ವದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ವಾಟರ್ ಪ್ಯೂರಿಫೈಯರ್, ಜೆರಾಕ್ಸ್ ಪ್ರಿಂಟರ್, ಮಕ್ಕಳಿಗೆ ವಿದ್ಯಾ ಸಾಮಗ್ರಿ, ವಾಟರ್ ಬಾಟಲ್ಸ್ ನೀಡಲಾಯಿತು.
ಇದೇ ಸಂದರ್ಭದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ 2025ನೇ ಸಾಲಿನ ರಾಜ್ಯ ಸೇವಾ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಇದೇ ವೇಳೆ 35 ವರ್ಷಗಳ ಕಾಲ ಕುಂಚ ಕಲೆಯನ್ನು ವೃತ್ತಿಯಾಗಿಸಿಕೊಂಡು ಸೇವೆ ಮಾಡುತ್ತಿರುವ ಕಲೆ ಪ್ರಕಾಶ್ ಅವರಿಗೂ ಕೂಡ ಡಾಕ್ಟರ್ ವಿಷ್ಣುವರ್ಧನ್ ಹೆಸರಿನಲ್ಲಿ ಕುಂಚ ಕಲಾ ರತ್ನ ಪ್ರಶಸ್ತಿಯನ್ನು ಕೊಡುವುದರ ಮೂಲಕ ರವಿ ಸಂತು ಬಳಗ ಗೌರವ ಸಲ್ಲಿಸಿದೆ.
ಕಾರ್ಯಕ್ರಮದಲ್ಲಿ ರವಿ ಸಂತು ಬಳಗದ ಸುರೇಶ್ ಗೌಡ್ರು, ಶ್ರೀಕಂಠ, ರವಿ ಹಂಸಲೇಖ, ಕಿರಣ್, ಮಿಮಿಕ್ರಿ ಸುಧಾಕರ್, ಶ್ರೀನಿವಾಸ್, ಮಹಿಳಾ ಸಾಧಕಿ ಡಾಕ್ಟರ್ ಸ್ನೇಹ ರಾಕೇಶ್, ಚಂದ್ರು ಜೂನಿಯರ್ ಪುನೀತ್ ರಾಜಕುಮಾರ್, ಕಲೆ ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





